ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು/ಮಂಗಳೂರು/ಮೂಡಬಿದಿರೆ:ಬೆಂಗಳೂರಿನಲ್ಲಿ ಪ್ರಭಲ ಭೂಕಂಪವಾಗಿದೆ. ಇತ್ತ ಚೆನ್ನೈ, ಹೈದರಾಬಾದ್ , ತಿರುಪತಿ, ದಕ್ಷಿಣ ಕನ್ನಡ , ಅಂಡಮಾನ್ ನಿಕೋಬಾರ್ ಧ್ವೀಪ ಸೇರಿದಂತೆ ಹಲವೆಡೆಗಳಲ್ಲಿ ಭೂಮಿ ಕಂಪಿಸಿದೆ. ಇಂಡೋನ್ಯೇಷ್ಯಾದಲ್ಲಿ ಪ್ರಬಲವಾದ ಭೂಕಂಪವಾಗಿದ್ದು ರಿಕ್ಟರ್ ಮಾಪನದಲ್ಲಿ ಕಂಪನದ ಪ್ರಮಾಣ 8.9 ದಾಖಲಾಗಿದೆ. ಇದರ ಪ್ರಭಾವ ಭಾರತದ ಮೇಲೂ ಬೀರಿದೆ. ಸುನಾಮಿ ಎಚ್ಚರಿಕೆ : ಇಂಡೋನೇಷ್ಯಾದಲ್ಲಿ 2006ರ ಡಿಸೆಂಬರ್ 26ರಂದು ಭೂಕಂಪ ಸಂಭವಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ. ಈ ಭಯಂಕರ ಭೂಕಂಪ - ಸುನಾಮಿಯ ಅನಾಹುತದ ನಂತರ ಇದು ಅತ್ಯಂತ ಪ್ರಬಲ ಭೂಕಂಪ ಎಂಬುದು ಗಮನಾರ್ಹ. ಭೂಕಂಪದ ಕೇಂದ್ರಬಿಂದು ಉತ್ತರ ಸುಮಾತ್ರಾದ ಸಮುದ್ರದಲ್ಲಿ 33 ಕಿ.ಮೀ. ಆಳದಲ್ಲಿದೆ. ಸರಿಯಾಗಿ 2 ಗಂಟೆ 8 ನಿಮಿಷಕ್ಕೆ ಭೂಕಂಪ ಸಂಭವಿಸಿದೆ. ಇದೀಗ ಭಾರತದ ಪೂರ್ವಭಾಗವೂ ಸೇರಿದಂತೆ ಒಟ್ಟು 28 ರಾಷ್ಟ್ರಗಳಲ್ಲಿ ಸುನಾಮಿಯ ಭೀತಿ ಇದ್ದು ಎಚ್ಚರಿಕೆ ನೀಡಲಾಗಿದೆ.


ಸುನಾಮಿ ಬರಲಿದೆ ಜಾಗ್ರತೆ:

ಇಂಡೋನೇಷ್ಯಾದಲ್ಲಿ ಸುನಾಮಿಯ ಎಚ್ಚರಿಕೆ ನೀಡಲಾಗಿದೆ. ಜಪಾನ್, ಪಾಕಿಸ್ತಾನ, ಬಾಂಗ್ಲಾದೇಶ, ಮಲೇಶಿಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯಲ್ಲಿಯೂ ಸುನಾಮಿಯ ಎಚ್ಚರಿಕೆ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಗಡ ಗಡ
ಬೆಂಗಳೂರಿನ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ. ಇಲ್ಲಿನ
ಬೆಂಗಳೂರಿನ ಜಯನಗರ, ಕೋರಮಂಗಲ, ಇನ್‌ಫಂಟ್ರಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ಹಳೆ ಏರ್ ಪೋರ್ಟ್‌ಗಳಲ್ಲಿ ಕಂಪನದ ಅನುಭವವಾಗಿದೆ. ಕಟ್ಟಡದ ಮೇಲಂತಸ್ತಿನಲ್ಲಿರುವವರಿಗೆ ಕಂಪನದ ಅನುಭವ ಹೆಚ್ಚಾಗಿದೆ. ಹಲವು ಕಟ್ಟಡಗಳಿಂದ ಜನ ಭಯಭೀತರಾಗಿ ಹೊರಗೋಡಿ ಬಂದಿದ್ದಾರೆ. ಮಧ್ಯಾಹ್ನ 2.20ರ ಸುಮಾರಿಗೆ ಈ ಅನುಭವವಾಗಿದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲೂ ಇದೇ ಸಮಯಕ್ಕೆ ಕಂಪನವಾಗಿದ್ದು ಕಟ್ಟಡಗಳಲ್ಲಿದ್ದ ಜನ ಹೆದರಿ ಹೊರಗೋಡಿದ್ದಾರೆ.

ಚೆನ್ನೈಯಲ್ಲಿ ಪ್ರಭಲ ಕಂಪನ ಚೆನ್ನೈನಲ್ಲಿ ಪ್ರಬಲವಾದ ಭೂಕಂಪನವಾಗಿದೆ. ಹಲವು ಕಟ್ಟಡಗಳಲ್ಲಿ ಬಿರುಕು ಮೂಡಿಬಂದಿದೆ. ಸುನಾಮಿ ಎಚ್ಚರಿಕೆಯಿರುವುದರಿಂದಾಗಿ ಯಾರೂ ಕಡಲ ತೀರಕ್ಕೆ ಹೋಗದಂತೆ ಸೂಚಿಸಲಾಗಿದೆ.

0 comments:

Post a Comment