ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ಈ ಪ್ರಕೃತಿಯ ಮುಂದೆ ಪ್ರಕೃತಿಯ ಅದ್ಭುತ ಶಕ್ತಿಯ ಮುಂದೆ ಮಾನವ ತೃಣ ಸಮಾನ...ಜಗದ ಅನೇಕ ವಿಸ್ಮಯವನ್ನು ಇಂದಿನ ತನಕ ಹೊರಗೆಡಹಲು ವಿಜ್ಞಾನಿಗಳಿಗೆ ಸಾಧ್ಯವಾಗಲೇ ಇಲ್ಲ. ಪ್ರಪಂಚದಲ್ಲಿ ನಾವೆಷ್ಟು ಮುಂದುವರಿದರೂ ಸೃಷ್ಠಿ ನಿಯಮ, ವಿಸ್ಮಯಗಳು ನಮ್ಮನ್ನಣಕಿಸುತ್ತಲೇ ಬಂದಿವೆ. ಅವುಗಳ ನಡುವೆ ನಾವೆಲ್ಲ ತೃಣ ಸಮಾನರು ಎಂಬುದನ್ನು ಹಲವು ಬಾರಿ ಸಾಬೀತು ಪಡಿಸಿವೆ...

ಇಂದಿನ ಈ ವಿಶೇಷ ಪಯಣದಲ್ಲಿ ಅಂತಹ ಸೃಷ್ಠಿ ವೈಚಿತ್ರ್ಯವೊಂದನ್ನು ನಮ್ಮ ಓದುಗರಿಗೆ ನಾವು ನೀಡುತ್ತಿದ್ದೇವೆ.... ಪ್ರಪಂಚವೇ ಒಂದು ಅದ್ಭುತ. ಈ ಅದ್ಭುತವಾದ ಪ್ರಪಂಚದಲ್ಲಿ ದಿನಂಪ್ರತಿ ಅನೇಕಾನೇಕ ವಿಚಿತ್ರಗಳು ಘಟಿಸುತ್ತಾ ಸಾಗುತ್ತವೆ. ಅಗೋಚರ ಶಕ್ತಿಯೊಂದು ನಿರಂತರವಾಗಿ ಆ ಶಕ್ತಿಯ ಇರುವಿಕೆಯನ್ನು ಸಾಬೀತು ಪಡಿಸುತ್ತಿದೆ. ಅದು ಸಾಬೀತು ಪಡಿಸುವ ವಿಧ ಹತ್ತು ಹಲವು....


ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಪನಗಲ್ನಲ್ಲಿರುವ ಪುರಾತನ ಛಾಯಾ ಸೋಮಲಿಂಗೇಶ್ವರ ದೇವಸ್ಥಾನ ಒಂದು ಕುತೂಹಲಕಾರಿ ಕ್ಷೇತ್ರ.ಈ ಕ್ಷೇತ್ರದ ಅಚ್ಚರಿಯನ್ನು ಅನೇಕ ಮಂದಿ ಪ್ರಶ್ನಿಸಿದ್ದಾರೆ. ಹಲವರು ಅದನ್ನು ಸಾಬೀತು ಪಡಿಸಲು ಹೊರಟು ಸೋತು ಹೋಗಿದ್ದಾರೆ. ಸೃಷ್ಠಿ ನಿಯಮದ ಮುಂದೆ ಮಾನವ ಏನೂ ಅಲ್ಲ ಎಂಬುದನ್ನು ಒಪ್ಪುವಂತಾಗಿದೆ....ಹೌದು ಅಂತಹ ಕುತೂಹಲ ನಿಮಗೂ ಮೂಡಿರಬಹುದು...ಆ ಅದ್ಭುತ ವಿಚಿತ್ರವಾದರೂ ಏನು...


ಹೌದು ಅದುವೇ..."ಛಾಯೆ..." !!!ಛಾಯಾ ಎಂದರೆ ನೆರಳು.ಈ ದೇವಸ್ಥಾನ ಕುತೂಹಲಕ್ಕೆಡೆ ಮಾಡಿಕೊಡುವುದು ಈಶ್ವರ ಲಿಂಗದ ಹಿಂದೆ ಹಗಲಿಡೀ ಕಾಣುವ ಕಂಬದಾಕಾರದ ನೆರಳು. ಕಾಕತೀಯರ ಕಾಲದಲ್ಲಿ ಪ್ರಮುಖ ಧಾರ್ಮಿಕ ಸ್ಥಳವಾಗಿದ್ದ ಪನಗಲ್ ಇಂದು ದಿನವಿಡೀ ಕಾಣಿಸುವ ಈ ನೆರಳಿನಿಂದಾಗಿ ಪ್ರಾಮುಖ್ಯತೆ ಪಡೆಯುತ್ತಿದೆ.ಅಷ್ಟೇನು ಪ್ರಚಾರ ಪಡೆಯದ ಈ ದೇಗುಲ ವಿಜ್ಞಾನಿಗಳಿಗೆ ಸವಾಲಾಗಿರುವುದು ವಿಶೇಷ

- ಟೀಂ ಈ ಕನಸು.

0 comments:

Post a Comment