ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ...

ಶಂಕರಃ ಶಂ ಕರೋತು ನಃ
ಒಳಿತು ಉದಿಸಬೇಕು..! ಒಳಿತು ಉಳಿಯಬೇಕು..! ಒಳಿತು ಬಾಳಬೇಕು..! ಒಳಿತು ಬೆಳೆಯಬೇಕು..! ಒಳಿತು ಬೆಳಗಬೇಕು..!
ಇದಲ್ಲವೇ ವಿಶ್ವದ ಹಿತ.. ಇದುವೇ ಅಲ್ಲವೇ ಸರ್ವರ ಸುಖ..ಜೀವನದ ಸಾರವೇ ಒಳಿತು.. ಒಳಿತಿನ ಸಾಕಾರರೂಪವೇ ಶಂಕರರು..


'ಶಂ' ಎಂದರೆ ಒಳಿತು, 'ಶಂಕರ'ರೆಂದರೆ ಒಳಿತು ಗೈವವರು. ಉಸಿರು ಉಸಿರಿನಲ್ಲಿಯೂ ವಿಶ್ವಕ್ಕೆ ಒಳಿತನ್ನೇ ಗೈದ ಆ 'ಆದಿಗುರು'ವಿನ ಆವಿರ್ಭಾವ ಕಾಲವನ್ನು ಆಚರಿಸುವುದೆಂದರೆ ನಮ್ಮ ಮೈಮನಜೀವನಗಳಿಗೆ ಒಳಿತನ್ನು ಆಮಂತ್ರಿಸಿದಂತೆಯೇ ಅಲ್ಲವೇ..?ಬನ್ನಿ.. ಶಂಕರಪಂಚಮಿಯ ಆನಂದಸಿಂಚನದಲ್ಲಿ ಮಿಂದು ಮಡಿಯಾಗೋಣ..ಒಳಿತಾಗೋಣ.. ಒಳಿತೆಸಗೋಣ..

ಏನು ಶಂಕರ ಪಂಚಮೀ ?
ಶ್ರೀಶಂಕರಭಗವತ್ಪಾದರು ಜಗತ್ತು ಕಂಡ ಅಪ್ರತಿಮ ತತ್ತ್ವಜ್ಞಾನಿ, ಜೀವ ಜಗತ್ತು ತನ್ನ ಜೀವನ ಸಿದ್ಧಾಂತವನ್ನು ಮರೆತು ತೊಳಲಾಟದಲ್ಲಿದ್ದಾಗ ಧರೆಗಿಳಿದು ಬಂದ ಜ್ಞಾನದ ಮೂರ್ತ ಸ್ವರೂಪ ಅವರು. ಅನ್ಯಾನ್ಯ ಮತಗಳು, ಮತಿಗಳನ್ನು ಕತ್ತಲೆಯ
ಕೂಪಕ್ಕೆ ತಳ್ಳಿದ ಸಂದರ್ಭದಲ್ಲಿ ಸಮುಚಿತವಾಗಿ ಸಂದರ್ಭೋಚಿತವಾಗಿ ತತ್ತ್ವದ ಬೆಳಕನ್ನು ಹರಡಿದವರು. ಅಲ್ಪಾವಧಿಯಲ್ಲಿಯೇ ಅಪಾರ ಭೂವ್ಯಾಪ್ತಿಯಲ್ಲಿ ಸಂಚರಿಸಿ, ಆಂಶಿಕ ಸತ್ಯವೆನಿಸಿದ್ಧ ಮತ ಪ್ರವವರ್ತಕರನ್ನು ಪೂರ್ಣ ಸತ್ಯ ಬೋಧದೊಂದಿಗೆ ಸುಸಂಸ್ಕರಿಸಿದವರು. ಮಹರ್ಷಿಗಳ ತಪೋಭೂಮಿಕೆಯಲ್ಲಿ ಅನಾವರಣಗೊಂಡ ಬದುಕಿನ ಶಾಶ್ವತ ಸತ್ಯವನ್ನು ಪುನಃ ಸ್ಥಾಪಿಸಿದವರು. ಇಂಥಹ ಜಗತ್ತಿನ ಪರಮೋಚ್ಚ ಜ್ಞಾನಿಯನ್ನು ಗುರುವಾಗಿಸಿಕೊಂಡ ಒಂದು ಅತ್ಯುತ್ಕೃಷ್ಟ ಪರಂಪರೆಯ ಮುಂದುವರಿದ ತುಣುಕುಗಳು ನಾವು ಎಂಬುದು ನೆನಸಿಕೊಂಡಷ್ಟೂ ಮೈರೋಮಾಂಚನಗೊಳಿಸುವ ಹೆಮ್ಮೆಯ ಸಂಗತಿ.

ಆಚಾರ್ಯ ಭಗವತ್ಪಾದರ ಜೀವನ ಮತ್ತು ಸದುಪದೇಶವನ್ನು ನಮ್ಮ ಅರಿವಿನ ವಿಷಯವನ್ನಾಗಿಸಿಕೊಳ್ಳುವ - ಆ ಅರಿವನ್ನು ಬದುಕಿನ ಉಸಿರಾಗಿಸಿಕೊಳ್ಳುವ - ಆ ಉಸಿರಿನ ಪ್ರಸರಣಕ್ಕಾಗಿ ಶ್ರಮವಹಿಸುವ ಕಾರ್ಯ ನಿತರಾಂ ನಮ್ಮ ಪ್ರಧಾನ ಕರ್ತವ್ಯ. ಈ ಕರ್ತವ್ಯವನ್ನು ನಮ್ಮಲ್ಲಿ ಪ್ರಭೋಧಗೊಳಿಸುವ ಸತ್ಕಾರ್ಯವನ್ನು ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು 'ಶಂಕರ ಪಂಚಮಿಯ' ರೂಪದಲ್ಲಿ ಲೋಕಕ್ಕೆ ಅನುಗ್ರಹಿಸಿದ್ದಾರೆ.


ಏನಿದೆ ಶಂಕರಪಂಚಮಿಯಲ್ಲಿ ?
ಗುರುಕಥಾ : ಶ್ರೀರಾಮಕಥಾ ಎಂಬ ಅಪೂರ್ವ ಕಥನ ಕ್ರಮದಿಂದ ಶ್ರೀಮದ್ರಾಮಾಯಣವನ್ನು ಲೋಕಾರ್ಪಣಗೊಳಿಸುತ್ತಿರುವ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಆದಿಗುರುವಿನ ಜೀವನಯಾನವನ್ನು ಪ್ರವಚನಗೈಯಲಿದ್ದಾರೆ. ದಿವ್ಯವೂ ಭವ್ಯವೂ ಆದ ವೇದಿಕೆಯಲ್ಲಿನ ಗುರುಕಥೆಯು ಪವಿತ್ರ ಅರ್ಚನೆ, ಉನ್ನತ ನಿರೂಪಣೆ, ಶ್ರೇಷ್ಠ ಸಾಹಿತ್ಯ, ಸುಶ್ರಾವ್ಯ ಸಂಗೀತ, ಸುಮಧುರ ವಾದನ, ವಿಶೇಷ ರೂಪಕ, ಅದ್ಭುತ ದೃಶ್ಯ ವೈಭವಗಳೆಲ್ಲದರಿಂದ ಕೂಡಿ ಆಚಾರ್ಯರ ಬದುಕು ಮತ್ತು ಸಂದೇಶವನ್ನು ಪುನರವತರಣಗೊಳಿಸಲಿದೆ.

ಶಂಕರಸಪರ್ಯಾ : ವಿದ್ವಾಂಸರಿಂದ ಶಾಂಕರಭಾಷ್ಯ ಪಾರಾಯಣ, ವೇದಪಾರಾಯಣ. ನಯನ ಮನೋಹರವಾದ 121 ಯಜ್ಞ ವೇದಿಕೆಯಲ್ಲಿ 200 ತೇಜಸ್ವೀ ಋತ್ವಿಜರು ಹಾಗೂ 1200 ಸಾತ್ತ್ವಿಕ ಗೃಹಸ್ಥರು ಸಮ್ಮಿಲಿತರಾಗಿ ನಡೆಸುವ ಅತಿರುದ್ರ ಮಹಾಯಾಗ. ಮಾತೃಸಮೂಹದಿಂದ ಏಕಕಂಠದಲ್ಲಿ ಮೊಳಗುವ ಸೌಂದರ್ಯಲಹರೀ ಪಾರಾಯಣ. ಲಲಿತಾಸಹಸ್ರನಾಮಪೂರ್ವಕ ಕುಂಕುಮಾರ್ಚನೆ. ವಿಶೇಷವಾಗಿ ಸಾಮೂಹಿಕ ಬೃಹತ್ ಶ್ರೀಶಂಕರಗುರುಪೂಜಾ.

ಶಂಕರಕಿಂಕರ ಪ್ರಶಸ್ತಿ : ತಮ್ಮ ಬದುಕನ್ನು ಶ್ರೀಶಂಕರಾಚಾರ್ಯರ ಕುರಿತಾಗಿ, ಅವರ ಚಿಂತನೆಗಳ ಪ್ರಸಾರದ ಕುರಿತಾಗಿ ಮುಡಿಪಾಗಿಟ್ಟ ವ್ಯಕ್ತಿ ಅಥವಾ ಸಂಸ್ಥೆಗೆ ಪರಮಪೂಜ್ಯ ಶ್ರೀಶ್ರೀಗಳವರು ಕೊಡಮಾಡುವ ಪ್ರಶಸ್ತಿ.
ಶಂಕರದೃಗ್ವಿಹಾರ: ಭಾರತಾದ್ಯಂತ ಸಂಚರಿಸಿದ ಆಚಾರ್ಯರ ಜೀವನವನ್ನು ದೃಶ್ಯಗಳ ಮೂಲಕ ಕಣ್ತುಂಬಿಕೊಳ್ಳಲು ಅನುವಾಗುವಂತೆ ರೂಪಿಸುವ ಕಲಾತ್ಮಕ ವಿಧಾನದ ಸ್ಮೃತಿ ಸದನ. [ಥೀಮ್ ಪಾರ್ಕ್ ]
ಶಂಕರಚಿತ್ರ : ಪ್ರತಿಗೃಹವೂ ಆಚಾರ್ಯರ ದೃಷ್ಟಿಪಾತದ ಅನುಗ್ರಹಕ್ಕೆ ಪಾತ್ರವಾಗಲು... ಗೃಹದ ಪ್ರತಿದೃಷ್ಟಿಯೂ ಭಗವತ್ಪಾದರ ದರ್ಶನ ಮಾಡಲು ಅನುವಾಗುವಂತೆ ಎಲ್ಲ ಶಿಷ್ಯಗೃಹಗಳಿಗೆ ಪರಮಪೂಜ್ಯರು ಶಂಕರಾಚಾರ್ಯರ ಚಿತ್ರವನ್ನು ಸಮುಚಿತವಾಗಿ ಅನುಗ್ರಹಿಸುತ್ತಾರೆ.
ಸ್ಪರ್ಧಾ ಶಂಕರ : ಭಗವತ್ಪಾದರ ತತ್ತ್ವ ಮತ್ತು ಸ್ತೋತ್ರಗಳ ಸ್ಪರ್ಧೆಗಳು - ಕಲಿಕಾ ಪ್ರೋತ್ಸಾಹಕ್ಕಾಗಿ
ಪುಸ್ತಕಶಂಕರ : ಆಚಾರ್ಯರ ಕುರಿತಾದ ಮತ್ತು ಆಚಾರ್ಯವಿರಚಿತ ಗ್ರಂಥಗಳ ಪ್ರದರ್ಶಿನಿ ಮತ್ತು ಮಾರಾಟ
ಶಂಕರಮಯಮ್ : ಶಂಕರಾಚಾರ್ಯರು ಬೋಧಿಸಿದ ಸಂದೇಶಗಳ ಬಿತ್ತರ... ಅಲ್ಲಿ ಇಲ್ಲಿ ಎಲ್ಲೆಲ್ಲೂ....
ಇವಷ್ಟೇ ಅಲ್ಲ... ಇನ್ನೂ ಏನೇನೋ... ಸನಾತನೀಯ ಸಂಗತಿಗಳು... ವಿನೂತನೀಯ ಕ್ರಮಗಳಲ್ಲಿ...

ಸಂಪರ್ಕ :
ಶ್ರೀ ಆರ್. ಎಸ್. ಹೆಗಡೆ, ಅಧ್ಯಕ್ಷರು, ಶಂಕರಕಿಂಕರ ವೃಂದ -9449595212
ವಿದ್ವಾನ್ ಜಗದೀಶ ಶಮರ್ಾ, ಗೌರವಕಾರ್ಯದರ್ಶಿ , ಶಂಕರಕಿಂಕರ ವೃಂದ -9449595222
ಶ್ರೀ ರಾಮಚಂದ್ರ ಭಟ್ ಕೆಕ್ಕಾರು, ಕೋಶಾಧ್ಯಕ್ಷರು, ಶಂಕರಕಿಂಕರ ವೃಂದ -9449595214
ಶ್ರೀ ಮೋಹನ ಬಾಸ್ಕರ ಹೆಗಡೆ, ಕಾರ್ಯಾಧ್ಯಕ್ಷರು, ಶಂಕರಕಿಂಕರ ವೃಂದ -9449595211
ವಿಳಾಸ :
ಶ್ರೀರಾಮದೇವ ಭಾನ್ಕುಳಿಮಠ,
ಅಂಚೆ- ಬೇಡ್ಕಣಿ, ಸಿದ್ದಾಪುರ-ತಾಲ್ಲೂಕು ಉತ್ತರಕನ್ನಡ - ಜಿಲ್ಲೆ 08389-293848

ವರದಿ: ಗೌತಮ ಬಿ.ಕೆ.

0 comments:

Post a Comment