ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಸಾಗರ:ಸಾಗರದ ನಿಧಿ ಪ್ರಕಾಶನ ನೀಡುವ 2012 ನೇ ಸಾಲಿನ ಕೆರೆಮನೆ ಶಂಭು ಹೆಗಡೆ ಗ್ರಂಥ ಪ್ರಶಸ್ತಿಗೆ ಅರ್ಹ ಗ್ರಂಥವನ್ನು ಆಹ್ವಾನಿಸಲಾಗಿದೆ. ಗ್ರಂಥವು 2011ರ ಜನವರಿ-ಡಿಶಂಬರ್ ಅವಧಿಯಲ್ಲಿ ಪ್ರಕಟವಾಗಿರಬೇಕು. ಬಯಲಾಟ, ಮೂಡಲಪಾಯ, ಸಣ್ಣಾಟ, ಪಾರಿಜಾತ, ಗೊಂಬೆಯಾಟ ಈ ಪ್ರಕಾರಗಳಿಗೆ ಸೇರಿರಬೇಕು. ಪ್ರಶಸ್ತಿಯು ಐದು ಸಾವಿರ ರೂಪಾಯಿ ಮೊತ್ತ ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿರುತ್ತದೆ.

ಲೇಖಕರು, ಪ್ರಕಾಶಕರು, ಬಲ್ಲವರು ಹಾಗೂ ಆಸಕ್ತರು ವಿವರಗಳನ್ನು ನಿಧಿ ಪ್ರಕಾಶನ, ಅಕ್ಷರ, ವಿನೋಬಾನಗರ, ಸಾಗರ-577401 (ದೂರವಾಣಿ: 08183226776, 9480012488) ತಿಳಿಸಿದರೆ ಪ್ರಕಾಶನವು ಗ್ರಂಥದ ಪ್ರತಿಯನ್ನು ಖರೀದಿಸಿ ಪಡೆಯುತ್ತದೆ. 2012ರ ಜೂನ್ ಮೂವತ್ತರೊಳಗೆ ತಿಳಿಸಲು ಕೋರಿದೆ. ಇದು ಕೆರೆಮನೆ ಶಂಭು ಹೆಗಡೆ ಹೆಸರಿನಲ್ಲಿ ನೀಡುತ್ತಿರುವ ನಾಲ್ಕನೆಯ ವರ್ಷದ ಗ್ರಂಥ ಪ್ರಶಸ್ತಿ. 2009ರಲ್ಲಿ ಈ ಗ್ರಂಥಪ್ರಶಸ್ತಿಯನ್ನು ಶತಾವಧಾನಿ ಡಾ. ಆರ್. ಗಣೇಶರ 'ಯಕ್ಷರಾತ್ರಿ' ಕೃತಿಗೆ ನೀಡಿ ಪುರಸ್ಕರಿಸಲಾಗಿದೆ. ಎರಡನೆಯ ವರ್ಷದ ಗ್ರಂಥಪ್ರಶಸ್ತಿಯನ್ನು 2210ರಲ್ಲಿ ಡಾ.ಮೋಹನ ಕುಂಟಾರರ 'ಯಕ್ಷಗಾನ ಆಹಾರ್ಯ' ಕೃತಿಗೆ ನೀಡಿ ಗೌರವಿಸಲಾಗಿದೆ. ಮೂರನೆಯ ವರ್ಷದ ಪ್ರಶಸ್ತಿಯನ್ನು ಡಾ.ರಾಘವ ನಂಬಿಯಾರರ 'ಯಕ್ಷಸೇಚನ' ಕೃತಿಗೆ 2011ರಲ್ಲಿ ನೀಡಿ ಸನ್ಮಾನಿಸಲಾಗಿದೆ.

0 comments:

Post a Comment