ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ
" ಆಕಾಶದಲ್ಲಿರುವ ನಕ್ಷತ್ರ ಉರುಳಿ ಬೀಳುತ್ತಾ...? " ಎದುರು ಮನೆ ಪುಟಾಣಿ "ನೀಕ್ಷಿತ" ಆಕಾಶವನ್ನೇ ನೋಡುತ್ತುಆ ನನ್ನಲ್ಲಿ ಕೇಳೋ ದಿನನಿತ್ಯದ ಪ್ರಶ್ನೆ ಇದೊಂದೆ...! ನನ್ನದೂ ಮಾಮೂಲು ಉತ್ತರ " ಇಲ್ಲ ಪುಟ್ಟ ಚಂದ್ರನನ್ನು ನೋಡ್ತಾ ಕೂರೋದಂದ್ರೆ ನಕ್ಷತ್ರಕ್ಕೆ ತುಂಬಾ ಇಷ್ಟ.ಅದು ಅಲ್ಲೇ ಇರುತ್ತೆ."

ನಾನು ಚಿಕ್ಕವಳಿರಬೇಕಾದ್ರೆ ರಾತ್ರಿ ಅಜ್ಜ ಅಂಗಳವಿಡೀ ಸುತ್ತಾಡಿಸುತ್ತಾ ಮಿನುಗೋ ನಕ್ಷತ್ರ ತೋರಿಸ್ತಾ ಒಂದೊಂದೇ ತುತ್ತು ಬಾಯಿಗಿಡ್ತಿದ್ರು. ಆಗ ನನ್ನ ಅದೇ ಕುತೂಹಲ ಪ್ರಶ್ನೆಗೆ ಅವರು ಕೊಡ್ತಿದ್ದ ಉತ್ತರ ಈಗ "ನೀಕ್ಷಿತ"ಳ ಪಾಲಾಯಿತು. ಮುಂದೊಂದು ದಿನ ಇನ್ನೊಂದು ಪುಟಾಣಿ ಪಾಪು ನೀಕ್ಷಿತಳಲ್ಲಿ ಇದೇ ಪ್ರಶ್ನೆ ಕೇಳಿದ್ರೆ ಖಂಡಿತ ಅವಳ ಉತ್ತರನೂ ಮಾಮೂಲೇ ಆಗಿರುತ್ತದೆ.

ಈ ಪರಂಪರಾಗತ ಉತ್ತರವನ್ನು ಒಂದು ಸಲಾನಾದ್ರೂ ಸುಳ್ಳು ಮಾಡೋ ಆಸೆ ನನ್ನದು... ಇರ್ಲಿ...ಇರ್ಲಿ..ಆಗ ನಾನೇ ಕೆಳಗಡೆ ಬಂದು ಆ ಮಾತನ್ನು ಸುಳ್ಳು ಮಾಡಿಯೇ ಮಾಡ್ತೇನೆ. ಅಲ್ಲ ಇದೆಲ್ಲ ಈಗ್ಯಾಕೆ ನೆನಪಾಯ್ತು ಅಂತೀರಾ...? ಸುಮ್ನೆ ಅಂಗಳದಲ್ಲಿ ಸುತ್ತಾಡ್ತಾ ಚುಕ್ಕಿ ಲೆಕ್ಕ ಹಾಕ್ತಿದ್ದೆ. ಆ ಸುಂದರಾಂಗ ಚಂದ್ರನಿಗೆ ಇದೆಲ್ಲ ಇಷ್ಟ ಆಗೋಲ್ಲ ಅನ್ಸುತ್ತೆ.ಅದಿಕ್ಕೆ ಆಗಿರಬೇಕು ತನ್ನ ಮಡದಿ - ಮಕ್ಕಳ ಲೆಕ್ಕ ಹಾಕ್ಲಿಕೆ ಬಿಡೋದೇ ಇಲ್ಲ.ಪುಣ್ಯಾತ್ಮ ಪ್ರತೀ ಬಾರಿ ಲೆಕ್ಕ ಹಾಕಿದಾಗಲೂ ತಬ್ಬಿಬ್ಬು ಮಾಡಿಯೇ ಬಿಡ್ತಾನೆ.ದಿನಂಪ್ರತಿ ಅವನ ಕುಟುಂಬದ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತಿದ್ದಾಗ ಸಣ್ಣದೊಂದು ಡೌಟ್ ನಂಗೆ. "ಚಿಕ್ಕ ಚೊಕ್ಕ ಕುಟುಂಬ ಯೋಜನೆ" ಪಾಠ ಮೊದಲು ಅವನಿಗೇ ಮಾಡ್ಬೇಕು.ಯಾವತ್ತು ನೋಡಿದ್ರೂ ಒಂದು ಹೊಸ ನಕ್ಷತ್ರ ಅವನನ್ನು ನೋಡಿ ಲೈನ್ ಹೋಡಿತಾ ಇರುತ್ತೆ. ಇದೆಲ್ಲ ನೋಡಿದ್ರೆ ನಂಗಂತೂ ಹೊಟ್ಟೆ ಉರಿಯುತ್ತೆ. ನಂಗಿಲ್ಲದ ಛಾನ್ಸ್ ಅನ್ನು ಚಿಣುಕಲು ನಕ್ಷತ್ರಗಳೆಲ್ಲ ಕಬಳಿಸ್ತಾ ಇದ್ದಾರಲ್ಲಾ ಛೇ...

ನಕ್ಷತ್ರ ನೋಡಿದಾಗೆಲ್ಲ ನಂಗೆ ಮೊದಲು ನೆನಪಾಗುವುದು ನನ್ನ ಪ್ರೀತಿಯ ಅಜ್ಜ. ಅವರನ್ನು ನೆನಪಿಸಿದಾಗೆಲ್ಲ ನಾನು ಮಗುವಾಗುತ್ತೇನೆ. ಅಜ್ಜನ ಪ್ರೀತಿಯ ಮೊಮ್ಮಗಳಾಗ್ತೇನೆ. ಅವರು ತನ್ನ ಪ್ರೀತಿಯ್ನೆಲ್ಲ ನಂಗೇ ಧಾರೆಯೆರೆದಿದ್ದರು. ನಕ್ಷತ್ರ ತೋರಿಸ್ತಾ - ತೋರಿಸ್ತಾ ಕಥೆ ಹೇಳ್ತಿದ್ರು. "ಚಂದಮಾಮನ ತುತ್ತು " ಅನ್ನುತ್ತಾ ಮೊಸರನ್ನ ಬಾಯಿಗಿಡುತ್ತಿದ್ದರು... ಇಳಿವಯಸಿನಲ್ಲೂ ನನ್ನನ್ನು ಎತ್ತಿಕೊಂಡು ಚಂದ್ರ ತೋರಿಸ್ತಾ ಮಲಗಿಸ್ತಿದ್ರು.ಈಗ ಎಲ್ಲಾ ಬರೀ ನೆನಪು.ನನ್ನಜ್ಜ ನಂಗೆ ಬೇಕು. ಮತ್ತೆ ಅಜ್ಜನ ಮಡಿಲಲ್ಲಿ ಹಾಯಾಗಿ ಮಲಗ್ಬೇಕು. ಎಲ್ಲಿಂದ ತರ್ಲಿ ನನ್ನ ಪ್ರೀತಿಯ ಅಜ್ಜನ್ನ ಅಲ್ವಾ...?

- ಇಶಾ

0 comments:

Post a Comment