ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಮಂಗಳೂರು: ಹೆಣಗಳನ್ನೇ ತಿನ್ನುವ...ರಣಹದ್ದು ಹೆಣವಾಗುತ್ತಿದೆ...ಅರ್ಥಾತ್ ತನ್ನ ವಂಶವನ್ನು ಪೂರ್ಣವಿರಾಮದತ್ತ ಕೊಂಡೊಯ್ಯುತ್ತಿದೆ.ಹೌದು ಹದ್ದಿನ ಸಂತತಿ ಇಂದು ಕಮ್ಮಿಯಾಗತೊಡಗಿದೆ.ರಣಹದ್ದುಗಳ ಸಂತತಿ ಕ್ಷೀಣಿಸುತ್ತಿದೆ.ಇದು ಅಪಾಯದ ಅಂಚಿನಲ್ಲಿರುವ ಜೀವಿಗಳ ಸಾಲಿಗೆ ಸೇರಿಯಾಗಿಹೋಗಿದೆ...ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಹೋದರೆ ಇನ್ನು ಕೆಲವೇ ಸಮಯಗಳಲ್ಲಿ ರಣಹದ್ದು ಎಂದರೆ ಹೀಗಿತ್ತು ಎಂದು ಚಿತ್ರಗಳಲ್ಲಿ ಹದ್ದನ್ನು ತೋರಿಸುವ ಕಾಲ ಬರಲಿದೆ.ಹದ್ದಿನ ಸಂತತಿ ಅಪಾಯವನ್ನೆದುರಿಸುತ್ತಿದೆ. ನಿರಂತರವಾದ ಬೇಗೆಗಾರರ ಹಾವಳಿ, ಕೀಟನಾಶಕಗಳ ಹೆಚ್ಚಿದ ಬಳಕೆ, ಸಹಜ ವಾಸಸ್ಥಾನಗಳ ನಿರ್ನಾಮ ಈ ಪ್ರಮುಖ ಕಾರಣವೇ ಹದ್ದಿನ ಸಂತತಿ ಕ್ಷೀಣಿಸಲು ಮುಖ್ಯ ಕಾರಣವಾಗಿದೆ. ಅಳಿದು ಹೋಗುತ್ತಿರುವ ಹದ್ದಿನ ಸಂತತಿಗಳ ರಕ್ಷಣೆ ಆಗಲೇ ಬೇಕಾಗಿದೆ. ರಣಹದ್ದುಗಳ ವಂಶೋಭಿವೃದ್ಧಿಗೆ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

ರೆಡ್ ಲಿಸ್ಟ್ ನಲ್ಲಿ ಸ್ಥಾನ
ಅಂತಾರಾಷ್ಟ್ರೀಯ ನಿಸರ್ಗ ಸಂರಕ್ಷಣೆ ಒಕ್ಕೂಟ ( ಐಯುಸಿ ಎಸ್) ಸಿದ್ಧಪಡಿಸಿರುವ ಕೆಂಪು ಪಟ್ಟಿ (ರೆಡ್ ಲಿಸ್ಟ್) ಪ್ರಕಾರ ಅಳಿವಿನಂಚಿಗೆ ಸರಿದ ಹಕ್ಕಿಗಳ ಪೈಕಿ ಭಾರತದಲ್ಲಿರುವ ಬಿಳಿ ಪೃಷ್ಠದ ರಣಹದ್ದು, ಭಾರತೀಯ ರಣಹದ್ದು, ಕೆಂಪು ತಲೆಯ ರಣಹದ್ದು, ಗುಲಾಬಿ ತಲೆಯ ಬಾತುಕೋಳಿ ಪ್ರಮುಖ ಸ್ಥಾನದಲ್ಲಿದೆ.

ಟವರ್ ಕಾರಣವೇ
ಇಂದು ಹಲವು ಪಕ್ಷಿ ಪ್ರಬೇಧಗಳ, ಕೀಟಗಳ ನಾಶಕ್ಕೆ ಮೊಬೈಲ್ ಸೇರಿದಂತೆ ದೂರ ಸಂಪರ್ಕ ಟವರ್ ಗಳು ಪ್ರಮುಖ ಕಾರಣವಾಗಿವೆ ಎಂಬ ಮಾತು ಕೇಳಿಬರುತ್ತಿವೆ. ಪಕ್ಷಿ ತಜ್ಞರು ಈ ಮಾತನ್ನು ಪುಷ್ಠೀಕರಿಸುತ್ತಾರೆ. ಈ ಬಗ್ಗೆ ಸೂಕ್ತ ಸಂಶೋಧನೆಗಳು ಹೆಚ್ಚು ನಡೆಯಬೇಕು.ಸತ್ಯಾಂಶಗಳು ಹೊರಬರಬೇಕಾಗಿದೆ. ದೂರ ಸಂಪರ್ಕ ಟವರ್ ಗಳಿಂದ ಹೊರಸೂಸುವ ರೇಡಿಯೇಷನ್ ನಿಂದಾಗಿ ಹಲವು ಜೀವ ವೈವಿಧ್ಯಗಳಿಗೆ ತೊಂದರೆಗಳಾಗುತ್ತಿವೆ ಎಂಬುದು ಮೇಲ್ನೋಟಕ್ಕೆ ಗೋಚರವಾಗುವ ಸತ್ಯಾಂಶವಾಗಿದೆ.ಘಟಕ ಸ್ಥಾಪನೆ
1972ರ ವನ್ಯಜೀವಿ ಕಾಯ್ದೆಯ ಪ್ರಕಾರ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಪಕ್ಷಿಗಳು, ಅವುಗಳ ಅಂಗಾಂಗಗಳು, ಉತ್ಪನ್ನಗಳು ಸೇರಿದಂತೆ ಅಕ್ರಮ ವನ್ಯಜೀವಿ ವ್ಯಾಪಾರವನ್ನು ತಡೆಯಲು ವನ್ಯಜೀವಿ ಅಪರಾಧ ನಿಯಂತ್ರಣ ಘಟಕ ಕಾರ್ಯಾಚರಿಸುತ್ತಿದೆ.

ಏನೇ ಇರಲಿ...ಪಕ್ಷಿಗಳು, ವನ್ಯ ಪ್ರಾಣಿಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆ. ಈ ಜವಾಬ್ದಾರಿ ಕೇವಲ ಸರಕಾರದ್ದೋ, ವನ್ಯಪ್ರೇಮಿಗಳದ್ದೋ ಅಲ್ಲ. ಪ್ರತಿಯೊಬ್ಬ ನಾಗರೀಕರು ಈ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ.

- ಟೀಂ ಈ ಕನಸು.

0 comments:

Post a Comment