ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಳ್ವಾಸ್ ಪ್ರಗತಿ - 2012
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಇದೇ ಮೇ.12 ಮತ್ತು 13ರಂದು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿರುವ ಬೃಹತ್ ಉದ್ಯೋಗಮೇಳದ ಪೂರ್ವಭಾವೀಯಾಗಿ ನಾಲ್ಕು ದಿನಗಳ ಉದ್ಯೋಗಪೂರ್ವ ತರಬೇತಿ ಶನಿವಾರ ಪ್ರಾರಂಭಗೊಂಡಿತು.

ಉದ್ಯೋಗಮೇಳದಲ್ಲಿ ಸುಮಾರು 150ಮಿಕ್ಕಿದ ಪ್ರತಿಷ್ಠಿತ ಕಂಪೆನಿಗಳು ಭಾಗವಹಿಸಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಬೃಹತ್ ಪ್ರಮಾಣದ ಉದ್ಯೋಗ ಲಭ್ಯವಾಗಲಿದೆ. ಈ ಕಂಪೆನಿಗಳು ನಡೆಸುವ ಸಂದರ್ಶನದಲ್ಲಿ ಯಶಸ್ವಿಯಾಗಿ ಭಾಗಿಗಳಾಗಿ ಉದ್ಯೋಗ ಪಡಕೊಳ್ಳಲು ಅನುಕೂಲವಾಗುವಂತೆ ಉದ್ಯೋಗಪೂರ್ವ ತರಬೇತಿ ನಡೆಸಲಾಯಿತು.

ಟೆಕ್ನಿಕಲ್ ತರಬೇತಿಗಳು, ಸಿ., ಸಿ.++ , ಜಾವ, ಲಿನಕ್ಸ್, ಆಂಡ್ರೋಯಿಡ್, ಸಾಫ್ಟ್ ಸ್ಕಿಲ್ಸ್, ಆಫ್ಟಿಟ್ಯೂಡ್ ಟ್ರೈನಿಂಗ್, ಸೆಲ್ಲಿಂಗ್ ಅಂಡ್ ಟೆಲಿ ಮಾರ್ಕೆಟಿಂಗ್ ಸ್ಕಿಲ್ಸ್, ಇಂಗ್ಲಿಷ್ ಗ್ರಾಮರ್, ಕಸ್ಟಮರ್ ಸಪೋರ್ಟ್ ,ರೆಸ್ಯೂಮ್ ರೈಟಿಂಗ್ ಸೇರಿದಂತೆ ಅನೇಕ ಉಪಯುಕ್ತ ಮಾಹಿತಿಗಳು , ಮಾರ್ಗದರ್ಶನಗಳು ನುರಿತ ತರಬೇತುದಾರರಿಂದ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾಗುತ್ತಿದೆ. ವಿಪ್ರೋ ಸಂಸ್ಥೆಯ ವಿಕಾಸ್ ಕಾರಂತ್, ಎಲ್.ಸಿ.ಎಸ್ ಸಂಸ್ಥೆಯ ರಮಣನ್ ಸೇರಿದಂತೆ ನುರಿತ ಹಿರಿಯ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ.


ಮೇ.12 ಮತ್ತು 13ರಂದು ನಡೆಯಲಿರುವ ಉದ್ಯೋಗಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ಭಾಗವಹಿಸಬಹುದಾಗಿದೆ. ಈ ಕನಸು.ಕಾಂ ಉದ್ಯೋಗಮೇಳದ ಮಾಧ್ಯಮ ಸಹಭಾಗಿತ್ವವನ್ನು ವಹಿಸಿಕೊಂಡಿದೆ.

0 comments:

Post a Comment