ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಇದು ಅಚ್ಚರಿಯಾದ್ರೂ ಸತ್ಯ. ನಮಗೆ ಏನಾದ್ರೂ ಕಾಯಿಲೆ ಬಂದ್ರೆ ನಾವೆಲ್ಲಾ ಆಸ್ಪತ್ರೆಗೆ ಹೋಗ್ತಿವಿ. ಇಲ್ಲಾಂದ್ರೆ ಔಷಧಿ ತಗೋತಿವಿ. ಕೆಲವೊಮ್ಮೆ ಮನೇಲೇ ಏನಾದ್ರೂ ಮದ್ದು ಮಾಡ್ಕೊಂತಿವಿ. ಆದರೆ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಗ್ರಾಮದಲ್ಲಿನ ಗ್ರಾಮ ದೇವ ಹನುಮಂತನೇ ಇಲ್ಲಿ ವೈದ್ಯ...!!! ಸುತ್ತಮುತ್ತಲಿನ ಗ್ರಾಮದ ಜನರು ತಮಗೇನಾದ್ರೂ ಕಾಯಿಲೆ ಬಂದ್ರೆ ಬರೋದು ಈ ಹನುಮಂತನ ಬಳಿಯೇ. ಆದ್ದರಿಂದ ಇಂದು ಈ ದೇವಾಲಯ ಆಸ್ಪತ್ರೆಯಂತಾಗಿದೆ.

ಸುತ್ತಮುತ್ತಲಿನ ಎಲ್ಲಾ ಆಸ್ಪತ್ರೆಗಳನ್ನು ಸುತ್ತಿ ಕೊನೆಗೆ ಕಾಯಿಲೆ ವಾಸಿಯಾಗದಿದ್ದಾಗ ಇಲ್ಲಿನ ಜನ ಈ ಹನುಮಂತನಲ್ಲಿಗೆ ಬರುತ್ತಾರೆ. ಕಾಯಿಲೆ ಇರುವವರೆಲ್ಲರೂ ಇಲ್ಲಿಗೆ ಬರಲು ಸಾಧ್ಯವಿಲ್ಲ. ಅದಕ್ಕೆ ಕಟ್ಟುನಿಟ್ಟಿನ ಕೆಲ ಸಂಪ್ರದಾಯ ಹಾಗೂ ನಂಬಿಕೆಗಳಿವೆ. ಆ ಸ್ವಾಮಿ ಅಪ್ಪಣೆ ಕೊಟ್ಟರೆ ಮಾತ್ರ ಇಲ್ಲಿ ಇರಲು ಸಾಧ್ಯ.

ರೋಗಿಗಳು ಶನಿವಾರ ಹೊರತುಪಡಿಸಿ ಉಳಿದ ಯಾವುದೇ ದಿನಗಳಲ್ಲಿ ದೇವಾಲಯಕ್ಕೆ ಬಂದು ಸ್ವಾಮಿಯ ಅಪ್ಪಣೆ ಕೇಳಬೇಕು. ಅಪ್ಪಣೆ ಕೇಳುವುದು ಇಲ್ಲಿನ ಮತ್ತೊಂದು ವಿಶೇಷದ ಸಂಗತಿ. ಪ್ರಸಾದ ಕೇಳುವುದು ಇಲ್ಲಿನ ಪದ್ದತಿ. ರೋಗ ವಾಸಿಯಾಗುವುದಾದರೆ ದೇವಾಲಯದಲ್ಲಿರಲು ಬಲಗಡೆಯ ಹೂವನ್ನು ಪ್ರಸಾದವಾಗಿ ನೀಡಲಾಗುತ್ತದೆ. ರೋಗ ವಾಸಿಯಾವುದಿಲ್ಲ ದೇವಾಲಯದಲ್ಲಿ ಇರುವುದು ಬೇಡ ಎನ್ನುವುದಾದರೆ ಎಡಗಡೆಯ ಹೂವನ್ನು ಪ್ರಸಾದವನ್ನಾಗಿ ನೀಡಲಾಗುತ್ತದೆ.

ಎಡಗಡೆ ಪ್ರಸಾದ ಪಡೆದವರಿಗೆ ದೇವಾಲಯದಲ್ಲಿ ಇರಲು ಅರ್ಹತೆ ಇರುವುದಿಲ್ಲ. ಆದ್ದರಿಂದ ಅವರು ಅಂತಹ ರೋಗಗಳನ್ನು ಆಸ್ಪತ್ರೆಗಳಲ್ಲಿಯೇ ವಾಸಿ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ದೇವಾಲಯದಲ್ಲಿ ಇರಲು ಅಪ್ಪಣೆ ಸಿಕ್ಕವರು ಮಾರನೇ ದಿನದಿಂದ ದೇವಾಯದಲ್ಲಿ ವಾಸ್ತವ್ಯ ಹೂಡಬೇಕು. ಯಾವುದೇ ಕಾರಣಕ್ಕೂ ಅವರು ದೇವಾಲಯ ದಾಟಿ ಹೊರಗೆ ಹೋಗುವಂತಿಲ್ಲ. ದಿನನಿತ್ಯ ದೇವರ ಸೇವೆ ಮಾಡುತ್ತಾ ದೇವಾಲಯದಲ್ಲೇ ಉಳಿಯಬೇಕಾಗುತ್ತದೆ.

ತಮಗೆ ಬೇಕಾದವರನ್ನು ತಮ್ಮ ಜೊತೆಯಲ್ಲಿರಿಸಿಕೊಂಡು ಅಡಿಗೆಗಳನ್ನು ದೇವಳದ ಪ್ರಾಂಗಣದಲ್ಲಿಯೇ ಮಾಡಬೇಕು. ಹೊರಗಡೆಯಿಂದ ಕೂಡಾ ಆಹಾರವನ್ನು ತರಿಸಿಕೊಳ್ಳಬಹುದು. ಇಲ್ಲಿ ಪುರೋಹಿತರು ಹೇಳಿದ ಕೆಲ ಪೂಜೆಗಳನ್ನು ಮಾಡಬೇಕಾಗುತ್ತದೆ. ಕ್ರಮೇಣ ಅವರಿಗೆ ಹುಷಾರಾದ ಅನುಭವವಾಗುತ್ತದೆ. ಸಂಪೂರ್ಣ ಆರಾಮಾದ ನಂತರ ಆ ದೇವರಲ್ಲಿ ಮನೆಗೆ ತೆರಳಲು ಅಪ್ಪಣೆ ಕೇಳಬೇಕು. ಬಲಗಡೆಯ ಪ್ರಸಾದವಾದರೆ ಮನೆಗೆ ಹೋಗಬಹುದು. ಎಡಗಡೆಯ ಪ್ರಸಾದವಾದರೆ ಇನ್ನು ಕೆಲ ದಿನಗಳು ಇರಬೇಕಾಗುತ್ತದೆ.

ಹೀಗೆ ಅನೇಕ ಜನರಿಂದ ಇಂದು ಈ ದೇವಾಲಯ ಆಸ್ಪತ್ರೆಯಂತಾಗಿದೆ. ದೂರದೂರಿನ ಜನ ಇಲ್ಲಿ ಬಂದು ತಮ್ಮ ಕಾಯಿಲೆಗಳನ್ನು ವಾಸಿಮಾಡಿಕೊಂಡಿದ್ದಾರೆ. ಅನೇಕ ಜನರು ಇಂದು ತಮ್ಮ ಕಷ್ಟಗಳಿಂದ ಮುಕ್ತಿ ಹೊಂದಿದ್ದಾರೆ. ನಿಜಕ್ಕೂ ಈತ ರೋಗಹರ ಹನುಮಂತನೇ ಸರಿ.

- ದರ್ಶನ್ ಬಿ.ಎಂ

0 comments:

Post a Comment