ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಸಂಸ್ಕೃತಿಯ ಪುನರುತ್ಥಾನಕ್ಕೊಂದು ಹೊಸ ಹೆಜ್ಜೆ - ಭಾಗ : 3
ಕಾಡಗರ್ಭದೊಳಗೆ ನೆಲೆನಿಂತ ಪಾಳುಬಿದ್ದಿ ಶಿಥಿಲ ಶ್ರೀ ಉಮಾಮಹೇಶ್ವರ ದೇವಾಲಯ ಪ್ರಾಚೀನ ಶಿಲ್ಪಿಗಳ ಚಾಣಾಕ್ಷತನಕ್ಕೆ ಹಿಡಿದ ಕೈ ಗನ್ನಡಿ. ಪುರಾತನ ಹಾಗೂ ವಾಸ್ತುವೈಭವಕ್ಕೆ ಒಂದು ನಿದರ್ಶನ ಈ ದೇಗುಲ.


ವಾಸ್ತುಶಿಲ್ಪ ಮತ್ತು ಜ್ಯೋತಿಷ್ಯಶಾಸ್ತ್ರಗಳ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದ ಮಾಹಿತಿಯಂತೆ ಕ್ರಿ.ಶ.10ನೇ ಶತಮಾನಕ್ಕೆ ಸೇರಿದ ದೇಗುಲ ಇದಾಗಿದೆ.

"ಕಲ್ಯಾಣ ಚಾಲುಕ್ಯ ಶೈಲಿ"ಯಲ್ಲಿ ನಿರ್ಮಾಣಗೊಂಡ ಈ ದೇಗುಲ 2400 ಚದರ ಅಡಿಗಳಷ್ಟು ವಿಶಾಲವಾಗಿದೆ. ಹಸಿರು ಕ್ಲೋರೈಸಿಸ್ಟ್ ಶಿಲೆಯಿಂದ ಈ ದೇಗುಲ ನಿರ್ಮಾಣಗೊಂಡಿದೆ. ಸಂಪೂರ್ಣ ಶಿಲಾಮಯವಾದ ಈ ದೇಗುಲದಲ್ಲಿ ಬಹಳಷ್ಟು ಬೃಹತ್ ಗಾತ್ರದ ಏಕಶಿಲೆಗಳನ್ನು ಬಳಸಲಾಗಿದೆ.

ದೇಗುಲದ ಮುಂಭಾಗದಲ್ಲಿರುವ ರಂಗಮಂಟಪದ ಕಂಬಗಳು, ದೇಗುಲದ ಗರ್ಭಗುಡಿಯ ಪ್ರವೇಶ ಧ್ವಾರ, ಗರ್ಭಗುಡಿಯ ಹೊರ ಆವರಣ ಮತ್ತು ಒಳಭಾಗದಲ್ಲಿರುವ ಕಲಾತ್ಮಕ ಕೆತ್ತನೆಗಳು, ಬಾಗಿಲ ಜಂಥಿಯಲ್ಲಿನ ಕೆತ್ತನೆಗಳು, ಕಿಟಿಕಿ, ಗೋಡೆಗಳ ಸೂಕ್ಷ್ಮಕೆತ್ತನೆಗಳು ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆಯುತ್ತದೆ.


ಈ ದೇಗುಲವು ರಂಗಮಂಟಪ, ಸಭಾಮಂಟಪ, ಪ್ರದಕ್ಷಿಣಾ ಪಥ, ಸಾಂದರ ಗರ್ಭಗೃಹವನ್ನೊಳಗೊಂಡಿದೆ . ಸಭಾಮಂಟಪದ ಕಲಾತ್ಮಕ ಕಂಬಗಳು ಭಿನ್ನ ವಿಭಿನ್ನ ಕೆತ್ತನೆ ರಚನೆಗಳು, ಕಕ್ಷಾಸನದ ಮೇಲಿನ ಕಂಬಗಳು, ಮೇಲ್ಛಾವಣಿಯ ಮರದ ಪಟ್ಟಿಕೆಗಳಂತಹ ಶಿಲಾ ರಚನೆಗಳು - ಕೆತ್ತನೆಗಳು ಪ್ರಾಚೀನ ಶಿಲ್ಪಿಗಳ ಅಮೋಘ ಕೈ ಚಳಕಕ್ಕೆ ಸಾಕ್ಷಿಯಾದಂತಿದೆ.

ಅಚ್ಚರಿ ಮೂಡಿಸುವ ಮಿಥುನ ಶಿಲ್ಪಗಳು...

ರಂಗಮಂಟಪವು ಪೂರ್ವ, ಉತ್ತರ ಮತ್ತು ದಕ್ಷಿಣದಲ್ಲಿ ತೆರೆದುಕೊಂಡಂತೆ ರಚಿಸಲಾಗಿದೆ. ದೇವಾಲಯದ ಹೊರಭಾಗದಲ್ಲಿ ರಂಗ ಮಂಟಪದ ಕೆಳಭಾಗದ ಗೋಡೆಗಳ ಮೇಲೆ ಕೆತ್ತಲಾದ ಮಿಥುನ ಶಿಲ್ಪಗಳು ಕಲಾತ್ಮಕತೆಯಿಂದ ಕೂಡಿದೆ.


ಕಾಲಗರ್ಭದೊಳು ಸಿಲುಕಿ ಈ ಶಿಲ್ಪಗಳು ಇಂದು ಕಳೆ ಕಳೆದುಕೊಂಡಿವೆ. ಅಸ್ಪಷ್ಟವಾಗಿ ಹಲವು ವಿಗ್ರಹಗಳು ಗೋಚರಿಸುತ್ತಿವೆ. ಆದರೆ ಈ ವಿಗ್ರಹಗಳ ಕೆಳಭಾಗದಲ್ಲಿರುವ ಕುಸುರಿ ಕೆತ್ತನೆಯ ರಚನೆಗಳು ಇಂದಿಗೂ ಅತ್ಯಂತ ಸ್ಪಷ್ಟವಾಗಿರುವುದು ಮಾತ್ರ ವಿಚಿತ್ರ.
ಈ ದೇಗುಲದ ಹೊರಭಾಗದಲ್ಲಿ ಮಿಥುನ ಶಿಲ್ಪಗಳು ಕೆತ್ತಲ್ಪಟ್ಟಿವೆ.


ಇದು ಮಲೆನಾಡಿನ ಖಜುರಾಹೋ ಎಂದೇ ಖ್ಯಾತಿ ಪಡೆದಂತಿದೆ.
ಇಲ್ಲೂ ಒಂದು ವೈಶಿಷ್ಟ್ಯತೆಯನ್ನು ಗುರುತಿಸಬಹುದಾಗಿದೆ. ದೇಗುಲದ ಹೊರಭಾಗದ ಗೋಡೆಗಳಲ್ಲಿ ಮಿಥುನ ಶಿಲ್ಪಗಳ ಮಧ್ಯೆ ಮಧ್ಯೆ ದೇವರುಗಳ ಶಿಲ್ಪವನ್ನು ಕೆತ್ತಲಾಗಿದೆ. ಕೆಲವೊಂದು ಭಾಗಗಳಲ್ಲಿ ಅಪೂರ್ಣ ಶಿಲ್ಪಗಳನ್ನು , ಇನ್ನು ಕೆಲ ಭಾಗದಲ್ಲಿ ಕೆತ್ತನೆಗಳಿಲ್ಲದೆ ಹಾಗೇ ಬಿಡಲಾಗಿದೆ.

ಈ ಮಿಥುನ ಶಿಲ್ಪಗಳ ಕೆತ್ತನೆಗಳು ಹಲವು ಶಿಲ್ಪಿಗಳ ಕೈಚಳಕದಿಂದ ನಿರ್ಮಾಣವಾಗಿದೆ ಎಂಬುದನ್ನು ಸೂಚಿಸುತ್ತದೆ ಅಥವಾ ಅತ್ಯಂತ ಅವಸರವಸರವಾಗಿ ಈ ದೇಗುಲದ ಕಾರ್ಯ ಪೂರ್ಣಗೊಳಿಸಲಾಗಿದೆ ಎಂಬುದನ್ನು ಸೂಚಿಸುತ್ತದೆಯೋ ಸ್ಪಷ್ಟವಾಗುತ್ತಿಲ್ಲ.

ನಾಳೆ: ಪುನರ್ ಸೃಷ್ಠಿ...

ಚಿತ್ರ - ಲೇಖನ: ಹರೀಶ್ ಕೆ.ಆದೂರು.

3 comments:

KriShna RaJendra N Golla said...

thumbaa channagidhe.. yearly once naanu visit madtha erthini..

KriShna RaJendra N Golla said...

Hareesh nimma ella posts thumba channagiruthe.. nanu e vishesha place galige visit madtha erthini..

Anonymous said...

EE devasthana ellide? how to reach there??

Post a Comment