ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಯುವಾ
ಮೊದಲು ಒಂದು ಕಾಲವಿತ್ತು.ಬೇರೆ ಊರಿಗೆ ಸುದ್ದಿಯನ್ನು ಮುಟ್ಟಿಸಬೇಕೆಂದರೆ ಕಾಗದ ಬರೆದು ಕಳಿಸಬೇಕಿತ್ತು. ಅದು ಅಲ್ಲಿ ಹೋಗಿ ಮುಟ್ಟುವ ಹೊತ್ತಿಗೆ ತುಂಬಾ ಸಮಯವಾಗುತ್ತಿತ್ತು. ಅರ್ಜೆಂಟಾಗಿ ಬರುವುದಾಗಲಿ, ಅಥವಾ ಇನ್ನಾವುದೇ ಕೆಲಸಕ್ಕೆತಿಳಿಸುವುದು ತೊಂಬ ಕಷ್ಟವಾಗುತ್ತಿತ್ತು. ನಂತರದಲ್ಲಿ ಫೋನ್ ಬಂದಂತೆ ಕಾಗದ ಬರೆಯುವುದನ್ನೇ ಸ್ವಲ್ಪ ಮಟ್ಟಿಗೆ ಮರೆತಂತಾಯಿತು. ಇತ್ತೀಚೆಗಂತೂ ಮೊಬೈಲ್ ಹಾವಳಿಯಿಂದ ಕಾಗದ ಬರೆಯುವುದನ್ನು ಸಂಪೂರ್ಣ ಮರೆತು ಬಿಟ್ಟಿದ್ದಾರೆ.ಹೇಗಿದೆ ನೋಡಿ ಇಂದಿನ ಜನರೇಶನ್...

ಮೊಬೈಲ್ ಒಂದು ಉತ್ತಮ ಸಾಧನವಾದರೂ ತುಂಬ ಉಪಯೋಗಕ್ಕೆ ಬರುವ ವಸ್ತುವಾದರೂ ಸಹ ಅದು ಕೇವಲ ವ್ಯವಹಾರಸ್ಥರಿಗೆ ಮಾತ್ರ ಉತ್ತಮ . ಆದರೆ ಇತ್ತೀಚೆಗೆ ವ್ಯವಹಾರದವರಿಗಿಂತ ಹೆಚ್ಚಾಗಿ ಕಾಲೇಜಿನಲ್ಲಿ ಓದುತ್ತಿರುವ ಹುಡುಗ-ಹುಡುಗಿಯರಲ್ಲಿ ಕಾಣುತ್ತೇವೆ. ಈಗ ಮೊಬೈಲ್ ಹಿಡಿಯುವುದೊಂದು ಫ್ಯಾಶನ್ ಆಗಿ ಬಿಟ್ಟದೆ.

ನಾನು ಒಂದು ದಿನ ಕಾಲೇಜಿನಲ್ಲಿ ಹಾಗೇ ಹೋದಾಗ ಒಬ್ಬನು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ತುಂಬಾ ಹೊತ್ತಿನಿಂದ ಜೋರಾಗಿ ಮಾತನಾಡುತ್ತಿದ್ದ, ಏನೋ ಸೀರಿಯಸ್ ವಿಶ್ಯಾ ಇರಬಹುದೆಂದುಕೊಂಡೆ . ಕೊನೆಗೆ ಇದ್ದಕ್ಕಿದ್ದಂತೆ ಹಾಗೆ ಮಾತನಾಡುತ್ತಿರುವಾಗ ಅವನ ಕೈಯಲ್ಲಿ ಮೊಬೈಲ್ ರಿಂಗ್ ಆಯಿತು... ಆಗ ಅವನ ಮುಖ ನೋಡಬೇಕಿತ್ತು, ಇಂಗು ತಿಂದ ಮಂಗನಂತಾಗಿತ್ತು.

ಅಲ್ಲಿದ್ದ ಹುಡುಗಿಯರು ಹೊಟ್ಟೆಹುಣ್ಣಾಗುವಂತೆ ನಕ್ಕರು.. ಮೊಬೈಲ್ ಕೈಯಲ್ಲಿ ಇದ್ದು ಓಡಾಡಲು ಒಂದು ಗಾಡಿ ಇದ್ದರೆ ಸಾಕು ಹುಡುಗಿಯರನ್ನು ಒಲಿಸಿಕೊಳ್ಳಬಹುದು ಎಂಬುದು ಹಲವು ಮಂದಿ ಹುಡುಗರ ಅಭಿಪ್ರಾಯ. ಈ ಮೊಬೈಲ್ ಇತ್ತೀಚಿಗೆ ಫ್ಯಾಶನ್ ವಸ್ತುವಾಗಿ ಬಿಟ್ಟಿದೆ. ಈಗಂತೂ ಬೇರೆ ಬೇರೆ ತರಹದ ಮೊಬೈಲ್ ಕಂಪನಿಗಳು ತಲೆ ಎತ್ತಿವೆ. ಆಕರ್ಷಣೆಯ ಮೊಬೈಲ್ ಫೋನ್ ಈಗ ಮಾರುಕಟ್ಟೆಯಲ್ಲಿ ಪ್ರೇಮಿಗಳಿಗಾಗಿಯೇ ಅವತರಿಸಿಕೊಳ್ಳುತ್ತಿವೆ.

ಹೆತ್ತವರು ನೀಡಿದ ಪಾಕೆಟ್ ಮನಿ ಇಂದು ಮೊಬೈಲ್ ಕರೆನ್ಸಿಗೆ ಬಳಕೆಯಾಗುತ್ತಿದೆ.ಫೀಸ್ ಕಟ್ಟುವ ನೆಪವೊಡ್ಡಿ ಮೊಬೈಲ್ ಗೆ ಕರೆನ್ಸಿ ಹಾಕುವ ಮಂದಿಗೇನೂ ಕಡಿಮೆಯಿಲ್ಲ. ಇಂದು ಮೊಬೈಲ್ ಯುವಜನತೆಗೆ ಬಹಳ ಆಪ್ತ ಅನಿಸಿದೆ. ಬೆಳಿಗ್ಗೆ "ಗುಡ್ ಮಾರ್ನಿಂಗ್ "ನಿಂದ ಹಿಡಿದು ರಾತ್ರಿ "ಗುಡ್ನೈಟ್" ತನಕ ಮಾತನಾಡುತ್ತಲೇ ಇರಬಹುದು..ಇರುತ್ತಾರೆ ಕೂಡಾ...

ಈಗಂತೂ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದೂ ಎಲ್ಲರ ಕೈಯಲ್ಲಿಯೂ ಮೊಬೈಲ್... ಮೊಬೈಲ್. ಮೊಬೈಲ್ ಬಳಕೆ ಕೇವಲ ಅತಿ ಅವಶ್ಯಕವಾದ ಮಾತನ್ನು ಅತಿ ಕಡಿಮೆ ಅವಧಿಯಲ್ಲಿ ಮಾತನಾಡಲು ಉತ್ತಮ. ಆದರೆ ಅದು ಬರ ಬರುತ್ತಾ ಕಡಿಮೆ ಅವಧಿಗಿಂತ ಹೆಚ್ಚಿಗೆ ಅವಧಿಗೆ ವರ್ಗಾಯಿಸಲ್ಪಡುತ್ತಿದೆ.ಇಂದಿನ ದಿನದಲ್ಲಿ ಉಪಯೋಗಕ್ಕಿಂತ ಹೆಚ್ಚು ಅಂದರೆ ಟೈಂ ಪಾಸ್ ಮಾಡಲು ಉತ್ತಮ ಸಾಧನವಾಗಿದೆ.
ಕಾರ್ಟೂನ್: ರಾಮ್ ಗೋಪಾಲ್

ಚಂದ್ರಕಲಾ.ಎಸ್. ಶಿರಸಿ.


0 comments:

Post a Comment