ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
7:44 PM

ಇದು ಭತ್ತದ ತೋರಣ...

Posted by ekanasu

ವೈವಿಧ್ಯ

ಈ ಆಕರ್ಷಕ ಭತ್ತದ ತೆನೆಯ ತೋರಣಗಳು ನೋಡಲೆಷ್ಟು ಸುಂದರವೋ ಅದರ ತಯಾರಿ ಅಷ್ಟೇ ಶ್ರಮವನ್ನು ಬಯಸುವಂತದ್ದು. ಚಂದ್ರಶೇಖರ್ ಅವರು ಹೇಳುವಂತೆ ಒಂದು ಅಡಿ ತೋರಣ ನೇಯ್ಗೆಗೆ ಸುಮಾರು ಎರಡು ತಾಸಿನಷ್ಟು ಸಮಯ ಬೇಕಾಗುತ್ತದೆ.ಅದರ ಕಚ್ಛಾ ವಸ್ತುವಿನ ಸಂಗ್ರಹಕ್ಕೆ ಇನ್ನಷ್ಟು ತಯಾರಿಯೂ ಬೇಕು.ಕೆಲವೇ ಕೆಲವು ತಳಿಯನ್ನು ಮಾತ್ರ ಇದರ ತಯಾರಿಗೆ ಆಯ್ಕೆ ಮಾಡಲಾಗುತ್ತದೆ.


ಕಟಾವು ಮಾಡಿದ ಹುಲ್ಲಿನ ಹೊರೆ(ಅಥವಾ ಕಟ್ಟ)ಖರೀದಿಸಿ ತಂದು ಅದನ್ನು ಒಣಗಿಸಿ ತೆನೆ ತೆಗೆಸುವ ಕೆಲಸ ಮೊದಲಾಗಬೇಕು.ಹೀಗೆ ಸಂಗ್ರಹಿಸಿದ ಭತ್ತದ ಹುಲ್ಲನ್ನು ಹುಳುಗಳಿಂದ ರಕ್ಷಿಸಿ ವರ್ಷವಿಡೀ ಕಾಪಿಡುವುದು ಅತೀ ಮುಖ್ಯ.ಹೀಗೆ ಕಾಪಿಟ್ಟ ಹುಲ್ಲನ್ನು ವಿವಿಧ ಆಕಾರ ನೀಡಿ ಸುಂದರವಾಗಿಸುವ ಕೆಲಸವನ್ನು ಚಂದ್ರಶೇಖರ್ ಅವರು ಮತ್ತವರ ಶಿಷ್ಯರು ಬಹಳಷ್ಟು ಮುತುವರ್ಜಿಯಿಂದ ಮಾಡುತ್ತಾರೆ.


ಭತ್ತದ ತೆನೆಯ ತೋರಣವೊಂದೇ ಅಲ್ಲದೆ ಚಂದ್ರಶೇಖರ್ ಅವರು ಹಸೆ ಚಿತ್ರಕಲೆಯಲ್ಲೂ ನಿಪುಣರು.ಬರಿಯ ಗೋಡೆಗಷ್ಟೇ ಸೀಮಿತವಾಗಿದ್ದ ಹಸೆಯನ್ನು ಗಾಜು,ಬಟ್ಟೆ ಹಾಗು ಮರದ ಚೌಕಟ್ಟಿನಲ್ಲಿ ಪ್ರಯೋಗಿಸಿ ಜನರಿಗೆ ತಲುಪುವುಂತೆ ಮಾಡುವ ಸಾಹಸ ಕಾರ್ಯಕ್ಕೂ ಅವರು ಕೈ ಹಾಕಿದ್ದಾರೆ.ಈ ಜಾನಪದ ಕಲೆಯ ಉಳಿವಿಗಾಗಿ ದೇಶ ವಿದೇಶಗಳಿಗೆ ಭೇಟಿಯಿತ್ತು ಈ ವಿಶಿಷ್ಟ ಕಲೆಯ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಿದ್ದಾರೆ.


ಕಳೆದ ಐದು ವರ್ಷಗಳಲ್ಲಿ ಜಪಾನ್,ದುಬೈ,ಪಶ್ಚಿಮ ಬಂಗಾಳ ಮುಂತಾದ ಸ್ಥಳಗಳಿಗೆ ಭತ್ತದ ತೆನೆಯ ತೋರಣವನ್ನು ಪರಿಚಯಿಸಿದ್ದಾರೆ
ಹಲವು ಜನರ ಆದಾಯದ ಮೂಲಕ್ಕೆ ಕಾರಣವಾಗಿರುವ ಈ ಅತ್ಯದ್ಭುತ ಕಲೆಗೆ ಇನ್ನಷ್ಟು ಪೋಷಣೆ ಬೇಕಾಗಿದೆ.ಇದುವರೆಗೂ ಜಾನಪದ ಅಕಾಡೆಮಿಯಿಂದಾಗಲೀ ಕನ್ನಡ ಸಂಸ್ಕೃತಿ ಇಲಾಖೆಯಿಂದಾಗಲೀ ಸಹಾಯ ದೊರಕದೇ ಇರುವುದು ವಿಷಾದನೀಯ.ಈ ಕಲೆಯ ಉಳಿವಿಗಾಗಿ ಹಸೆ ಗ್ರಾಮದ ಕನಸು ಕಾಣುತ್ತಿರುವ ಚಂದ್ರಶೇಖರ್ ಅವರು ಅದರ ಮೂಲಕ ಆಸಕ್ತರಿಗೆ ತರಬೇತಿ ನೀಡುವ ಮಹದಾಸೆಯನ್ನೂ ಹೊಂದಿದ್ದಾರೆ.

- ಸೌಮ್ಯ ಆದೂರು.

0 comments:

Post a Comment