ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮೈಸೂರು: ಮೈಸೂರು ಎಂದಾಕ್ಷಣ ಅರಮನೆ, ವೃಂದಾವನ, ನೀರ ಕಾರಂಜಿ,ಸಂಗೀತ ಕಾರಂಜಿ , ಅಣೆಕಟ್ಟು ಹೀಗೆ ಹಲವು ಅಂಶಗಳು ತಲೆಯೊಳಗೆ ಸುಳಿದುಬಿಡುತ್ತದೆ. ಸಂಜೆಯ ವೇಳೆಗೆ ಅರಮನೆ ನಗರಿಯ ವೃಂದಾವನ ಪಯಣವಂತೂ ಎಲ್ಲರಿಗೂ ಅಚ್ಚುಮೆಚ್ಚು.ಆದರೆ ಬಹಳಷ್ಟು ನಿರೀಕ್ಷೆ ಮುಂದಿಟ್ಟುಕೊಂಡು ಸಾಗುವ ಈ ಪಯಣ ಎಷ್ಟರಮಟ್ಟಿಗೆ ತೃಪ್ತಿದಾಯಕ?ಮೈಸೂರು ಮತ್ತು ಮಂಡ್ಯ ಜಿಲ್ಲೆಗಳ ಜೀವನದಿಯಾದ ಕಾವೇರಿ ನದಿಗೆ ಅಡ್ಡಲಾಗಿ ಮೈಸೂರಿನಲ್ಲಿ ಅಣೆಕಟ್ಟನ್ನು ಕಟ್ಟಲಾಗಿದೆ. ಇದನ್ನು ಕಟ್ಟಿದ ಸಮಯದಲ್ಲಿ ಇದು ಭಾರತದಲ್ಲಿ ಅತಿ ದೊಡ್ಡ ಅಣೆಕಟ್ಟಾಗಿತ್ತು. ಮೈಸೂರಿನ ದಿವಾನರಾಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಈ ಅಣೆಕಟ್ಟನ್ನು ಕಟ್ಟಿಸಿದ ಇಂಜಿನಿಯರರಲ್ಲಿ ಪ್ರಮುಖರು. ಕೃಷ್ಣರಾಜಸಾಗರ ಅಣೆಕಟ್ಟಿನ ಮುಖ್ಯ ಉದ್ದೇಶಗಳೆಂದರೆ ನೀರಾವರಿ ಮತ್ತು ನೀರು ಸರಬರಾಜು.
ಈ ಅಣೆಕಟ್ಟು ೮೬೦೦ ಅಡಿ ಉದ್ದವಿದ್ದು ೧೩೦ ಅಡಿ ಎತ್ತರವಿದೆ. ಸ್ವಯಂಚಾಲಿತ ಸ್ಲ್ಯೂಸ್ ಗೇಟ್ ಗಳನ್ನು ಉಪಯೋಗಿಸಿದ ಪ್ರಪಂಚದ ಮೊದಲ ಅಣೆಕಟ್ಟುಗಳಲ್ಲಿ ಇದೂ ಒಂದು.


ಇದರ ಪಕ್ಕದಲ್ಲೇ ವೃಂದಾವನವಿದೆ. ವೃಂದಾವನದೊಳಗೆ ವಿವಿಧ ಕಾರಂಜಿಗಳನ್ನು ಅಳವಡಿಸಲಾಗಿದೆ. ಸಮೃದ್ಧವಾದ ಸಸ್ಯರಾಶಿ...ಹೂ ಗಿಡಗಳು.ಹುಲ್ಲುಹಾಸು...ಇದೆಲ್ಲವೂ ವೀಕ್ಷಕರಿಗೆ, ಪ್ರವಾಸಿಗರಿಗೆ ಮುದ ನೀಡುವ ವಿಷಯಗಳೇ...
ಬೃಂದಾವನ ಉದ್ಯಾನ ಕೃಷ್ಣರಾಜಸಾಗರ ಅಣೆಕಟ್ಟಿಗೆ ಹೊಂದಿಕೊಂಡಂತೆ ಕಟ್ಟಲಾದ ಸುಂದರ ಉದ್ಯಾನ. ಇದರ ತುಂಬ ಆಕರ್ಷಕವಾದ ನೀರಿನ ಕಾರಂಜಿಗಳಿವೆ. ಇಲ್ಲಿನ ಪ್ರಸಿದ್ಧ ಸಂಗೀತ ಕಾರಂಜಿ ಪ್ರವಾಸಿಗಳನ್ನು ಅನೇಕ ದಶಕಗಳಿಂದ ಆಕರ್ಷಿಸಿದೆಯಾದರೂ ಇದು ನಿರೀಕ್ಷಿತ ಮಟ್ಟದಲ್ಲಿ ಪ್ರವಾಸಿಗರ ಮನ ತಣಿಸುತ್ತಿಲ್ಲ. ಕನ್ನಡ ನಾಡಿನ ಜೀವನದಿ ಕಾವೇರಿ ಎಂಬ ಕನ್ನಡ ಹಾಡಿನೊಂದಿಗೆ ಕಾರಂಜಿಯನ್ನು ವೀಕ್ಷಕರಿಗೆ ತೆರೆದಿಡಲಾಗುತ್ತದೆ.ಸಂಗೀತಕ್ಕೆ ತಕ್ಕಂತೆ ನೀರ ಹಾರಾಟ.ವರ್ಣ ವೈವಿಧ್ಯ.ಅದೆಲ್ಲವೂ ಮೆಚ್ಚತಕ್ಕಂತಹುದು. ತದನಂತರ ಮತ್ತೆರಡು ಹಾಡಿಗೂ ನೃತ್ಯ ಅಳವಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದೆಲ್ಲವೂ ಒಂದೇ ರೀತಿಯಲ್ಲಿ ಇರುವುದರಿಂದ ಅಷ್ಟೊಂದು ಮುದ ನೀಡುತ್ತಿಲ್ಲ. ಸಂಜೆ 4ರ ವೇಳೆಗೆ ವೀಕ್ಷಕರಿಂದ ತುಂಬುವ ಗ್ಯಾಲರಿಗಳು, ಕಿಕ್ಕಿರದ ಜನಸಂದಣಿ ...ಎಲ್ಲರೂ ಸಂಗೀತ ಕಾರಂಜಿಯ ಆಗಮನಕ್ಕೆ ಕಾಯುವವರೇ... ಸರಿಯಾಗಿ 7ಗಂಟೆಗೆ ಕಾರಂಜಿ ಆರಂಭವಾಗುತ್ತದೆ.ಆದರೆ ಜನತೆಯ ಕಾತರ ನಿರೀಕ್ಷೆಗಳನ್ನು ತಲುಪುವಲ್ಲಿ ಮಾತ್ರ ವಿಫಲವಾಗುತ್ತದೆ.

ಸರ್ ಮಿರ್ಜಾ ಇಸ್ಮಾಯಿಲ್ ಅವರ ಕನಸಿನ ಕೂಸಾದ ಬೃಂದಾವನದ ಸಂಗೀತ ಕಾರಂಜಿ, ವಿವಿಧ ಕಾರಂಜಿಗಳು, ವಿದ್ಯುದೀಪಾಲಂಕಾರದ ಬೆಳಕಿನಲ್ಲಿ ಒಮ್ಮೆ ನೋಡಬಹುದೆಂಬಂತೆ ಮಾಡುತ್ತವೆ. ಆದರೆ ಇಂದಿನ ಆಧುನಿಕತೆ, ವೈಜ್ಞಾನಿಕತೆಗಳು ಮುಂದುವರಿದ ಪ್ರಸಕ್ತ ಸನ್ನಿವೇಶದಲ್ಲಿ ಇನ್ನೂ ಅಂದವಾಗಿ ಈ ಸಂಗೀತ ಕಾರಂಜಿಯನ್ನು ವ್ಯವಸ್ಥೆಗೊಳಿಸಲು ಸಾಧ್ಯವಿದೆ. ಅದು ಆಗಬೇಕಾಗಿದೆ. ಪ್ರವಾಸಿಗರು ದುಡ್ಡು ತೆತ್ತು , ನೂಕು ನುಗ್ಗಲಿನಲ್ಲಿ ಸಂಗೀತ ಕಾರಂಜಿ ವೀಕ್ಷಣೆಗೆ ತೆರಳಿದರೆ ಇದು ಇಷ್ಟೆನಾ ಎಂಬ ಭಾವನೆ ಮೂಡದಂತಾಗಬೇಕಾಗಿದೆ.

-ಟೀಂ ಈ ಕನಸು.

0 comments:

Post a Comment