ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: ಜನರಿಗೆ ಸತ್ಯ ಅಪ್ರಿಯ. ಆದರೆ ಕಥೆಗಾರ ಸಾದತ್ ಹಸನ್ ಮಾಂಟೋ ಸತ್ಯದ ಪ್ರತಿಪಾದಕರಾಗಿದ್ದರು. ಅವರ ಪ್ರತಿಯೊಂದು ಕಥೆಯೂ ನೂರಾರು ಅರ್ಥಗಳನ್ನು ಧ್ವನಿಸುವ ಶಕ್ತಿ ಹೊಂದಿತ್ತು. ಗಾಂಧೀಜಿ ರಾಜಕೀಯವಾಗಿ ಸತ್ಯ ಹೇಳುತ್ತಿದ್ದರೆ, ಮಾಂಟೋ ಸಾಹಿತ್ಯದ ಮೂಲಕ ಸತ್ಯ ಅನಾವರಣಗೊಳಿಸುತ್ತಿದ್ದರು. ಸತ್ಯದ ಬಗ್ಗೆ ಇಬ್ಬರ ನಿಷ್ಠೆಯೂ ಒಂದೆ ತೆರನಾಗಿತ್ತು ಎಂದು ಚಿಂತಕ ಜಿ.ರಾಜಶೇಖರ್ ಅಭಿಪ್ರಾಯಪಟ್ಟರು.

ಖ್ಯಾತ ಕಥೆಗಾರ ಸಾದತ್ ಹಸನ್ ಮಾಂಟೋ ಅವರ 100ನೆ ಜನ್ಮ ದಿನದ ಪ್ರಯುಕ್ತ ಮಂಗಳೂರಿನ ಪತ್ರಕರ್ತರ ಅಧ್ಯಯನ ಕೇಂದ್ರ ಶುಕ್ರವಾರ ನಗರದ ಸಿಒಡಿಪಿ ಸಭಾಂಗಣದಲ್ಲಿ ಹಮ್ಮಿಕೊಂಡ `ಮಾಂಟೋ ನೆನಪು' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕೇವಲ 43 ವರ್ಷ ಬದುಕಿದ್ದ ಮಾಂಟೋನಿಗೆ ಸಾಹಿತ್ಯ ಬಿಟ್ಟರೆ ಅತೀ ಹೆಚ್ಚು ಆಕರ್ಷನೀಯ ಕ್ಷೇತ್ರ ಬಾಲಿವುಡ್ ಆಗಿತ್ತು. ದೇಶ ವಿಭಜನೆ ಹಿನ್ನೆಲೆಯಲ್ಲಿ ಭಾರತದಿಂದ ವಿದಾಯ ಹೇಳುವ ಸಂಕಟಮಯ ಸನ್ನಿವೇಶ ಎದುರಿಸಿದ್ದ ಮಾಂಟೋನಿಗೆ ತನ್ನ ವೃತ್ತಿ ಮತ್ತು ಪ್ರವೃತ್ತಿಯ ಬಗ್ಗೆ ಆಧುನಿಕ ಪ್ರಜ್ಞೆ ಇತ್ತು. ಆದರೆ ನಿರುದ್ಯೋಗ ಹಾಗು ಬಡತನದಿಂದ ಕಂಗೆಟ್ಟಿದ್ದ ಎಂದು ರಾಜಶೇಖರ್ ಹೇಳಿದರು.

`ಮಾಂಟೋ ನೆನಪು'ವಿನೊಂದಿಗೆ ಪತ್ರಕರ್ತ ಬಿ.ಎಂ.ಬಶೀರ್ರ `ಅಂಗೈಯಲ್ಲೇ ಆಕಾಶ' ಹನಿಕತೆಗಳ ಜೊತೆ ಒಂದು ಸಂಜೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಲೇಖಕಿ ಭುವನೇಶ್ವರಿ ಹೆಗಡೆ `ಸಮಾಜದ ಸ್ವಾಸ್ಥ ಕಾಪಾಡುವ ಹೊಣೆ ಸಾಹಿತಿಗೆ ಮುಖ್ಯವಾಗಿದೆ ಎಂದರು.

ಬಳಿಕ ಬಶೀರ್ ಜತೆ ಸಂವಾದ ನಡೆಯಿತು. ಉಪನ್ಯಾಸಕಿ ಸಫಿಯಾ ಕಾರ್ಯಕ್ರಮ ನಿರೂಪಿಸಿದರು.

0 comments:

Post a Comment