ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರಕೇಂದ್ರ ಸರಕಾರಕ್ಕೆ ಜನರ ಬಗೆಗಿನ ಕೊಂಚ ಕಾಳಜಿಯೂ ಇದ್ದಂತಿಲ್ಲ.ಇದೀಗ ಮತ್ತೊಮ್ಮೆ ಪೆಟ್ರೋಲ್ ದರ ಏರಿಕೆ ಮಾಡಿದೆ. ಇಂದು ರಾತ್ರಿಯಿಂದಲೇ ಈ ಹೊಸದರನೀತಿ ಜಾರಿಯಾಗಲಿದೆ. ಕೇಂದ್ರ ಸರಕಾರ ಈ ಬಾರಿ ನೀಡಿದ ಹೊಡೆತ ಅಂತಿಂಥ ಹೊಡೆತವಲ್ಲ.ಭರ್ಜರಿ ಹೊಡೆತ.ಪ್ರತೀ ಲೀಟರ್ ಪೆಟ್ರೋಲ್ ಗೆ ರು.7.50 ಜಾಸ್ತಿಯಾಗಲಿದೆ.

ಪ್ರತೀ ಲೀಟರ್ ಒಂದಕ್ಕೆ ಪೆಟ್ರೋಲ್ ದರ ವಿವಿಧ ಊರುಗಳಲ್ಲಿ ಹೀಗಿದೆ.ಬೆಂಗಳೂರು 81.00 , ಕೋಲ್ಕತ್ತಾ: 77.53 , ಮುಂಬೈ: 78.16 , ಚೆನ್ನೈ: 77.05 . ಇತ್ತೀಚಿನ ದಿನಗಳಲ್ಲಿ ರುಪಾಯಿ ಮತ್ತು ಡಾಲರ್ ಸಮರದಲ್ಲಿ ರುಪಾಯಿ ಮೌಲ್ಯ ದಿನೇದಿನೇ ಕುಸಿಯುತ್ತಿರುವುದು ಕೂಡಾ ಬೆಲೆ ಏರಿಕೆಗೆ ಕಾರಣ ಎಂದು ಯುಪಿಎ ಸರ್ಕಾರ ಹೇಳಿದೆ.

ಒಟ್ಟಿನಲ್ಲಿ ಯು.ಪಿ.ಎ ನೇತೃತ್ವದ ಕೇಂದ್ರ ಸರಕಾರಕ್ಕೆ ಜನಸಾಮಾನ್ಯರ ಮೇಲೆ ಕಿಂಚಿತ್ತೂ ಕರುಣೆ ಇದ್ದಂತಿಲ್ಲ.ಇದು ದುರಹಂಕಾರದ ಧೋರಣೆಯಾಗಿದೆ ಎಂಬುದು ವಿಪಕ್ಷಗಳ ತೀವ್ರ ವಾಗ್ಧಾಳಿಯಾಗಿದೆ.

ಮೇಲಿಂದ ಮೇಲೆ ಈ ರೀತಿಯ ದರಹೆಚ್ಚಳ ಮಾಡುತ್ತಾ ಜನ ಸಾಮಾನ್ಯನ ಬೆನ್ನ ಮೇಲೆ ಹೊರೆ ಹೇರುತ್ತಿರುವ ಯು.ಪಿ.ಎ ಸರಕಾರವನ್ನು ಜನತೆ ತೀವ್ರ ವಾಗಿ ಖಂಡಿಸಿದ್ದಾರೆ. ಈ ರೀತಿಯ ದರ ಏರಿಕೆ ಮಾಡುವುದರಿಂದ ಜನಸಾಮಾನ್ಯ ವಾಹನದಲ್ಲಿ ತೆರಳುವುದು ದುಸ್ಸಾಹಸದ ಕಾರ್ಯವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

6 comments:

Anonymous said...

Prashanth Bhat - Friends with Sowmya Kugve
sarkarane thooradtide matte yake thoo annodu

Anonymous said...

Sukumara Rai - Govt is paying money for Air Indias Loss as a compensation, Actually this is not a loss.Other companys bribe created loss, In order to compensate loss=(BRIBE) petrol price has been increased.This is one story

Anonymous said...

Srinivas Joshi ·-ena madoda

Anonymous said...

Bhupal Mendon - kendrodu upunu puura kalver. aanda namma jana akalege vote korpe

Anonymous said...

Shivaram Prabhu · - Shame on the central government. It is hell bent on burdening common man. Our neighbors Pakistan are able to sell Petrol and Diesel at a cheaper rate which in size is not equal to any one state of India, but in India they are increasing it day by day. Corruption from the root till the top of the tree. Only a Hitler has to save India from the clutches of corruption

Anonymous said...

Sampath Kumar - yav sarkara bandru aste. ugi bekaddu sarkarakke alla namage navu ugidu kolbeku. yakandra governmentna elect madodu nave alva. karnatakadalli bjp govt baroku munna eneno kansu katkondu elect madidvi adre munde en aitu...? ella aste

Post a Comment