ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ...
ಸಾಗರಕ್ಕೆ ತಾಗಿಕೊಂಡಿರುವ ಊರು ಎಳ್ಳಾರೆ. ಅದು ಈಗ ಸಾಗರದ ಒಂದು ಭಾಗವೇ ಆಗಿದೆ ಎಂದು ಹೇಳಬಹುದು.ಅಲ್ಲಿನ ಕೃಷಿಕ ಕುಟುಂಬದ ಯುವಕ ಶ್ರೀನಿವಾಸ್. ಇವರು ಓದಿದ್ದು ಹಲವು ವರ್ಷಗಳ ಹಿಂದೆ ಏರೋನಾಟಿಕಲ್ ಇಂಜಿನಿಯರಿಂಗ್.ಹಲವಾರು ಕಾರಣಗಳಿಂದ ಅವರಿಗೆ ಪೈಲಟ್ ಆಗಿ ವೃತ್ತಿಗೆ ಸೇರಲು ಸಾದ್ಯವಾಗಲಿಲ್ಲ. ಮನೆಯಲ್ಲಿ ತೋಟ-ಗದ್ದೆ ವ್ಯವಹಾರ ನೋಡಿಕೊಂಡಿದ್ದರು. ಹಾಗೂ ತಮ್ಮ ಬಿಡುವಿನ ವೇಳೆಯಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಲೇವಾದೇವಿ ಹಾಗೂ ಕಂಪ್ಯೂಟರ್ ರಿಪೇರಿ ಮಾಡಿಕೊಡುವುದು ಮಾಡುತ್ತಿದ್ದರು.


ಇವರಿಗೆ ಇದ್ದಕ್ಕಿದ್ದಂತೆ ವಿಮಾನ ಖರೀದಿಸಿ ಹಾರಾಡುವ ಬಯಕೆ ಮೂಡಿ, ಹೆಚ್ ಎ ಎಲ್ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಮೈಕ್ರೋಲೈಟ್ ವಿಮಾನವನ್ನು ಖರೀದಿಸಿ, ಅದನ್ನು ಅಲ್ಲಿಯೇ ರಿಪೇರಿ ಮಾಡಿಸಿ ಮನೆಗೆ ತಂದರು.


ಆದರೆ ಅದನ್ನು ಹಾರಿಸಲು ಸುಮಾರು ೩೦೦ ಅಡಿಗಳ ರನ್ವೇ ಅಗತ್ಯವಿದೆ, ಅದನ್ನೆಲ್ಲ ಮಾಡಿ ನೋಡಿದರೆ ರನ್ ವೇ ತುದಿಗೆ ವಿದ್ಯುತ್ ಕಂಬ, ತಂತಿ ಹಾದು ಹೋಗಿದ್ದವು. ಅವುಗಳನ್ನೆಲ್ಲ ನಿವಾರಿಸಿ, ಹೆಜ್ಜೆ-ಹೆಜ್ಜೆಗೂ ರೆಡ್ ಟೇಪಿಸಂ ಎದುರಿಸಿ ಕೊನೆಗೂ ಜಿಲ್ಲಾಧಿಕಾರಿಯವರ ಅನುಮತಿಯನ್ನೂ ಪಡೆದು ಈ ವರ್ಷ ವಿಮಾನವನ್ನು ಹಾರಿಸಲು ಪ್ರಾರಂಭಿಸಿದ್ದಾರೆ...ನಾವೆಲ್ಲ ವಿಮಾನ ಹತ್ತುವುದು-ಹತ್ತಿಸುವುದು ಪೋಲಿಸ್ ಸ್ಟೇಷನ್ಲ್ಲಿ ಮಾತ್ರ ಎಂದುಕೊಂಡ ಕಾಲದಲ್ಲಿ ಇವರು ಹಳ್ಳಿಯಲ್ಲಿ ಹವ್ಯಾಸಕ್ಕಾಗಿ ವಿಮಾನ ಇಟ್ಟ ಮೊದಲ ಸಾಹಸಿಯಾಗಿದ್ದಾರೆ.

ಜಿತೇಂದ್ರ ಹಿಂಡುಮನೆ.

0 comments:

Post a Comment