ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಪೆರಾಜೆ-ಮಾಣಿ: ಮಠ ಎಂದರೆ ತ್ರಿವೇಣಿ ಸಂಗಮ. ಅಲ್ಲಿ ದೇವರಿದ್ದಾನೆ, ಭಕ್ತರೂ ಇದ್ದಾರೆ. ಅವರಿಗೆ ಕೊಂಡಿಯ ರೂಪದಲ್ಲಿ ಗುರುಗಳಿರುತ್ತಾರೆ. ಮಠವೆಂದರೆ ಗುರು - ಶಿಷ್ಯ - ದೇವರು ಈ ಮೂರರ ಸಂಗಮ.ಅರ್ಥಾತ್ ತ್ರಿವೇಣೀ ಸಂಗಮ ಎಂದು ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ನುಡಿದರು.ಪೆರಾಜೆ - ಮಾಣಿ ಮಠಕ್ಕೆ ಭೇಟಿ ನೀಡಿದ ಶ್ರೀ ಗುರುಗಳು ಸೇರಿದ್ದ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದರು. ಪೆರಾಜೆಯ ಮಾಣಿ ಮಠದಲ್ಲಿ ಚಾತುರ್ಮಾಸ್ಯ ವೃತಾಚರಣೆಗೆ ಸಂಪೂರ್ಣ ಮನಸ್ಸಿದೆ. ಮುಂದಿನ ಚಾತುರ್ಮಾಸ್ಯ ಈ ಮಠದಲ್ಲೇ ನಡೆಸುವ ಬಗ್ಗೆ ಇರಾದೆಯಿದೆ ಎಂದ ಶ್ರೀಗಳು ಅದಕ್ಕೆ ಪೂರ್ವಭಾವಿಯಾಗಿ ಶಿಷ್ಯವರ್ಗದ ಅನುಕೂಲಕ್ಕಾಗಿ ಬೃಹತ್ ಸಭಾಭವನವೊಂದನ್ನು ಶೀಘ್ರ ನಿರ್ಮಿಸಬೇಕಾಗಿದೆ. ಈ ಕೆಲಸ ಅತ್ಯಂತ ಸರಳವಾಗಿ ಮತ್ತು ಅಷ್ಟೇ ಸುಸೂತ್ರವಾಗಿ ನೆರವೇರಲಿದೆ. ಶ್ರೀ ರಾಮನ ಪೂರ್ಣಾನುಗ್ರಹ ಲಭಿಸಲಿದೆ ಎಂದು ಆಶೀರ್ವದಿಸಿದರು.

ಸಭಾಭವನವೆಂದರೆ ಅದು ಶಿಷ್ಯರಿಗೆ ಸಂಬಂಧಪಟ್ಟದ್ದು. ಮಠದ ಮುಂಭಾಗದಲ್ಲಿ ಮಠಕ್ಕೆ ಮುಖಮಾಡಿದಂತೆ ನಿರ್ಮಾಣಗೊಳ್ಳಲಿದೆ. ಅಲ್ಲೂ ಒಂದು ಅಚ್ಚರಿ ಕಾಣಬಹುದಾಗಿದೆ. ಮಠದ ಮಧ್ಯಭಾಗದಲ್ಲಿ ಶ್ರೀ ರಾಮನ ಗುಡಿಯಿದೆ.

ಶ್ರೀ ರಾಮ ದೇವರು. ಮಠದಲ್ಲಿ ಗುರುನಿವಾಸವಿದೆ. ಮುಂಭಾಗದಲ್ಲಿ ಭಕ್ತರ - ಶಿಷ್ಯರ ಅನುಕೂಲಕ್ಕಾಗಿ ಸಭಾಭವನ,ಯಾತ್ರೀ ನಿವಾಸ.ಅಲ್ಲೂ ಭಕ್ತ - ಶಿಷ್ಯಯ ಹಾಗೂ ದೇವರ ನಡುವೆ ಗುರುಗಳು. ಅದೇ ತ್ರಿವೇಣೀ ಸಂಗಮವಿದ್ದಂತೆ ಎಂದು ಶ್ರೀ ಗುರುಗಳು ವ್ಯಾಖ್ಯಾನಿಸಿದರು.

0 comments:

Post a Comment