ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ಮೂಲ್ಕಿ: ಸಾತ್ವಿಕ ಆಹಾರ ಧನಾತ್ಮಕ ಚಿಂತನೆ,ಪ್ರಾಮಾಣಿಕ ಭಕ್ತಿಯು ಜೀವನದಲ್ಲಿ ಸಕಲೈಶ್ವರ್ಯದೊಂದಿಗೆ ಆರೋಗ್ಯ ಭಾಗ್ಯವನ್ನು ನೀಡಬಲ್ಲದು ಎಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀಮತ್ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಹೇಳಿದರು.
ಮಂಗಳವಾರ ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಕ್ಷರಲಕ್ಷ ಶ್ರೀ ನರಸಿಂಹ ಮಂತ್ರ ಯಜ್ಞ ಮತ್ತು ಸಪ್ತೋತ್ಸವದ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿನೀಡಿ ಲಘು ಪೂರ್ಣಾಹುತಿಯಲ್ಲಿ ಬಾಗವಹಿಸಿ,ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಶ್ರೀದೇವರಲ್ಲಿ ಪ್ರೀತಿ ವಿಶ್ವಾಸದ ಜೊತೆಗೆ ಸ್ವಾರ್ಥರಹಿತ ಭಕ್ತಿ ಜೀವನಲ್ಲಿ ಉನ್ನತಿಗಳಿಸಲು ಸಹಕರಿಸುವುದು ಎಂದರು.
ವೇ.ಮೂ.ಪದ್ಮನಾಭ ಭಟ್ ಸ್ವಾಗತಿಸಿದರು.ಮೊಕ್ತೇಸರರಾದ ಯು.ವೇದವ್ಯಾಸ ಶೆಣೈ ಸ್ವಾಮೀಜಿಯವರನ್ನು ದೇವಳದ ವತಿಯಿಂದ ಗೌರವಿಸಿದರು. ದೇವಳದ ದರ್ಶನ ಪಾತ್ರಿ ವಸಂತ ನಾಯಕ್ ಫಲಿಮಾರ್ಕರ್, ದೇವಳದ ಮೊಕ್ತೇಸರರು,ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠದ ಆಡಳಿತ ಮಂಡಳಿ ಸದಸ್ಯರು ಆರ್ಚಕ ವರ್ಗ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು .

ಚಿತ್ರ - ವರದಿ: ಭಾಗ್ಯವಾನ್ ಮುಲ್ಕಿ.

0 comments:

Post a Comment