ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಜನಪರ ಹೋರಾಟ...ಹೌದು ಇದು ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣದ ವಿನೂತನ ಪ್ರಯತ್ನ. ಈ ಕನಸು.ಕಾಂ ಕಳೆದ ಐದು ವರುಷಗಳಲ್ಲಿ ಹತ್ತು ಹಲವು ವಿನೂತನ ಪ್ರಯತ್ನಗಳನ್ನು ಮಾಡುತ್ತಾ ವೆಬ್ ಮಾಧ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಾ ನಂ.1 ಪಟ್ಟವನ್ನು ಕಾಯ್ದುಕೊಳ್ಳುತ್ತಾ ಬಂದಿದೆ. ಜನಪರ ಹೋರಾಟವೂ ಇಂತಹುದೇ ವಿನೂತನ ಪ್ರಯತ್ನಗಳ ಪೈಕಿ ಒಂದು. ವೆಬ್ ಮಾಧ್ಯಮವೊಂದು ಜನರ ಬಳಿ ತೆರಳಿ ಜನರ ಸಮಸ್ಯೆಯ ಬಗೆಗೆ ಸೂಕ್ತ ಅಧ್ಯಯನ ಕೈಗೊಂಡು ಸತ್ಯಾಸತ್ಯತೆಗಳನ್ನು ವಿಶ್ಲೇಷಿಸಿ ಅದಕ್ಕೊಂದು ಪರಿಹಾರವನ್ನು ಒದಗಿಸುವುದೇ ಈ ಜನಪರ ಹೋರಾಟದ ಪ್ರಮುಖ ಉದ್ದೇಶ.


ಜನಪ್ರತಿನಿಧಿಗಳು, ಇಲಾಖೆಗಳಿಗೆ ಸಮಸ್ಯೆಯ ಗಂಭೀರತೆಯನ್ನು ಮುಟ್ಟಿಸುವ ಆ ಮೂಲಕ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಿ ಜನತೆಗೆ ನ್ಯಾಯ ಒದಗಿಸುವುದು ಈ ಕನಸು.ಕಾಂ ನ ಮುಖ್ಯ ಉದ್ದೇಶ. ಕಳೆದ ಎರಡು ತಿಂಗಳುಗಳ ಹಿಂದೆ ಈ ಯೋಜನೆಯನ್ನು ಆರಂಭಿಸಲಾಯಿತು. ರಾಜ್ಯ ನೈರ್ಮಲ್ಯ ಪ್ರಶಸ್ತಿ ಪುರಸ್ಕೃತ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿಕರ ನೆಮ್ಮದಿ ಕೆಡಿಸುವ ಮಂಗಗಳ ಹಾವಳಿಯ ಕುರಿತಾಗಿ ಜನಪರ ಹೋರಾಟವನ್ನು ಈ ಕನಸು ಪ್ರಾರಂಭಿಸಿತು.


ಸಮಸ್ಯೆಯ ಗಂಭೀರತೆಯನ್ನು ಮುಖ್ಯಮಂತ್ರಿ, ಅರಣ್ಯ ಇಲಾಖೆ, ಜಿಲ್ಲಾಧಿಕಾರಿ, ಸ್ಥಳೀಯ ಗ್ರಾಮಪಂಚಾಯತ್ ಗಳ ಗಮನಕ್ಕೆ ತಂದು ಮನವಿ ಸಲ್ಲಿಸಲಾಯಿತು. ಹೊಸಂಗಡಿ ಗ್ರಾಮದಲ್ಲಿ ಉಂಟಾಗಿರುವ ಮಂಗಗಳ ಹಾವಳಿಯ ಸಮಸ್ಯೆಯನ್ನು ಸವಿವರವಾಗಿ ಈ ಕನಸು .ಕಾಂ ದಾಖಲೆ ಮೂಲಕ ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು/ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಲಿಖಿತವಾಗಿ ತಂದರೂ ಯಾವೊಂದು ಸ್ಪಂದನೆಯನ್ನೂ ನೀಡಿಲ್ಲ. ಇದು ಪಂಚಾಯತ್ನ ಉದಾಸೀತ ನೀತಿಗೆ ಹಿಡಿದ ಕೈಗನ್ನಡಿ.

ಒಂದೋ ಈ ಕನಸು ನಡೆಸುತ್ತಿರುವ ಹೋರಾಟ ಪಂಚಾಯತ್ ಗೆ ಇಷ್ಟವಾಗಿಲ್ಲ. ಅಥವಾ ಇದೇನು ಮಹಾ ಎಂಬ ಅಹಂಕಾರ ನೀತಿ ಆಗಿರಬಹುದು. ಅಥವಾ ಜಾಣ ಕುರುಡು ಎಂಬಂತೆ ಪಂಚಾಯತ್ ನಡೆದುಕೊಂಡಿರಬೇಕು. ಅಥವಾ ಪಂಚಾಯತ್ ವ್ಯಾಪ್ತಿಯ ಜನತೆಗೆ ಏನಾದರೆ ನಮಗೇನು...? ತಿಂಗಳ ಸಂಬಳ ಬಂದರೆ ಸಾಕು ಎಂಬ ಧೋರಣೆ ಇಲ್ಲಿನ ಅಧಿಕಾರೀ ವರ್ಗದ್ದಾಗಿರಲೂ ಬಹುದು...ಅಂತೂ ಪಂಚಾಯತ್ ನ ಧೋರಣೆ ಮಾತ್ರ ಸರಿಯಾಗಿಲ್ಲ.ಇದೀಗ ಎರಡನೇ ಬಾರಿಗೆ ಈ ಕನಸು.ಕಾಂ ಜನಪರ ಹೋರಾಟದ ಮನವಿಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಗೆ ಕಳುಹಿಸಿದೆ. ವಾರದೊಳಗೆ ಉತ್ತರಿಸುವ ಗಡುವನ್ನೂ ನೀಡಿದೆ. ಪಂಚಾಯತ್ ನ ಈ ಧೋರಣೆ ನಿಮಗೆ ಹೇಗನ್ನಿಸಿದೆ...? ನಿಮ್ಮ ಅಭಿಪ್ರಾಯಗಳನ್ನು info@ekanasu.com ಗೆ ಮೇಲ್ ಮಾಡುವ ಮೂಲಕ ನಮಗೆ ತಿಳಿಸಿ...

- ಸಂಪಾದಕ
ಟೀಂ ಈ ಕನಸು ಜೊತೆಗೆ.

ಈ ಕನಸು.ಕಾಂ ಹೊಸಂಗಡಿ ಗ್ರಾಮಪಂಚಾಯತ್ ಅಧ್ಯಕ್ಷರು/ ಅಭಿವೃದ್ಧಿ ಅಧಿಕಾರಿಗಳಿಗೆ ಮೇ.5ರಂದು ಬರೆದ ಪತ್ರದ ಪ್ರತಿ.
ರಿಗೆ,

ಅಧ್ಯಕ್ಷರು/ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಹೊಸಂಗಡಿ ಗ್ರಾಮ ಪಂಚಾಯತ್
ಹೊಸಂಗಡಿ, ಬೆಳ್ತಂಗಡಿ ತಾಲೂಕು
ದ.ಕ.ಜಿಲ್ಲೆ

ವಿಷಯ : ಜನಪರ ಹೋರಾಟದ ಕುರಿತು

ಮಾನ್ಯರೇ,

ಈ ಕನಸು.ಕಾಂ ಎಂಬ ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ ಬೆಳ್ತಂಗಡಿ ತಾಲೂಕಿನ ರಾಜ್ಯಪ್ರಶಸ್ತಿ ಪುರಸ್ಕೃತ ಹೊಸಂಗಡಿ ಗ್ರಾಮದಲ್ಲಾಗುತ್ತಿರುವ ಮಂಗಗಳ ಕಾಟದ ಸಮಸ್ಯೆಯ ಕುರಿತಾದ ಸಮಗ್ರ ಅಧ್ಯಯನ ಕೈಗೊಂಡು "ಜನಪರ ಹೋರಾಟ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಜನಪ್ರತಿನಿಧಿಗಳು, ಸರಕಾರ, ಸ್ಥಳೀಯ ಆಡಳಿತ ಹೀಗೆ ಒಟ್ಟಾಗಿ ಜನತೆಯ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಬೇಕು, ಸಮಸ್ಯೆ ಪರಿಹಾರವಾಗಬೇಕೆಂಬ ನಿಟ್ಟಿನಲ್ಲಿ ಈ ಹೋರಾಟ ಆರಂಭಗೊಂಡಿರುತ್ತದೆ.

ಈ ಬಗ್ಗೆ ಸವಿವರವಾದ ಸಮಗ್ರ ಮಾಹಿತಿ ಹೊತ್ತಗೆ ಹಾಗೂ ಮನವಿಯೊಂದನ್ನು ಎರಡು ತಿಂಗಳ ಹಿಂದೆಯೇ ತಮ್ಮ ಗಮನಕ್ಕೆ ರಿಜಿಸ್ಟರ್ ಪೋಸ್ಟ್ ಮೂಲಕ ನೀಡಲಾಗಿದೆ.(ಅದು ಸ್ವೀಕೃತವಾದ ಬಗ್ಗೆ ನಮ್ಮಲ್ಲಿ ಧಾಖಲೆಗಳಿವೆ.)

ಅದೇ ರೀತಿ ಮುಖ್ಯಮಂತ್ರಿ, ಅರಣ್ಯ ಇಲಾಖೆ, ಜಿಲ್ಲಾಧಿಕಾರಿ ಹೀಗೆ ಸಂಬಂಧಿತ ಎಲ್ಲಾ ಇಲಾಖೆಗೂ ಮಾಹಿತಿ ನೀಡಲಾಗಿತ್ತು. ಸೂಕ್ತ ಸಮಯದಲ್ಲೇ ಅವರೆಲ್ಲರ ಸ್ಪಂದನೆ ನಮಗೆ ಬಂದಿದೆ. ಆದರೆ ಹೊಸಂಗಡಿ ಗ್ರಾಮದಲ್ಲಿರುವ ಸಮಸ್ಯೆಯನ್ನು ದಿನಂಪ್ರತಿ ಗಮನಿಸುತ್ತಿರುವ ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಹಾಗೂ ಅಭಿವೃದ್ಧಿ ಅಧಿಕಾರಿಗಳು ಈ ನಮ್ಮ ಮನವಿಗೆ ಸ್ಪಂದಿಸದಿರುವುದು ವಿಷಾಧನೀಯ. ನಮ್ಮ ಮನವಿ ತಲುಪಿದ್ದಕ್ಕೆ ಮರು ಪತ್ರವಾಗಲೀ, ಮನವಿಯ ಕುರಿತಾಗಿ ಪಂಚಾಯತ್ ಕೈಗೊಂಡ ನಿರ್ಧಾರಗಳನ್ನಾಗಲೀ ನಮಗೆ ತಾವು ತಿಳಿಸಿಲ್ಲ.

1. ಈ ಕನಸು.ಕಾಂ ಯಾವುದೇ ರೀತಿಯ ಹಣದ ಆಮಿಷಕ್ಕಾಗಿ ಈ ಹೋರಾಟ ನಡೆಸುತ್ತಿಲ್ಲ. ಕೇವಲ ಜನತೆಯ ಒಳಿತಿಗಾಗಿ, ಕೃಷಿಕರ ಕಣ್ಣೊರೆಸುವ ಅವರ ಸಂಕಷ್ಟಕ್ಕೆ ಒಂದು ಬೆಂಬಲವಾಗಿ ಈ ಹೋರಾಟ ನಡೆಸುತ್ತಿದೆ.


2. ಜನಪರವಾದ ಯಾವುದೇ ಒಂದು ಮನವಿ, ಪತ್ರಗಳು ಪಂಚಾಯತ್ ಕಚೇರಿಗೆ ಬಂದಾಗ ಅದಕ್ಕೆ ಸ್ಪಂದಿಸುವ ಜವಾಬ್ದಾರಿ ಪಂಚಾಯತ್ ನದ್ದು.ಆದರೆ ಹೊಸಂಗಡಿ ಪಂಚಾಯತ್ ಈ ನಿಟ್ಟಿನಲ್ಲಿ ಯಾಕೆ ಹಿಂದೆ ಬಿದ್ದಿದೆ? ರಾಜ್ಯ ಪುರಸ್ಕಾರವನ್ನು ಪಡಕೊಂಡ ಹೆಸರಾಂತ ಪಂಚಾಯತ್ ನಲ್ಲಿ ಈ ರೀತಿ ನಡೆದರೆ ಉಳಿದ ಗ್ರಾಮಗಳ ಸ್ಥಿತಿ ಹೇಗಿರಬಹುದು?

3. ಈ ಕನಸು.ಕಾಂ ಹೊಸಂಗಡಿ ಗ್ರಾಮದಲ್ಲಿ ಕಂಡುಬರುವ ಸಮಸ್ಯೆಯ ಕುರಿತಾಗಿ ನಡೆಸುತ್ತಿರುವ ಜನಪರ ಹೋರಾಟದ ಬಗ್ಗೆ ಪಂಚಾಯತ್ ಗೆ ಆಸಕ್ತಿ ಇಲ್ಲವೇ? ಅಥವಾ ಉದಾಸೀನ ನೀತಿಯೇ...?

4. ಈ ಕನಸು.ಕಾಂ ನೀಡಿದ ಮನವಿಗೆ ಹೊಸಂಗಡಿ ಗ್ರಾಮಪಂಚಾಯತ್ ಸ್ಪಂದಿಸುತ್ತದೆಯೇ? ಇಲ್ಲವೇ ...? ಇಲ್ಲವಾದಲ್ಲಿ ಕಾರಣ ಸ್ಪಷ್ಟಪಡಿಸಿ ಲಿಖಿತ ಉತ್ತರ ನೀಡಿ.

ಹೊಸಂಗಡಿ ಗ್ರಾಮಪಂಚಾಯತ್ನ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಈ ಹಿಂದಿನ ನಮ್ಮ ಮನವಿಗೆ ಸೂಕ್ತ ಸ್ಪಂದನೆ ನೀಡಿಲ್ಲ. ಇದೀಗ ಮರು ಮನವಿ ನೀಡುತ್ತಿದ್ದೇವೆ. ಈ ಪತ್ರ ದೊರೆತ ವಾರದೊಳಗೆ ಸೂಕ್ತ ಸ್ಪಂದನೆ ದೊರಕದಿದ್ದಲ್ಲಿ ಕಾನೂನು ರೀತ್ಯಾ ಹೋರಾಟವನ್ನು ನಡೆಸುತ್ತೇವೆ. ಇದು ಕೇವಲ ಜನತೆಯ ಹಾಗೂ ಕೃಷಿಕರ ಪರವಾದ ಹೋರಾಟವೇ ಹೊರತಾಗಿ ಈ ಕನಸು.ಕಾಂ ಅನ್ಯ ಉದ್ದೇಶದಿಂದ ಇದನ್ನು ನಡೆಸುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ.

ವಂದನೆಗಳೊಂದಿಗೆ

ಹರೀಶ್ ಕೆ.ಆದೂರು
ಟೀಂ ಈ ಕನಸು.ಕಾಂ ಜೊತೆ

6 comments:

Anonymous said...

e Kanasu .com nadu ditta hejje - Shivaprasad Surya

Anonymous said...

ಉತ್ತಮ ಪ್ರಯತ್ನ - ರಾಜೇಶ್ ಪೂಜಾರಿ

Anonymous said...

ಈಗಿನ ಜನಪ್ರತಿನಿಧಿಗಳಿಗೆ ಕ್ಷೇತ್ರದ ಅಭಿವೃದ್ಧಿಯ ಕಾಳಜಿ ಇಲ್ಲ.ತನ್ನ ಕುಟುಂಬದ ಅಭಿವೃದ್ಧಿಯೇ ಮುಖ್ಯ.ಸಾಮಾನ್ಯ ಸಭೆಯಲ್ಲಿ ಚಹಾ ಕುಡಿಯುದಕ್ಕಷ್ಟೆ ಇವರು ಸೀಮಿತ
- ಲೋಕೇಶ್ ಬನ್ನೂರು.

Anonymous said...

Samanya sbhe matravall ella kade kudidu thindu thegi......ethydi......
-Mahesha Krishna Prasada

Anonymous said...

horata munduvariyali. jaya nimmade. EKANASU gellade viramisadu. hurrrrre.
-Shankaranarayana Bhat

Anonymous said...

ur dng good work sir.. all the best..
-Darshan Bm Kmt

Post a Comment