ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:50 PM

ಕೊಡೆ..ಕೊಡೆ...

Posted by ekanasu

ವೈವಿಧ್ಯ
ಮತ್ತೆ ಹಳೆತನಕ್ಕೆ ಶಿಫ್ಟ್... ಹಳೆಯದು ಹೊಸತಾಗುತ್ತಿದೆ... ಕಾಲ ಚಕ್ರ ಉರುಳುತ್ತಿದೆ. ಹೌದು ನಮ್ಮ ಹಿರಿಯರು ಬಳಸುತ್ತಿದ್ದ ಸಾಧನ ಪರಿಕರಗಳಿಗೆ ಕೊಂಚ ಹೊಸ ಟಚ್ ನೀಡು ಮತ್ತೆ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ..."ಇದು ಈ ಬಾರಿಯ ನ್ಯೂ ಸ್ಟೈಲ್" ಎಂಬ ಬ್ರಾಂಡ್ ನೊಂದಿಗೆ.


ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಹೊಸ ಹೊಸ ಮಾದರಿಯ ಛತ್ರಿಗಳು ಮಾರುಕಟ್ಟೆಯಲ್ಲಿ ನಾ ಮುಂದು ತಾ ಮುಂದು ಎಂಬಂತೆ ಪೈಪೋಟಿ ನೀಡಲಾರಂಭಿಸಿವೆ.ಹಿಂದಿನ ಕಾಲದ ಅಜ್ಜನ ಕಾಲಿನ ( ಕೊಕ್ಕೆ ಕಾಲು ) ಕೊಡೆಗಳು ಮತ್ತೆ ಮಾರುಕಟ್ಟೆಗೆ ದಾಪುಗಾಲಿಟ್ಟಿವೆ. ಆದರೆ ಕೊಂಚ ನ್ಯೂ ಲುಕ್ ನೊಂದಿಗೆ.

ಪ್ಲಾಸ್ಟಿಕ್, ಫೈಬರ್ ಮೆಟೀರಿಯಲ್ ಬಳಸಿ ಈ ಕೊಡೆಗಳ ಹಿಡಿ ಅಥವಾ ಕಾಲುಗಳನ್ನು ರಚಿಸಲಾಗಿವೆ. ಅದಕ್ಕೆ ಹೊಸ ಹೊಸ ರೂಪುಗಳನ್ನು ನೀಡಲಾಗಿವೆ. ಅಷ್ಟೇ ಅಲ್ಲದೆ ದೊಡ್ಡ ಗಾತ್ರದ ಈ ಕೊಡೆಗಳು ಕೇವಲ ಒಂದೇ ವರ್ಣದಲ್ಲಿ ಮೂಡಿಬರದೆ ನಾನಾ ವರ್ಣವೈವಿಧ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

ಮೊದಲೆಲ್ಲಾ ಕೊಡೆಯೆಂದರೆ ಕೇವಲ ಕಪ್ಪು ಬಣ್ಣದ ದಪ್ಪ ಬಟ್ಟೆ. "ಅರಿವೆ" ಎಂದೇ ಕರೆಯಲಾಗುತ್ತಿತ್ತು. ಒಂದಷ್ಟು ಹೆಚ್ಚು ಹಣ ನೀಡಿದರೆ ಪಾಲಿಸ್ಟರ್ ಅರಿವೆ. ಆದರೆ ಇಂದು ಈ ಮೆಟೀರಿಯಲ್ ಯಾವುದೂ ಇಲ್ಲ. ಎಲ್ಲವೂ ಸಿಂಥೆಟಿಕ್ ಮೆಟೀರಿಯಲ್ಸ್. ಬೇಕು ಬೇಕಾದ ಬಣ್ಣ, ಬೇಕಾದ ಚಿತ್ರ, ಬರಹಗಳು, ವೈವಿಧ್ಯಮಯ ಕಲರ್ ಫುಲ್ ವರ್ಣ ಶೃಂಗಾರದೊಂದಿಗೆ ಕೊಡೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವೆಲ್ಲವೂ ಇಂದು "ಫ್ಯಾನ್ಸಿ"ಕೊಡೆಗಳು ಎಂಬ ನಾಮಧೇಯದಿಂದ ಅಲಂಕರಿಸಿಕೊಂಡಿವೆ.ಸಿಂಗಲ್ ಫೋಲ್ಡ್ ಕೊಡೆಗಳಾದ ಬೃಹತ್ ಗಾತ್ರದ ಕೊಡೆಗಳು ಹೆಚ್ಚಾಗಿ ಹಿರಿಯರು ಬಳಸುತ್ತಿದ್ದರು. ಆದರೆ ಇಂದು ಈ ಕೊಕ್ಕೆ ಕಾಲಿನ ಓಲ್ಡ್ ಸ್ಟೈಲ್ ನ ಮಾಡರ್ನ್ ಗೆಟಪ್ ನ ಕೊಡೆಗಳು ಯೂತ್ ಗಾಗಿಯೇ ರೂಪುತಳೆದಿದ್ದು ಟೀನೇಜ್ ಯುವತಿಯರಿಗೆ ಇವು ಅತ್ಯಂತ ಅಚ್ಚುಮೆಚ್ಚು.
ಕೊಡೆಗಳ ರಚನೆಯಲ್ಲೂ ಇಂದು ಸಾಕಷ್ಟು ಬದಲಾವಣೆ ಕಾಣಲಾರಂಬಿಸಿವೆ. ಹಿಂದಿನಂತೆ ವೃತ್ತಾಕಾರದ ಛತ್ರಿಗಳ ಬದಲಾಗಿ ಹಾರ್ಟ್ ಶೇಪ್, ಸ್ಕ್ವೇರ್ ಶೇಪ್ ಛತ್ರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.ಅಷ್ಟೇ ಅಲ್ಲದೆ ಸಿಂಗಲ್ ಫೋಲ್ಡ್ ನಿಂದ ಪ್ರಾರಂಭಗೊಂಡು ಥ್ರೀ ಫೋಲ್ಡ್, ಸಿಕ್ಸ್ ಫೋಲ್ಡ್, ಪಾಕೆಟ್ ಫೋಲ್ಡ್ ಹೀಗೆ ನಾನಾ ವಿಧಧ ಕೊಡೆಗಳು ಲಭ್ಯವಿದೆ. ಸ್ವಿಚ್ ಕೊಡೆ, ಗ್ಲಾಸ್ ಕೊಡೆ, ಲೈಟ್ ಕೊಡೆ, ಫ್ಯಾನ್ಸಿ ಕೊಡೆ, ಟಾಯ್ ಕೊಡೆ, ಕಾರ್ಟೂನ್ ಕೊಡೆ, ಹಾರ್ಟ್ ಶೇಪ್ ಕೊಡೆ, ಸ್ಕ್ವೇರ್ ಕೊಡೆ ಇವೆಲ್ಲಾ ಇಂದಿನ ಹೊಸ ಹೊಸ ಮಾದರಿಯ ಕೊಡೆಗಳಾಗಿವೆ.

ಹಿಂದಿನ ಕಾಲದಲ್ಲಿ ಕೊಡೆಯೆಂದರೆ ಎಂಟು ಕಡ್ಡಿ, ಒಂದು ಉದ್ದದ ಕೋಲು, ಅದಕ್ಕೆ ಎಂಟು ಕಡ್ಡಿ, ಅದಕ್ಕೆ ಅರಿವೆ ಎಂದರೆ ಬಟ್ಟೆ ಹೊದ್ದು ಅಲ್ಲಲ್ಲಿ ಹೊಲಿಗೆ ಹಾಕಲ್ಪಟ್ಟ ರಚನೆ. ಕೆಳ ಭಾಗದಲ್ಲಿ ಒಂದು ಹಿಡಿ ಅಥವಾ ಮುಷ್ಟಿ. ಅದು ಪ್ರಶ್ನಾರ್ಥಕ ಚಿಹ್ನೆಯಂತೆ. ಕೊಡೆಯನ್ನು ತೂಗು ಹಾಕಲನುಕೂಲವಾಗಲೆಂದು ಆ ರೀತಿಯ ರಚನೆ. ಆದರೆ ಇಂದು ಕಾಲ ಬದಲಾಗಿದೆ. ಕೊಡೆಗಳಲ್ಲಿ ವೈವಿಧ್ಯತೆಗಳು ಮೂಡಿವೆ. ಆದರೆ ಅವು ಎಷ್ಟು ಬಾಳ್ವಿಕೆ ಬರುತ್ತವೆ...? ಅವು ಇಂದಿನ ಗಾಳಿ, ಮಳೆಗಳನ್ನು ತಡಕೊಳ್ಳುವ ಶಕ್ತಿ ಹೊಂದಿದೆಯಾ... ಎಂಬುದು ಕೊಡೆಗಳ ಕಾಲಿನಂತೆಯೇ ಪ್ರಶ್ನಾರ್ಥಕ!"ಬಂತು ಮಳೆ ತಡೆ ತಡೆ...ಕೊಡೆಯ ಹಿಡಿದು ಮುಂದೆ ನಡೆ..." ಎಂಬ ಮಳೆ - ಕೊಡೆಯ ಹಾಡುಗಳು ಇಂದು ಕೇಳಿಸುತ್ತಿಲ್ಲ...ಮಳೆ ಬಂದರೂ ಇಂದಿನ ಕೊಡೆಗಳು ನೀರನ್ನು ತಡೆಯುವುದೂ ಇಲ್ಲ...


ಕೇವಲ ಅಂದ ಚೆಂದಕ್ಕಷ್ಟೇ ಇಂದು ಕೊಡೆಗಳಿವೆ...
ಒಂದು ಕೊಡೆ ಕೊಂಡರೆ ಅದು ಮಕ್ಕಳ ಮಕ್ಕಳ ಕಾಲಕ್ಕಾಗುತ್ತಿತ್ತು. ಆದರೆ ಇಂದು ಒಂದು ಕೊಡೆ ಕೊಂಡರೆ ಒಂದು ಮಳೆಗಾಲ ಕಳಿಯುವುದೇ ಕಷ್ಟ. ಇದು ಈಗಿನ ಕೊಡೆಗಳ "ಕ್ವಾಲಿಟಿ" ಎನ್ನುತ್ತಾರೆ ಹಿರಿ ತಲೆಗಳು.

- ಎಚ್.ಕೆ.

0 comments:

Post a Comment