ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಅಣ್ಣಾ ಸಾರಿ...ಏನೋ ಮಾಡಾಡ್ಬಿಟ್ಟೆ...ನಂಗೆ ಮೂಡ್ ಸರಿಇರಲಿಲ್ಲ...ಇದು ಆಕೆಯಿಂದ ನನಗೆ ಬಂದ ಕೊನೆಯ ಎಸ್.ಎಂ.ಎಸ್. ಪ್ರತಿದಿನ ಕೋಳಿ ಕೂಗುವುದನ್ನು ಮರೆತಿದ್ದರೂ ಆಕೆ ಗುಡ್ ಮಾರ್ನಿಂಗ್ ಕಳುಹಿಸುವುದನ್ನು ಮರೆಯುತ್ತಿರಲಿಲ್ಲ. ಗುಡ್ ನೈಟ್...ಕೂಡಾ...ಗಂಟೆಗೊಂಮ್ಮೆ... "ಅಣ್ಣಾ.... "ಎಂಬ ಪ್ರೀತಿಯ ಸಂದೇಶ... ಆದರೆ ಏಕಾಏಕಿ ಅದೆಲ್ಲಾ ನಿಂತು ಹೋಗಿದೆ. ಕಾರಣಗೊತ್ತಿಲ್ಲ...ಎಲ್ಲದಕ್ಕೂ ಮೌನವೇ ಉತ್ತರ...ಅದು 2007ರ ಮೇ .23.ನಾನಾಗ ಪತ್ರಿಕೆಯೊಂದರ ಹಿರಿಯ ವರದಿಗಾರನಾಡಿದ್ದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ನಮ್ಮ ಕಚೇರಿಗೆ ತರಬೇತಿಗಾಗಿ ರಜಾ ಸಮಯದಲ್ಲಿ ಬರುತ್ತಿದ್ದರು. ಕಾಲೇಜೊಂದರ ಮೂರವರು ವಿದ್ಯಾರ್ಥಿನಿಯರು ನಮ್ಮ ಕಚೇರಿಗೆ ಬಂದಿದ್ದರು. ಬಂದು ದಿನಗಳೆರಡು ಕಳೆದಿದ್ದವು. ಅವರಿಗೆ ತರಬೇತಿ ಕೊಡುವ ಜವಾಬ್ದಾರಿ ನಮ್ಮ ಮೇಲಿತ್ತು. ಅದು ತರಬೇತಿಯ ಮೂರನೇ ದಿನ. ಮಧ್ಯಾಹ್ನ ಗಂಟೆ ಮೂರು ಕಳೆದು 34ನಿಮಿಷಗಳು ಉರುಳಿದ್ದವು. ಆ ಮೂವರ ಪೈಕಿ ಒಬ್ಬಾಕೆ ಒಂದು ಸಣ್ಣ ಪತ್ರ ಕೈಯಲ್ಲಿ ಹಿಡಿದು ತಂದು `ಇದನ್ನು ಓದಿ ನೋಡ್ತೀರಾ... ಪ್ಲೀಸ್' ಎಂದು ಆಕೆ ಕೇಳಿದಳು... ಅದ್ಯಾಕೋ ಮೂಡ್ ಸರೀ ಇತ್ತು... ಕುಳಿತಲ್ಲಿದ್ದಂಲೇ ಆಕೆಯ ಮುಖವನ್ನೂ ನೋಡದೆ `ಕೊಡು' ಎಂದೆ...
* * *
ರಿವಾಲ್ವಿಂಗ್ ಚೇರ್ ನಲ್ಲಿ ಕೂತೇ ಕೈ ಚಾಚಿ ಆ ಕಾಗದವನ್ನು ಕೈಗೆತ್ತಿಕೊಂಡೆ. ಮೊದಲೇ ಒರಟ.ವಿದ್ಯಾರ್ಥಿಗಳು ನನ್ನ ನೋಡಿದರೆ " ಒರಟನೊಡನೇ ತರಬೇತಿ ಪಡೆಯಬೇಕಲ್ಲಾ" ಎಂದು ತಲೆ ತಲೆ ಜಜ್ಜಿಕೊಳ್ಳುತ್ತಾರೆ. ಕೆಲಸದ ಬಗ್ಗೆ ಮುಲಾಜಿಲ್ಲದೆ ಆಗಬೇಕಾಗಿರೋ ಕೆಲ್ಸಗಳನ್ನು ಸರಿಯಾದ ಸಮಯಕ್ಕೆ ಮಾಡಲೇ ಬೇಕೆಂದು ಹೇಳುತ್ತಿರುವುದು ಮತ್ತು ಅದೇ ರೀತಿ ನಡೆದುಕೊಳ್ಳುತ್ತಿರುವುದು ನನ್ನ ಪರಿಪಾಠ. ಆ ಕಾರಣಕ್ಕಾಗಿಯೇ ಹಲವರಿಗೆ ನನ್ನ ನೋಡಿದರೆ ಅಷ್ಟಕ್ಕಷ್ಟೆ...ನಾನು ಹೇಳಿದ ಯಾವುದೇ ಅಸೈನ್ ಮೆಂಟ್ ಇರಬೇಕೆಂದು ಕಾಗದ ಪಡಕೊಂಡು ಓದತೊಡಗಿದೆ.

* * *


`ನಾನು ಹೇಳಬೇಕೆಂದು ಹಲವು ಬಾರಿ ಪ್ರಯತ್ನಿಸಿದೆ... ಆದರೆ ಹೇಳಲು ಸಾಧ್ಯವಾಗಲಿಲ್ಲ... ನನಗೆ ಒಡಹುಟ್ಟಿದ ಅಣ್ಣನಿಲ್ಲ, ತಂಗಿಯಿದ್ದಾಳೆ, ಪುಟ್ಟ ತಮ್ಮನಿದ್ದಾನೆ. ನನಗೂ ಒಬ್ಬ ಅಣ್ಣ ಬೇಕೆಂಬ ಹಂಬಲ ಬಹಳದಿನದಿಂದಿತ್ತು. ಆದರೆ ನಿನ್ನನ್ನು ನೋಡಿದಾಕ್ಷಣ ನೀನೇ ನನ್ನ ಅಣ್ಣ ಎಂಬ ಭಾವನೆ ಮನದಲ್ಲಿ ಅಚ್ಚೊತ್ತಿ ಬಂದಿದೆ. ಪ್ಲೀಸ್ ಇಲ್ಲ ಅನ್ಬೇಡ. ನಾನಿನ್ನ ಅಣ್ಣಾ ಅಂತ ಕರೆಯಲೇ...'


ನನಗೆ ಅಚ್ಚರಿ... ಸಂತೋಷ ಎಲ್ಲವೂ ಜೊತೆ ಜೊತೆಯಾಗಿ ಬಂತು... ನನಗೂ ಒಡಹುಟ್ಟಿದ ತಂಗಿಯಿಲ್ಲ... ಬಾಯ್ತುಂಬ ಅಣ್ಣಾ ಅಂತ ಪ್ರೀತಿಯಿಂದ ಕರೆಯುವ ತಂಗಿಯೊಬ್ಬಳು ಬೇಕೆಂದು ಹಂಬಲಿಸುತ್ತಿದ್ದೆ. ಅದೇನೋ ಕಾಕತಾಳಿಯವೋ ಎಂಬಂತೆ ತಂಗಿಯೊಬ್ಬಳು ನನ್ನೆದುರು ಬಂದು ನಿಂತಾಗ ಅಣ್ಣ ಎನಿಸಿಕೊಳ್ಳಲು ನನಗೇನು ತೊಂದರೆಯಾಗಿಲ್ಲ... ಸಂತೋಷದಿಂದಲೇ `ಹೇಳು ತಂಗೀ' ಅಂದೆ... ಅದೇನೋ ನನಗೂ ಗೊತ್ತಿಲ್ಲ... ಆಕೆಗೂ ಗೊತ್ತಿಲ್ಲ ಇಬ್ಬರ ಕಣ್ಣಂಚುಗಳೂ ತುಂಬಿದ್ದವು... ಹನಿನೀರು ನಮಗರಿವಿಲ್ಲದಂತೆಯೇ ಕೆನ್ನೆ ಮೇಲೆ ಹರಿದು ಕೆಳ ಬಿದ್ದವು...

ಅದಾಗಿ ನಾಡಿದ್ದು 23ಕ್ಕೆ ಸರಿಯಾಗಿ 5ವರುಗಳು ತುಂಬುತ್ತವೆ. ನಮ್ಮ ಅಣ್ಣ - ತಂಗಿ ಬಾಂಧವ್ಯ ಗಟ್ಟಿಯಾಗಿಯೇ ಸಾಗಿತ್ತು...
ಸ್ವಂತ ತಂಗಿಯಂತೆಯೇ ಆಕೆಯನ್ನು ಕಂಡಿದ್ದೇನೆ. ಆಕೆಯೊಂದಿಗೆ ಖುಷಿಯಾಗಿಯೇ ಇದ್ದೇನೆ... ದಿನಂಪ್ರತಿ ದೂರವಾಣಿ, ಎಸ್.ಎಂ.ಎಸ್ ಮೂಲಕ ನಮ್ಮ ಸಂಭಾಷಣೆ ಸಾಗುತ್ತದೆ.ಇದೀಗ ನನ್ನ ಪ್ರೀತಿಯ ಪತ್ನಿ ಆಕೆಗೆ ಸ್ವಂತ ಅತ್ತಿಗೆಯಿದ್ದಂತೆ. ನನ್ನ ದೂರವಾಣಿಗೆ ಮೆಸೇಜ್ ಕಳುಹಿಸಿ ಅದಕ್ಕೆ ನನ್ನ ರಿಪ್ಲಾಯ್ ಬರದಿದ್ದರೆ ಅತ್ತಿಗೆಗೆ ನೇರ ಕಂಪ್ಲೇಂಟ್ ಹೋಗುತ್ತೆ. ಚಿಕ್ಕ ಮಗುವಿನಂತೆ ತುಂತಾಟವಾಡುತ್ತಾಳೆ...ಜೀವನದಲ್ಲಿ ಸಂಬಂಧಗಳು ತುಂಬಾ ತುಂಬಾ ನೆಮ್ಮದಿ ನೀಡುವಂತಹುದು... ನಿಮ್ಮ ಜೀವನದಲ್ಲೂ ಈ ರೀತಿಯ ಅನುಭವಗಳಿರಬಹುದಲ್ಲವೇ...?

- ಎಚ್.ಕೆ.

1 comments:

Anonymous said...

antadde ondu kahi anubhava ide sir

Post a Comment