ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ -ರಾಷ್ಟ್ರ

ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಆಳ್ವಾಸ್ ಪ್ರಗತಿ 2012 ಉದ್ಯೋಗಮೇಳಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ ಯುವಜನತೆಯಲ್ಲಿ ಹೊಸ ಚೈತನ್ಯ ತುಂಬುವ ಮೂಲಕ ಭವಿಷ್ಯದ ಮಹಾನ್ ಭಾರತದ ಕಲ್ಪನೆಯನ್ನು ಸಾಕಾರಮಾಡುವ ಕಾರ್ಯವನ್ನು ಡಾ.ಎಂ.ಮೋಹನ ಆಳ್ವರು ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಇದೊಂದು ಮಹತ್ವಪೂರ್ಣ ಘಟ್ಟವಾಗಿದೆ. ಯುವಜನತೆ, ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.


ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸ್ವಾಗತಿಸಿದರು. 150 ಕಂಪೆನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಿದ್ದವು. 12ಸಾವಿರಕ್ಕೂ ಅಧಿಕ ಮಂದಿ ಉದ್ಯೋಗಾಕಾಂಕ್ಷಿಗಳು ನೋಂದಣಿ ಕೈಗೊಂಡಿದ್ದಾರೆ.
ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ ಈ ಕನಸು.ಕಾಂ ಈ ಉದ್ಯೋಗಮೇಳದ ಪ್ರಮುಖ ಮಾಧ್ಯಮ ಸಹಭಾಗಿತ್ವ ವಹಿಸಿಕೊಂಡಿದೆ.
ಚಿತ್ರಗಳು:ಟೀಂ ಈ ಕನಸು

0 comments:

Post a Comment