ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಮುಂಬಯಿ: ಕನ್ನಡ ಕಲಾಕೇಂದ್ರ ಮುಂಬಯಿ, ಮುಂಬಯಿಯ ಪ್ರತಿಷ್ಠಿತ ಸಂಘ ಸಂಸ್ಥೆಗಳನ್ನೊಳಗೊಂಡ ಅಭಿನಂದನಾ ಸಮಿತಿ ಮತ್ತು ಪ್ರತಿಷ್ಠಿತ ಭಜನಾ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ ಪ್ರಸಿದ್ಧ ಭಜನಾ ಗಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಶಸ್ತಿ ಪುರಸ್ಕೃತ ತಿರುಪತಿ ದಾಸಸಾಹಿತ್ಯ ಪ್ರಾಜೆಕ್ಟ್ ಪ್ರಚಾರಕ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿನಿಧಿ "ತಿರುಪತಿ ವೆಂಕಟರಮಣ"ಹಾಡನ್ನು ಹಾಡುವ ಮೂಲಕ ದಾಖಲೆ ಮೆರೆದ ಹಿರಿಯ ಗಾಯಕ ರಾಮಕೃಷ್ಣ ಕಾಟುಕುಟ್ಟೆ ಅವರ ದಾಸ ಸಂಕೀರ್ತನೆಯ ದ್ವಿಶತಕ ಕಾರ್ಯಕ್ರಮದ, ಅಭಿನಂದನಾ ಸಮಾರಂಭ ಮುಂಬಯಿ ಬಂಟರ ಸಂಘದ ರಾಧಾಬಾಯಿ ಟಿ ಭಂಡಾರಿ ಸಭಾಗೃಹ ಕುರ್ಲಾಪೂರ್ವದಲ್ಲಿ ಮೇ.5ಶನಿವಾರ ಮಧ್ಯಾಹ್ನ 2ಗಂಟೆಗೆ ನಡೆಯಲಿದೆ.

ಮಧ್ಯಾಹ್ನ 2ರಿಂದ 4ರ ತನಕ ಪ್ರತಿಷ್ಠಿತ ಭಜನಾ ಮಂಡಳಿಗಳಿಂದ ಭಜನೆ, 4ರಿಂದ 200ನೇ ದಾಸಸಂಕೀರ್ತನೆ ಕಾರ್ಯಕ್ರಮದ ಉದ್ಘಾಟನೆ,5ಗಂಟೆಗೆ ಅಭಿನಂದನಾ ಸಮಾರಂಭ ನಡೆಯಲಿದೆ. ವಿದ್ಯಾವಿಹಾರ ಅಂಬಿಕಾ ದೇವಸ್ಥಾನದ ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್ ಆಶೀರ್ವಚನ ನೀಡಲಿದ್ದಾರೆ. ಅತಿಥಿಗಳಾಗಿ ಬಂಟರ ಸಂಘದ ಕಾರ್ಯಾಧ್ಯಕ್ಷ ಕುಸುಮೋದರ ಡಿ.ಶೆಟ್ಟಿ ಭಾಗವಹಿಸುವರು.

0 comments:

Post a Comment