ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
10:32 PM

ನೆನಪಿನಾಳದಿಂದ..

Posted by ekanasu

ನುಡಿ ಚಿತ್ರ
ಮುಂಗಾರು ಮತ್ತೆ ಆರಂಭವಾಗಿದೆ. ಬಾಲ್ಯದ ದಿನಗಳು ನೆನಪಾಗುತ್ತಲಿವೆ. ತುಂತುರು ಮಳೆಯಲ್ಲಿ ನೆನೆಯುತ ಮುರಿದ ಕೊಡೆಯನ್ನಿಡಿದು ಶಾಲೆಗೆ ಹೋಗುತ್ತಿದ್ದ ದಿನಗಳು ಕಣ್ಣಮುಂದೆ ಬರುತ್ತಲಿವೆ. ಬೆಂಗಳೂರಿನಲ್ಲಿ ಆಗ ಮಳೆಯ ಸಂಬ್ರಮ.

ಹರಿದ ಹವಾಯಿ ಚಪ್ಪಲಿಯನ್ನು ದರಿಸಿ ಮುರಿದ ಕೊಡೆಯನ್ನು ಕೈಯಲ್ಲಿಡಿದು, ನೆಗಡಿಯಾದ ಮೂಗನ್ನು
ಒರೆಸುತ್ತ ಶಾಲೆಗೆ ತೆರಳುತ್ತಲಿದ್ದ ಸಮಯ.

ಗಾಳಿ ಮಳೆ ಜೋರಾದರೆ ದೊಡ್ಡ ಮರದ ಕೆಳಗೆ
ಕೊಂಚ ವಿಶ್ರಾಂತಿ. ಬೀಸಿದ ಗಾಳಿಗೆ ಕೊಡೆ ಹಾರಿ ಹೋಗಿ ಪುನ: ಕೈಗೆಟುಕದೇ ಮಳೆಯಲ್ಲಿಯೇ
ಪರಿತಪಿಸಿದ್ದು, ನಡುಕ ಶುರುವಾಗಿ ೧೦೩ಡಿಗ್ರಿ ಜ್ವರಬಂದು ಶಕ್ತಿಗುಂದಿದ್ದು. ಮಳೆಯ
ನೆಪವನ್ನು ಮುಂದೆ ಮಾಡಿ ಶಾಲೆ ಸೇರಿದರೆ ಮುಂಗೋಪಿ ಮೇಷ್ಟ್ರ ಕೆಂಗಣ್ಣಿಗೆ
ಗುರಿಯಾಗುವರೆಂಬುದನ್ನು ತಿಳಿದು ಶಾಲೆ ತಪ್ಪಿಸಿ ಗುಡ್ಡ ಬೆಟ್ಟಗಳನ್ನು ಸುತ್ತಿದ್ದು.
ಚಳಿ ತಾಳಲಾರದೇ ಮೋಟು ಬೀಡಿಗೆ ಬೆಂಕಿ ಹಚ್ಚಿಸಿದ್ದು.
ಬೆತ್ತದ ರುಚಿಯನ್ನು ಆಹ್ವಾದಿಸಿದ್ದು. ಲಲನೆಯರ ಜಡೆಗಳಿಗೆ ಗಂಟು ಹಾಕಿ ಸಂಬ್ರಮಿಸಿದ್ದು. ಶಾಲೆಗೆ ಚಕ್ಕರ್
ಹೊಡೆದು ಶುಟಿಂಗ್ ನೋಡೊಕೆ ತೆರಳಿದ್ದು. ಕಾಡಿಗೆ ಬೆಂಕಿ ಹಚ್ಚಿ ಕಾಳ್ಗಿಚ್ಚು ಎಂದು
ವದಂತಿ ಹಬ್ಬಿಸಿದ್ದು. ಜಂಭದ ಹುಡುಗಿಯೋರ್ವಳಿಗೆ ಭೂತ ಹಿಡಿದಿದೆ ಎಂದು ಪ್ರಚಾರ
ಮಾಡಿದ್ದು.
ಒಂದೆ ತಟ್ಟೆಯಲ್ಲಿ ನಾಲ್ವರು ಸೇರಿ ಇಡ್ಲಿ ತಿಂದಿದ್ದು, ಒಂದು ಕಾಪಿಯನ್ನು
ಬೈಟು ಎಂಬಂತೆ ಮಾಡಿಸಿದ್ದು. ಮಾವಿನ ತೋಪಿನಲ್ಲಿ ಮಾವಿನಕಾಯಿ ಕದ್ದದ್ದು. ಐಸ್
ಕ್ಯಾಂಡಿಯವನಿಗೆ ಯಾಮಾರಿಸಿ ಐಸ್ ತಿಂದದ್ದು. ಲಾಟರಿ ಟಿಕೇಟ್ ಕೊಂಡು ಮೋಸ ಹೊದದ್ದು.
ಮಳೆರಾಯನ ಆರ್ಭಟಕ್ಕೆ ಮಣಿದು ಒಂದೆ ಛತ್ರಿಯ ಸೂರಿನಡಿ ನಾಲ್ವರು ಆಶ್ರಯ ಪಡೆದದ್ದು..
ಇವೆಲ್ಲ ಬಾಲ್ಯದ ಗೆಳೆಯರ ಪ್ರೇಂಡಶಿಫ್‌ನ ನೆನಪಿನಲ್ಲಿರುವ ಕಿತಾಪತಿಯ ಪುರಾಣಗಳು...

ಅಬ್ಬಾ..! ನೆನೆದರೆ ಅವೆಲ್ಲ ಈಗ ನಗು ತರಿಸುತ್ತವೆ. ಮೊನ್ನೆ ಸುರಿದ
ಮಳೆಯಲ್ಲಿ ಎಲ್ಲ ನೆನಪಿಗೆ ಬಂದವು. ಯಾಕಿಷ್ಟು ಕಾಡುತ್ತಾನೆ ಈ ಮಳೆರಾಯ. ಅಸಲಿಗೆ ಈ
ಮಳೆಯೆಂಬುದೆ ಒಂದು ಅತ್ಯದ್ಬುತ ರೋಮಾಂಚನ. ಈಗಲೂ ಅಷ್ಟೆ ಮಳೆ ಅಂದರೆ ನನಗೆ ತುಂಬಾ
ಇಷ್ಟ. ಜೋರಾದ ಮಳೆಯಲಿ ತಂಪಾದ ಗಾಳಿಯಲಿ ಮನದ ಗೆಳತಿಯನ್ನ ನೆನೆಯುತ ನೂರಾರು ಕಿ.ಮೀ
ವೇಗದಲ್ಲಿ ಬೈಕ್ ಓಡಿಸುವದಿದೆಯಲ್ಲ....! ಆ ಮಳೆ ಸುರಿಯುವಾಗ ಮುಗಿಲಿಗೆ
ಮುಖವೊಡ್ಡಿದರೆ, ಮನಸ್ಸು ಕೂಡ ತೊಯ್ದು ತೊಪ್ಪೆ ಎಂದೆನಿಸುತ್ತದೆ. ಸುತ್ತಲು ಕವಿದ
ಮಬ್ಬಾದ ಕತ್ತಲು. ಗಗನ ತುಂಬೆಲ್ಲ ಕರಿಮೋಡಗಳು.

ಗುಡುಗು ಮಿಂಚುಗಳೆಂ ಬೆಳಕಿನ ಆಟಗಳು.
ಮಳೆ ಸುರಿಯುತ್ತದೆ ಎಂಬ ಭಯದಿಂದ ಬೇಗನೇ ಶಾಲೆ ಸೇರುವ ದಾವಂತದಲ್ಲಿ ಪುಠಾಣಿಗಳು.
ಮಕ್ಕಳನ್ನೆ ಹೊತ್ತು ಸರ್ಕಸ್ ನಡೆಸುತ್ತಿರುವ ಆಟೋರಿಕ್ಷಾಗಳು. ಟ್ರಾಪಿಕ್
ಸಿಗ್ನಲನಲ್ಲಿ ನಿಂತಾಗ ಕಾಣಬರುವ ರಿಕ್ಷಾದಿಂದ ಹೊರಸೂಸುವ ಪುಠಾಣಿ ಪಾದಗಳು.. ಹಳೆಯ
ಛತ್ರಿಯಮ್ಮೆ ಹುಡುಕಿ ರಿಪೇರಿ ಮಾಡಿಸಿ ಶಾಲೆ ಸೇರುವ ಮೇಷ್ಟ್ರು - ಟೀಚರ್‌ಗಳು. ಕಛೇರಿ
ಕೆಲಸಕ್ಕೆಮದು ತೆರಳುವ ಉದ್ಯೋಗಿಗಳು.. ಪ್ಲಾಸ್ಟಿಕ್ ಕೊಪ್ಪೆಯನ್ನು ಹೊದ್ದು ಬೀದಿ
ವ್ಯಾಪಾರದಲ್ಲಿ ನಿರತವಾಗಿರುವ ಮುದಿ ಅಜ್ಜಿ.

ಪೇರಲೆ ಹಣ್ಣನ್ನೆ ಮಾರಿ ಬದುಕು ನಡೆಸುವ
ಯುವಕ. ಪೆಟ್ರೋಲ ಬಂಕ್‌ನಲ್ಲಿ ನಿಂತು ಸರತಿಯಲ್ಲಿರುವ ವಾಹನಗಳ ಕಿಡಕಿಯನ್ನೊರೆಸಿ ಹಣ
ಸಂಪಾದಿಸುವ ಅಂಗವಿಕಲ. ಮರದ ಎಲೆಗಳಿಂದ ತೊಟ್ಟಿಕ್ಕುವ ಮಳೆಹನಿಯೊಂದಿಗೆ ಆಡುವ ಕಂದಮ್ಮ.
ರೆಕ್ಕೆ ಪುಕ್ಕಗಳನ್ನು ಕೊಡವಿ ಮೈ ಸ್ವಚ್ಚಗೊಳಿಸಿಕೊಳ್ಳುವ ಪುಟ್ಟ ಗುಬ್ಬಿಮರಿ.
ಸಂಜೆಮಳೆಯಲ್ಲಿ ಗುನುಗುವ ಎಫ್.ಎಂಸ್ಟೇಶನ್‌ಗಳು ಮಾಯಾನಗರಿಯಲ್ಲಿ ಹೀಗೆ ಬದುಕು
ಕಂಡುಕೊಂಡವವರು ನೂರಾರು. ಮಳೆ ನಿಂತ ನಂತರ ಎಲೆಯ ಮೇಲಿದ್ದ ಹನಿಗಳು ಮಳೆಯನ್ನೆ ನೆನದು
ಉದುರಿ ಬೀಳುವದು. ಶಾಲೆ ಸೇರದ ಪುಠಾಣಿ ಕಂಬಳಿ ಕುಪ್ಪೆಯನ್ನೋ.., ಮುರಿದ ಛತ್ರಿಯ
ಮಡಿಚುವ ಪ್ರಯತ್ನದಲ್ಲಿರುವ ಹೊತ್ತಿಗೆ ವರುಣನ ಮೋಗದಲ್ಲಿ ಕೊಂಚ ಮಂದಹಾಸ. ಮಳೆಯೆಂದರನೇ
ಹಾಗೇ ಅದೊಂತರಾ ಸುಂದರ ನೆನಪುಗಳ ಕನವರಿಕೆ....

- ಅಚ್ಯುತಕುಮಾರ. ಯಲ್ಲಾಪುರ

0 comments:

Post a Comment