ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಛೇ...ಈ ಕೆಲ್ಸದ ಒತ್ತಡಕ್ಕೆ ಒಂದಷ್ಟು ಬ್ರೇಕ್ ಹಾಕಲು ಬೈ ಟೂ ಚಹಾ ಕುಡಿಯೋದು ನಮ್ಮಲ್ಲೆಲ್ಲಾ ರೂಢಿ. ಅಂತಿಂಥ ಚಹಾ ಕುಡಿದರೆ ಸಾಲದು.ಅದು ಖಡಕ್ ಆಗಿದ್ರೇನೇ ಸೈ... ರಿಲ್ಯಾಕ್ಸ್ ಆಗಿ ಮತ್ತೆ ಕೆಲಸ ಮಾಮೂಲಿಯಾಗಿ ಸಾಗುತ್ತೆ. ಕೆಲವು ಜನರಿಗಂತೂ ಬೆಡ್ ಚಹಾ ಇಲ್ಲದಿದ್ರೆ ಬೆಳಗಾಗುವುದೇ ಇಲ್ಲ...ಅಂತೂ ಚಹಾ ಎಲ್ಲರ ಪಾಲಿಗೆ ಒಂದು "ಟಾನಿಕ್ " ಇದ್ದಂತೆ... ಇತ್ತೀಚೆಗೆ ಚೀನಾಕ್ಕೆ ಹೋದಾಗ ಅಲ್ಲಿನ ಚಹಾದ ಮಹಿಮೆ ಹೇಗಿದೆ ಎಂಬ ಅರಿವು ನನಗಾಯಿತು...ಅದು ನಿಮಗೂ ಒಂದು ಸಿಪ್...

ಚೀನಾದಲ್ಲಿ ಚಹಾ ತಂಬಿಗೆ....

ನಾನು ಓದಿ ತಿಳಿದಂತೆ, ಚಹಾ, ರೇಶ್ಮೆ ಹಾಗೂ ಪಿಂಗಾಣಿ ಪಾತ್ರೆಗಳ ಉಗಮಸ್ಥಾನ ಚೀನಾ. ಚೀನಾದ ಚಹಾಕ್ಕೆ ಶತಮಾನಗಳ ಇತಿಹಾಸವಿದೆ
ಹಾಗು ಚಹಾ ಸೇವನೆಯ ಅವರ ಸಂಸ್ಕೃತಿಯ ಅವಿಭಾಜ್ಯ ಅಂಗ. ನಮ್ಮ ಚೀನೀ ಸಹೊದ್ಯೋಗಿಗಳು ಶಾಂಘೈ ನಗರದ ಸಸ್ಯಾಹಾರಿ
ಹೋಟೆಲ್ ಒಂದಕ್ಕೆ ನನ್ನನ್ನು ಕರೆದೊಯ್ದಿದ್ದರು. ಚೀನಾದ ಚಹಾದಲ್ಲಿ ಹಲವು ಬಗೆ. ಅವುಗಳನ್ನು ತಯಾರಿಸುವ ಪದ್ಧತಿ ಬಹಳ ಸುಲಭ.
ಹಲವಾರು ಬಗೆಯ ಹೂವು, ಬೀಜ, ಕಾಳು, ಸೊಪ್ಪುಗಳಿಂದ ತಯಾರಿಸಿದ ಚಹಾ ಲಭ್ಯ. ನಮಗೆ ಬೇಕೆನಿಸಿದ ಹೂವನ್ನೋ, ಬೀಜವನ್ನೋ,
ಸೊಪ್ಪನ್ನೋ ಸ್ವಲ್ಪ ಹೂಜಿಗೆ ಹಾಕಿ, ಒಂದಷ್ಟು ನೀರು ಕುದಿಸಿ ಸುರಿದರೆ ಸಾಕು. ಉದಾ: ಹಸಿರು ಚಹಾ, ಎಳ್ಳಿನ ಚಹಾ, ಓಟ್ಸ್
ಚಹಾ...ಇತ್ಯಾದಿ.


ಒಂದು ಹೂಜಿ ತುಂಬ ಚಹಾ ತಂದು, ಊಟದ ಮೇಜಿನ ಮಧ್ಯೆ ಇಡುತ್ತಾರೆ. ಊಟದ ಮಧ್ಯೆ, ಆಗಿಂದಾಗ್ಗೆ ಚಹಾವನ್ನು ತಮ್ಮ ಲೋಟಕ್ಕೆ
ಬಗ್ಗಿಸಿ ಕುಡಿಯುತ್ತಾರೆ. ಈ ಚಹಾಕ್ಕೆ ಸಕ್ಕರೆ-ಹಾಲು ಸೇರಿಸುವುದಿಲ್ಲ. ಹಾಗಾಗಿ ರುಚಿ ಹೆಚ್ಚು ಕಡಿಮೆ ಬಿಸಿನೀರಿನಂತೆ ಇದ್ದು, ಸ್ವಲ್ಪ ಬಣ್ಣ
ಹಾಗೂ ಪರಿಮಳ ಇರುತ್ತದೆ. ಇಂತಹ ಚಹಾವನ್ನು ತಂಬಿಗೆಗಟ್ಟಲೆ ಕುಡಿದರೂ, ಕ್ಯಾಲೊರಿ -ಕೊಲೆಸ್ಟೆರಾಲ್ ಗಳ ಭಯ ಬೇಕಿಲ್ಲ. ಮಾರ್ಚ್
ತಿಂಗಳಲ್ಲಿ ಅಲ್ಲಿ 5 ಡಿಗ್ರಿ ತಾಪಮಾನವಿತ್ತು. ಹಾಗಾಗಿ ಬಿಸಿ ಚಹಾ ನನಗೂ ಇಷ್ಟವಾಯಿತು.

ಒಟ್ಟಾರೆಯಾಗಿ ನೋಡಿದರೆ, ನಮ್ಮ ಹಳ್ಳಿ ಮನೆಗಳ 'ಕಷಾಯ'ವು, ಕೊತ್ತಂಬರಿ ಚಹಾ, ಜೀರಿಗೆ ಚಹಾ, ಏಲಕ್ಕಿ ಚಹಾ, ಕಾಳುಮೆಣಸು ಚಹಾ
.....ಇತ್ಯಾದಿಗಳ ಸಂಗಮ, ಜತೆಗೆ ಹಾಲು-ಸಕ್ಕರೆ ಮೇಳೈಸಿದ ಅರೋಗ್ಯದಾಯಕ ಪೇಯ! ಆದರೆ ನಮ್ಮ ಬಡ ಕಷಾಯದ ಪುಡಿಗೆ
'ಮಾರ್ಕೆಟಿಂಗ್ ತಂತ್ರ' ಸಿದ್ದಿಸಿಲ್ಲ, ಅಷ್ಟೆ!



ಅಂದವಾದ ಚಹಾ ತುಂಬಿದ ಹೂಜಿಗಳನ್ನು ನೋಡುತ್ತ "ತಾರಕ್ಕ ಬಿಂದಿಗೆ, ನಾ ಚಹಾಕ್ಕೆ ಹೋಗುವೆ, ತಾರೇ ಬಿಂದಿಗೆಯ" ಎಂದು ಮನಸ್ಸಿನಲ್ಲಿ
ಗುನುಗಿದೆ.

ಹೇಮಮಾಲಾ ಮೈಸೂರು

0 comments:

Post a Comment