ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ವೇಣೂರು: ಇಲ್ಲಿಗೆ ಸಮೀಪದ ಹೊಸಂಗಡಿ ಗ್ರಾಮದ ಅಂಗರಕರಿಯ ಎಂಬಲ್ಲಿ ದೇವಸ್ಥಾನದ ಕುರುಹೊಂದು ಇತ್ತೀಚೆಗೆ ಪತ್ತೆಯಾಗಿದ್ದು, ಸ್ಥಳಪ್ರಶ್ನೆಯಲ್ಲಿ ಅದು ಸೂರ್ಯನಾರಾಯಣ ಕ್ಷೇತ್ರವಾಗಿತ್ತೆಂದೂ ಪಂಚಾಯತನ ಪೂಜೆಯೊಂದಿಗೆ, ಅತ್ಯಂತ ವಿಜೃಂಭಣೆಯಿಂದ 1200 ವರುಷಗಳ ಹಿಂದೆ ಮೆರೆಯುತ್ತಿತ್ತೆಂಬ ಮಾಹಿತಿ ಲಭ್ಯವಾಗಿತ್ತು.ಕ್ಷೇತ್ರದ ಜೀರ್ಣೋದ್ಧಾರ ಸೇರಿದಂತೆ , ಅಲ್ಲೊಂದು ದೇವಸ್ಥಾನ ನಿರ್ಮಾಣಕ್ಕೆ ಊರ ಪ್ರಮುಖರು ಸಿದ್ಧರಾಗಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ.ಇದೀಗ ಜೀರ್ಣೋದ್ಧಾರದ ಹೊಸ್ತಿಲಲ್ಲಿರುವ ಶ್ರೀ ಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ - ಅಂಗರಕರಿಯದಲ್ಲಿ ಪ್ರಥಮ ಆಶ್ಲೇಷ ಪೂಜಾ ಸಮಾರಂಭ ವಾಮದಪದವು ತಂತ್ರಿ ಶ್ರೀ ಉದಯ ಪಾಂಗಣ್ಣಾಯ ನೇತೃತ್ವದಲ್ಲಿ ನಡೆಯಿತು.

ಮುಂದೆ ಪ್ರತೀ ತಿಂಗಳ ಆಶ್ಲೇಷ ನಕ್ಷತ್ರದಂದು ಕ್ಷೇತ್ರದಲ್ಲಿ ಆಶ್ಲೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಬಡಕೋಡಿಗುತ್ತಿನ ಡಾ.ಪ್ರಸಾದ್, ಕ್ಷೇತ್ರದ ಪ್ರಧಾನ ಸಮಿತಿಯ ಅಧ್ಯಕ್ಷರಾದ ಎ.ಗಣರಾಜ್ ಭಟ್, ಉದಯ ಕುಮಾರ್ ಬಾಲವನ, ಗೋಪಾಲಕೃಷ್ಣ ಭಟ್, ಕಿರಣ್ ಕುಮಾರ್, ಕೃಷ್ಣಪ್ಪ, ಮೊದಲಾದವರಿದ್ದರು.

0 comments:

Post a Comment