ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಮಂಗಳೂರಿನ ನಾಲ್ಕು ಕಲಾವಿದರ ಅಪೂರ್ವ ಕಲಾಪ್ರದರ್ಶನ

ಮಂಗಳೂರು ಮೂಲದ ನಾಲ್ಕು ಮಂದಿ ಖ್ಯಾತ ವೃತ್ತಿಪರ ಕಲಾವಿದರ ಚಿತ್ರಕಲಾಪ್ರದರ್ಶನ ಮುಳಿಯ ಟ್ರಸ್ಟೆಡ್ ಸೆನ್ಸಸ್ ಬೆಂಗಳೂರಿನ ಚಿತ್ರಕಲಾ ಪರಿಷತ್ನಲ್ಲಿ ಎಪ್ರಿಲ್ 12ರಿಂದ 18ರವರೆಗೆ ನಡೆಯಲಿದೆ.ಅನಿಲ್ ದೇವಾಡಿಗ, ಜೀವನ್ ಎ.ಎಸ್., ರಾಜೇಂದ್ರ ಕೇದಿಗೆ ಮತ್ತು ಸಯ್ಯದ್ ಆಸಿಫ್ ಆಲಿ ಇವರ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.ಆರ್ಟ್ ಕಾಂಪ್ಲೆಕ್ಸ್, ಕುಮಾರಕೃಪಾ ರಸ್ತೆ, ಬೆಂಗಳೂರು, ಇಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ ನ ಗ್ಯಾಲರಿ 3 ರಲ್ಲಿ ಈ ಚಿತ್ರಕಲಾಪ್ರದರ್ಶನ ಬೆಳಿಗ್ಗೆ 10.30 ರಿಂದ ಸಂಜೆ 7.30 ರವರೆಗೆ ಪ್ರದರ್ಶನ ನಡೆಯುವ ಏಳು ದಿನಗಳಲ್ಲಿ ಸಾರ್ವಜನಿಕರಿಗೆ ತೆರೆದಿರುತ್ತದೆ.

ಉದ್ಘಾಟನೆ
ಮುಳಿಯ 'ಟ್ರಸ್ಟೆಡ್ ಸೆನ್ಸಸ್' ಚಿತ್ರಕಲಾಪ್ರದರ್ಶನವನ್ನು ಉದ್ಯಮಿ ಮುಳಿಯ ಕೇಶವ ಪ್ರಸಾದ್ ಎಪ್ರಿಲ್ 12ರ ಬೆಳಿಗ್ಗೆ 10.30ಕ್ಕೆ ಉದ್ಘಾಟಿಸಲಿದ್ದಾರೆ. ಚಿ.ಸು. ಕೃಷ್ಣ ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಮತ್ತು ವೇಣು ಶರ್ಮ, ಬೆಂಗಳೂರು, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

0 comments:

Post a Comment