ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
4:49 PM

ಇದುವೇ ಕಾಯಕ...

Posted by ekanasu

ವೈವಿಧ್ಯ

ಚಾರಣಪ್ರಿಯರಿಗೆ ಬೆಟ್ಟ ಹತ್ತುವುದು ಒಂದು ಚಟ ಅಥವಾ ವಾರಾಂತ್ಯದ ವಿಶ್ರಾಂತಿಯ ಇನ್ನೊಂದು ರೂಪ. ಜತೆಗೆ ಸ್ನೇಹಿತರೊಡನೆ ಬೆರೆಯುವ ಸದವಕಾಶ, ಹಳೆಯ ಚಾರಣದ ನೆನಪನ್ನು ಮೆಲುಕು ಹಾಕುತ್ತ, ಮುಂದಿನ ಹೊಸ ಚಾರಣದ ಬಗ್ಗೆ ಸಮಾಲೋಚನೆ ಮಾಡುತ್ತಾ, ಕಟ್ಟಿ ತಂದ ಬುತ್ತಿಯನ್ನು ಹಂಚಿ ತಿಂದು, ಪರಸ್ಪರ ಕುಶಾಲ-ಹರಟೆ-ಲೇವಡಿ ಮಾತುಕತೆ ಮಾಡುತ್ತಾ - ಒಟ್ಟಾರೆಯಾಗಿ ಸಂತೋಷವಾಗಿ ದಿನವನ್ನು ಕಳೆಯುವ ಪರಿ. ಈ ಶ್ರಮಿಕ ಕಾರ್ಮಿಕನಿಗೆ ನಿತ್ಯ ಚಾರಣ ಅನಿವಾರ್ಯ. ಯಾಕೆಂದರೆ ಬೆಟ್ಟ ಹತ್ತಲು ಅನುವು ಮಾಡುವ ಮೆಟ್ಟಿಲು ಕಡಿಯುವುದೇ ಈತನ ಕಾಯಕ. ಕೊರೆಯುವ ಚಳಿಯನ್ನು ಲೆಕ್ಕಿಸದೆ, ಆಗಿಂದಾಗ್ಗೆ ಸುರಿಯುತ್ತಿರುವ ಹಿಮಯನ್ನು ಹಾರೆಯಿಂದ ಹೆರೆದು ಮೆಟ್ಟಿಲುಗಳನ್ನು ಶುಭ್ರಗೊಳಿಸುವ ಈತನ ಕೆಲಸ ನಿಜಕ್ಕೂ ತ್ರಾಸದಾಯಕ. ಹೊಟ್ಟೆಪಾಡು... ಮನಾಲಿಯ 'ಗುಲಾಬಾ ಸ್ನೋ ಪಾಯಿಂಟ್ ' ನಲ್ಲಿ ಕಾಣಸಿಕ್ಕಿದ ಕಾಯಕ ನಿರತ ಶ್ರಮಿಕ ಈತ.

ಹೇಮಮಾಲಾ. ಬಿ
ಮೈಸೂರು

0 comments:

Post a Comment