ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಬೆಂಗಳೂರು:ವಿಶ್ವವಿದ್ಯಾಲಯ ಅನುದಾನ ಆಯೋಗ-ಯುಜಿಸಿ ನೆಟ್ ಪರೀಕ್ಷೆಗೆ ದೇಶದಾದ್ಯಂತ ಅಭ್ಯರ್ಥಿಗಳಿದ್ದು ಪರೀಕ್ಷೆಗೆ ಪ್ರವೇಶಾತಿ ಪಡೆಯಲು ಆನ್ ಲೈನ್ ಮೂಲಕ ಅರ್ಜಿಸಲ್ಲಿಸುವ ಕೊನೆಯ ದಿನಾಂಕವನ್ನು ಎರಡು ದಿನಗಳ ಕಾಲ ಮುಂದೂಡಿದೆ.ಇದೀಗ ಮೇ.4ಕೊನೆಯ ದಿನವಾಗಿದೆ. ಕಳೆದ ಕೆಲವು ದಿನಗಳಿಂದ ಯು.ಜಿ.ಸಿ. ಪರೀಕ್ಷಾ ಪ್ರವೇಶಾತಿಗೆ ಇರುವ ಅಂತರ್ಜಾಲ ತಾಣದಲ್ಲಿ ಅಭ್ಯರ್ಥಿಗಳು ಅರ್ಜಿತುಂಬಲು ಹೆಣಗಾಡುತ್ತಿದ್ದು ಅರ್ಜಿದಾರರಿಗೆ ತೀವ್ರ ತೊಂದರೆಯುಂಟಾಗುತ್ತಿತ್ತು. ಈ ಕುರಿತು ಈ ಕನಸು.ಕಾಂ ಸಮಗ್ರ ವರದಿಯನ್ನು ಪ್ರಕಟಿಸಿತ್ತು. ಈ ವರದಿ ಪ್ರಕಟವಾಗುತ್ತಿದ್ದಂತೆಯೇ ಮೇ.2ರಂದು ನಿಗಧಿಪಡಿಸಲಾಗಿದ್ದ ಅಂತಿಮ ದಿನಾಂಕವನ್ನು ಮುಂದೂಡಿದ ಸೂಚನೆಯನ್ನು ಯು.ಜಿ.ಸಿ.ವೆಬ್ ಪ್ರಕಟಿಸಿದೆ.ಎರಡು ದಿನಗಳ ಕಾಲವಷ್ಟೇ ಅರ್ಜಿಸಲ್ಲಿಸುವ ಕಾಲಾವಕಾಶವನ್ನು ಮುಂದೂಡಿದ್ದು, ವೆಬ್ ಸೈಟ್ ಇನ್ನೂ ಸಮರ್ಪಕಗೊಳಿಸಿಲ್ಲ.ಇದರಿಂದಾಗಿ ಅಭ್ಯರ್ಥಿಗಳು ತೊಂದರೆ ಅನುಭವಿಸುವುದು ತಪ್ಪಿಲ್ಲ. ಕೊನೆಯ ದಿನಾಂಕವನ್ನು ಮುಂದೂಡಿದ್ದು ಉತ್ತಮವಾಗಿದ್ದರೂ ವೆಬ್ ಮೂಲಕ ಅತ್ಯಂಕ ಸುಲಭವಾಗಿ ಅರ್ಜಿದಾರರಿಗೆ ಅರ್ಜಿಸಲ್ಲಿಸುವ ಅವಕಾಶವನ್ನು ಯು.ಜಿ.ಸಿ ರೂಪಿಸಿಲ್ಲ. ಯುಜಿಸಿ ಅಭ್ಯರ್ಥಿಗಳ ಮೊಣಕೈಗೆ ತುಪ್ಪ ಸವರುತ್ತಿದೆಯೇ ಎಂಬ ಸಂದೇಹ ಮೂಡಿಸಿದೆ. ಕಾರಣ ಈ ಬಾರಿ ಯುಜಿಸಿ - ನೆಟ್ ಪರೀಕ್ಷೆಗಳ ಮೂರೂ ಪ್ರಶ್ನೆ ಪತ್ರಿಕೆಗಳು ಆಬ್ಜೆಕ್ಟಿವ್ ಆಗಿ ಪರಿವರ್ತನೆಗೊಂಡ ಹಿನ್ನಲೆಯಲ್ಲಿ ಸರ್ವೇ ಸಾಮಾನ್ಯವಾಗಿ ಪರೀಕ್ಷೆಗೆ ಕುಳಿತುಕೊಳ್ಳುವ ಅಭ್ಯರ್ಥಿಗಳ ಸಂಖ್ಯೆ ಅಧಿಕ.ಆದರೆ ಈ ಎಲ್ಲಾ ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ನೋಂದಣಿ ನಡೆಸಬೇಕಾಗಿದ್ದು ಕಳೆದ ಕೆಲ ದಿನಗಳಿಂದ ಸಂಬಂಧಿಸಿದ ವೆಬ್ ನಿರಂತರ ಕೈಕೊಡುತ್ತಿದೆ. ಪರಿಣಾಮ ಅಭ್ಯರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಸಾಮಾನ್ಯ ವರ್ಗಕ್ಕೆ ಸೇರುವ ಓರ್ವ ಅಭ್ಯರ್ಥಿ ತಲಾ 450ರು.ನಂತೆ ಚಲನ್ ಪಡೆದು ಅರ್ಜಿಸಲ್ಲಿಸಬೇಕಾಗಿದೆ. ಇಡೀ ದೇಶದಲ್ಲಿ ಯು.ಜಿ.ಸಿ ಪರೀಕ್ಷೆ ಬರೆಯುವವರ ಸಂಖ್ಯೆ ಅಗಾಧವಾಗಿದ್ದು ಚಲನ್ ಪಡೆದುಕೊಂಡು ಆನ್ ಲೈನ್ ಮೂಲಕ ಅರ್ಜಿಯನ್ನೂ ಸಲ್ಲಿಸಲಾಗದೆ ಅನೇಕ ಅಭ್ಯರ್ಥಿಗಳು ಪರದಾಡುವಂತಾಗಿದೆ.

1 comments:

Anonymous said...

again same problem...

Post a Comment