ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಕೇಂದ್ರ ಸರಕಾರ ಪೆಟ್ರೋಲ್ ಬೆಲೆಯನ್ನು ಏಕಾಏಕಿ ಏರಿಸಿದೆ. ಅದೂ ಬರೋಬ್ಬರಿ ರು.7.50ನ್ನು ಏಕಕಾಲದಲ್ಲಿ ಏರಿಸಿ ಸುಮ್ಮನಾಗಿದೆ. ಇದು ಜನಸಾಮಾನ್ಯನ ಮೇಲೆ ಯಾವ ರೀತಿಯ ಹೊಡೆತ ಬೀಳುತ್ತದೆ ಎಂಬ ಸಾಮಾನ್ಯ ಪ್ರಜ್ಞೆಯನ್ನೂ ಮಾಡದ ಸರಕಾರ ತಮ್ಮ ಖುಷಿ ಬಂದಂತೆ ವರ್ತಿಸುತ್ತಿದೆ.

ಭಾರತ ದೇಶದಲ್ಲಿ ಈ ರೀತಿಯ ಕ್ರಮಗಳು ಮಾಮೂಲಾಗಿವೆ. ಇಲ್ಲಿ "ಆನೆ ನಡೆದದ್ದೇ ಹಾದಿ" ಎಂಬಂತ ಧೋರಣೆಗಳು ಮಾಮೂಲಾಗಿವೆ. ಎ.ಸಿ.ರೂಮಿನಲ್ಲಿ ಕೂತು ಮನ ಬಂದಂತೆ ; ಇತರರನ್ನು ಮೆಚ್ಚಿಸುವ ಕಾರ್ಯಗಳನ್ನು ಇಂದಿನ ಸರಕಾರ, ಆಡಳಿತ ಪಕ್ಷ, ಯಂತ್ರಗಳು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಇದು ಯಾವ ಪಕ್ಷವನ್ನೂ ಬಿಟ್ಟಿಲ್ಲ.

ಭಾರತದ ಪ್ರಸಕ್ತ ವ್ಯವಸ್ಥೆ, ಜನಸಾಮಾನ್ಯನ ಪರಿಸ್ಥಿತಿ ಇದ್ಯಾವುದನ್ನೂ ಸಮರ್ಪಕವಾಗಿ ಯೋಚಿಸದೆ ಏಕಾಏಕಿ ಈ ರೀತಿಯ ಬೆಲೆಯೇರಿಕೆಗಳು ಆಗುತ್ತಿರುವುದರಿಂದಾಗಿ ಸಮಾಜದಲ್ಲಿ ತೀವ್ರ ತೊಂದರೆಗಳು ಉಂಟಾಗುತ್ತಿವೆ.
ಪೆಟ್ರೋಲ್ ಬೆಲೆ ಏಕಾಏಕಿ ಏರಿಸಿದ್ದೇ ಆದಲ್ಲಿ ಅದರಿಂದಾಗುವ ಇತರೆ ತೊಂದರೆಗಳ ಬಗ್ಗೆ ಕೇಂದ್ರ ಸರಕಾರ ಯೋಚಿದಿಯೇ..? ಕೇಂದ್ರ ಸರಕಾರ ಬೆಲೆ ಏರಿಸಿತು ಎಂದಾಕ್ಷಣ ರಾಜ್ಯ ಸರಕಾರಗಳು ಕೇಂದ್ರದ ಧೋರಣೆಯನ್ನು ಮನ್ನಿಸಬೇಕೆಂದೇನಿಲ್ಲ... ಅಥವಾ ವಿಪಕ್ಷಗಳು ಇದನ್ನು ಪುರಸ್ಕರಿಸಬೇಕೆಂದೇನಿಲ್ಲ. ವಿಪಕ್ಷಗಳ ತೀವ್ರ ವಿರೋಧಗಳು, ರಾಜ್ಯ ಸರಕಾರಗಳ ತೀವ್ರ ವಿರೋಧಗಳು ಇತ್ತೀಚೆನ ದಿನಗಳಲ್ಲಿ ವ್ಯಕ್ತವಾಗುತ್ತಿಲ್ಲ. ಏನಾದರೂ ಆಗಲಿ ಅದು ನಮಗೆ ಸಂಬಂಧಿಸಿದ್ದೇ ಅಲ್ಲ ಎಂಬ ರಾಜಕಾರಣಿಗಳ ಧೋರಣೆಗಳೂ ಸಾಮಾನ್ಯ ನಾಗರೀಕನಿಗೆ ಬೇಸರ ತರುವಂತಾಗಿದೆ.

ದಿನಂಪ್ರತಿ ಬೆಲೆಯೇರಿಕೆಗಳು ಆಗುತ್ತಲೇ ಇವೆ. ಇಂದು ಪೆಟ್ರೋಲ್ ಬೆಲೆ ಏಕಾಏಕಿ ಏರಿಕೆಯಾಯಿತು. ನಾಳೆ ಡೀಸಲ್, ನಾಡಿದ್ದು ಅಡುಗೆ ಅನಿಲ, ನಂತರದ ದಿನಗಳಲ್ಲಿ ಇತರೆ ಉತ್ಪನ್ನಗಳದ್ದು... ಇದಕ್ಕೆ ಪೂರಕವಾಗಿ ಬಸ್ಸು ಟಿಕೆಟ್ ದರ, ದಿನಸಿ ಉತ್ಪನ್ನಗಳ ದರ ಹೀಗೆ ಒಂದಕ್ಕೊಂದು ಪೂರಕವಾಗಿ ಏರಿಕೆಯಾಗುತ್ತದೆ. ಆದರೆ ;


* ಖಾಸಗೀ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಓರ್ವ ಉದ್ಯೋಗಿಯ ಸಂಬಳ "ಬೆಲೆಯೇರಿಕೆ" ಆದ ತಕ್ಷಣ ಏರುತ್ತದೆಯೇ...?
* ಕೃಷಿಕರ ಕೃಷಿ ಉತ್ಪನ್ನಗಳಿಗೆ "ಬೆಲೆ ಏರಿಕೆ" ಆದ ತಕ್ಷಣ ಏರಿಕೆ ಮಾಡಲಾಗುತ್ತದೆಯೇ..?
* ಬೆಲೆ ಏರಿಕೆಯ ಸಂದರ್ಭದಲ್ಲಿ ಜನಸಾಮಾನ್ಯರ ಅಭಿಪ್ರಾಯಕ್ಕೆ ಎಷ್ಟು ಮಾನ್ಯತೆ ದೊರಕುತ್ತದೆ...?
ಈ ಸರಳ ಪ್ರಶ್ನೆಗಳಿಗೆ ಖಂಡಿತಾ ಉತ್ತರ ಇಂದು ದೊರಕುತ್ತಿಲ್ಲ.

ಸರಕಾರ ಪೆಟ್ರೋಲ್ ಅಥವಾ ತೈಲ ಉತ್ಪನ್ನಗಳ ಬೆಲೆ ಏರಿಕೆ ಮಾಡಲಿ. ಆದರೆ ಅದಕ್ಕೆ ಪರ್ಯಾಯವಾದಂತಹ ವ್ಯವಸ್ಥೆಯನ್ನು ಮಾಡುವುದು ಅಷ್ಟೇ ಮುಖ್ಯ. ಅದು ಸರಕಾರದ ಜವಾಬ್ದಾರಿಯೂ ಹೌದು.
ಇತ್ತೀಚೆಗೆ ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯ ಸ್ವಂತ ವಾಹನಗಳಲ್ಲಿ ತೆರಳುವುದು ತುಸು ಕಷ್ಟದ ಪರಿಸ್ಥಿತಿಯಂತಾಗಿದೆ. ಲೀಟರ್ ಒಂದಕ್ಕೆ 80ರು.ವಿನಂತೆ ನೀಡಿ ಪೆಟ್ರೋಲ್ ಸುರಿದು ಕಾರು/ಬೈಕುಗಳಲ್ಲಿ ಸಂಚರಿಸುವುದು ಸಾಮಾನ್ಯ ಮನುಷ್ಯರಿಗೆ ತುಸು ಕಷ್ಟವೇ.
ಇಂತಹ ಸಂದರ್ಭದಲ್ಲಿ ಸರಕಾರ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ.

* ಜನಸಾಮಾನ್ಯರಿಗೂ ಎಲೆಕ್ಟ್ರಿಕ್ ಕಾರ್ ಬೈಕ್ ಲಭ್ಯವಾಗುವಂತೆ ಮಾಡುವುದು. ಸೂಕ್ತ ಸಬ್ಸಿಡಿ, ಉತ್ತೇಜನ ಕೊಡುವುದು.
* ಪರ್ಯಾಯ ಇಂಧನ ವ್ಯವಸ್ಥೆಯನ್ನು ಬಲವಾಗಿ ರೂಪಿಸುವುದು.
* ಬೆಲೆಯೇರಿಕೆ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಬರುವುದು.

ಇತ್ತ ಬಟ್ಟಲಲ್ಲಿ ದೊಡ್ಡದೊಂದು ಹೆಗ್ಗಣವನ್ನಿಟ್ಟುಕೊಂಡು ಇನ್ನೊಬ್ಬನ ಬಟ್ಟಲಲ್ಲಿರುವ ನೊಣದ ಬಗ್ಗೆ ಮಾತನಾಡುವಂತೆ ಇಂತಿನ ಸರಕಾರಗಳು, ಆಡಳಿತ ಪಕ್ಷಗಳು ಮಾಡುವುದು ಸರಿಯಲ್ಲ. ಒಂದು ತಪ್ಪನ್ನು ಮುಚ್ಚಿಡಲು ಮತ್ತೊಂದನ್ನು ಎತ್ತಿ ಹಿಡಿಯುವುದು ಬೇಡ. ತಮ್ಮ ಬೇಳೆ ಬೇಯಿಸಲು ಇನ್ನೊಬ್ಬರ ಬಲಿ ತೆಗೆದುಕೊಳ್ಳುವುದು ಕೂಡಾ ಸರಿಯಲ್ಲ. ಸರಕಾರಗಳು ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕು. ಇತರ ದೇಶಗಳಲ್ಲಾಗುವ ಉತ್ತಮ ಕಾರ್ಯಗಳನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ಕೇವಲ ಹಣದಾಸೆಗೆ ಹೀನ ಕೃತ್ಯಗಳನ್ನು ಮಾಡದೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ.


ಈಗಾಗಲೇ ಕಾಲ ಮಿಂಚಿಹೋಗಿದೆ. ಇನ್ನಾದರೂ ರಾಜಕೀಯ ಪಕ್ಷಗಳು, ಆಡಳಿತ ಪಕ್ಷಗಳು ಜವಾಬ್ದಾರಿಯ ನಿಲುವು ತೆಗೆದುಕೊಳ್ಳಲಿ. ಭವಿಷ್ಯದ ಭಾರತದವನ್ನು ಸಮೃದ್ಧವಾಗಿ ರೂಪಿಸಲು ಕಠಿಬದ್ಧರಾಗಲಿ.

- ಟೀಂ ಈ ಕನಸು.

0 comments:

Post a Comment