ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
5:13 PM

ಕ್ಷಣ

Posted by ekanasu

ಸಾಹಿತ್ಯ

ಜನನ
ಒಂದು ಕ್ಷಣ
ಮರಣ
ಒಂದು ಕ್ಷಣ
ನಡುವೆ ಜೀವನ

ಮೂರು ದಿನ
ಅಲ್ಲಿ ನಡೆದು
ಹೋಗುವುದು
ಮಹಾಭಾರತ
ರಾಮಾಯಣ

* * *
ವಿಪರ್ಯಾಸ
ಒಳಗೆ ಬೇಕು ಅನ್ನ
ಹೊರಗೆ ಬೇಕು ಚಿನ್ನ
ಏನು ಇದರ ಮರ್ಮ

ಹೊರಗೆ ಕಿಸಿವ ಹಲ್ಲು
ಒಳಗೆ ಮಸೆವ ಹಲ್ಲು
ಇದು ಯಾವ ಧರ್ಮ

ತಾನೆ ಬೆಳೆದ ಅತ್ತಿ ಹಣ್ಣ
ನೋಡಿ
ನಾಚಿ ಕುಳಿತ ಬ್ರಹ್ಮ

-ಜರಗನಹಳ್ಳಿ ಶಿವಶಂಕರ್

0 comments:

Post a Comment