ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಭಕ್ತ ಕೋಟಿಗೆ ಶ್ರೀಗುರುಗಳ ಅಕ್ಕರೆಯ ಕರೆ...

ಈ ಕನಸು.ಕಾಂ ಗೆ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ವಿಶೇಷ ಸಂದರ್ಶನ


ಪೆರಾಜೆ - ಮಾಣಿ : " ಬನ್ನಿ...ಜೊತೆಯಾಗಿ ಚಾತುರ್ಮಾಸ್ಯ ವ್ರತಾಚರಿಸೋಣ..." ಇದು ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪ್ರೀತಿಯ ಕರೆ.


ಅವಿಚ್ಛಿನ್ನ ಪರಂಪರೆಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ 19ನೇ ಚಾತುಮಾಸ್ಯ ವ್ರತಾಚರಣೆಯನ್ನು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀ ರಾಮಾಶ್ರಮದಲ್ಲಿ ಜುಲೈ 3ರಿಂದ 90 ದಿನಗಳ ಕಾಲ ಕೈಗೊಳ್ಳಲಿದ್ದಾರೆ. ಚಾತುರ್ಮಾಸ್ಯ ಪೂರ್ವದಲ್ಲಿ " ಈಕನಸು.ಕಾಂ "ಗೆ ಶ್ರೀಗುರುಗಳು ವಿಶೇಷ ಸಂದರ್ಶನ ನೀಡಿ ಮಠದ ಭಕ್ತ ಕೋಟಿಗೆ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭದಲ್ಲಿ ಭಾಗಿಗಳಾಗುವಂತೆ ಅಕ್ಕರೆಯ ಕರೆ ನೀಡಿದ್ದಾರೆ.ಅವಿಚ್ಛಿನ್ನ ಪರಂಪರೆಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪರಮಪೂಜ್ಯರೂ ಮಹಾನ್ ತಪಸ್ವಿಗಳೂ ಶ್ರೇಷ್ಠವಿದ್ವಾಂಸರೂ ಅಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ 1994ರ ಏಪ್ರಿಲ್ ತಿಂಗಳಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡರು.

1999ರ ಏಪ್ರಿಲ್ ತಿಂಗಳಲ್ಲಿ ಪೀಠಾರೋಹಣ ಮಾಡಿದರು. ಅಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಆಧ್ಯಾತ್ಮ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ.

ಭಾರತೀಯ ಗೋ ತಳಿಗಳ ಸಂರಕ್ಷಣೆ, ಅಭಿವೃದ್ಧಿ ಗಾಗಿ ಶ್ರೀಗಳು ಕೈಗೊಂಡ ಯೋಜನೆ ಇಡೀ ವಿಶ್ವವನ್ನೇ ಇತ್ತ ದೃಷ್ಠಿನೆಡುವಂತೆ ಮಾಡಿದೆ.ವಿಶ್ವಗೋ ಸಮ್ಮೇಳನದ ಮೂಲಕ ಮನೆ ಮನಗಳಲ್ಲಿ ಗೋವಿನ ಕುರಿತಾದ ಅಭಿಮಾನ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದರು. ಇದೀಗ ಚಾತುರ್ಮಾಸ್ಯದ ನಂತರ "ಮಹಾ ಗೋ ಅಭಿಯಾನ"ದ ಮಹತ್ಕಾರ್ಯವನ್ನು ಸಾರ್ಥಕ್ಯಗೊಳಿಸುವ ಕಾರ್ಯಕ್ಕೆ ಕೈ ಯಿಕ್ಕಿದ್ದಾರೆ.

ಜನರ ಮನ ಪರಿವರ್ತನೆ ಮಾಡುವ ಮೂಲಕ ಗೋ ಸಂತತಿಯ ಅಭಿವೃದ್ಧಿ, ರಕ್ಷಣೆ ಸಾಧ್ಯ ಎಂಬ ಹಿನ್ನಲೆಯಲ್ಲಿ ಗೋ ರಕ್ಷಕರನ್ನು ಸಿದ್ಧಗೊಳಿಸುವ, ಗೋ ಜಾಗೃತಿಯನ್ನು ಸಮಾಜದಲ್ಲಿ ಮೂಡಿಸುವ ಕಾರ್ಯ ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಸಂಪನ್ನಗೊಳ್ಳಲಿದೆ.
ಚಾತುರ್ಮಾಸ್ಯ ವೃತ ಮಳೆಗಾಲದಲ್ಲಿ ನಡೆಸಲಾಗುತ್ತದೆ.

ಮಳೆಗಾಲದಲ್ಲಿ ಆಗಸದಿಂದ ಬಿದ್ದ ನೀರ ಹನಿಗಳು ಜೊತೆಯಾಗಿ ತೋಡು, ನದಿ, ಕಾಲುವೆ, ವಿವಿಧ ಮೂಲಗಳ ಮೂಲಕ ಜೊತೆಸೇರಿ ಸಮುದ್ರಕ್ಕೆ ಸೇರುತ್ತದೆ. ಅದೇ ರೀತಿ ಸಾಗರದ ರೂಪದಲ್ಲಿ ಸಮಾಜದಲ್ಲಿರುವ ಭಕ್ತ ಸಮೂಹ ರಾಮನ ಸನ್ನಿಧಿಗೆ ಚಾತುರ್ಮಾಸ್ಯ ಸಂದರ್ಭದಲ್ಲಿ ಬನ್ನಿ... ನಾವು (ಶ್ರೀ ಗುರುಗಳು) 90ದಿನಗಳ ಕಾಲ ಚಾತುರ್ಮಾಸ್ಯ ವ್ರತದಲ್ಲಿ ಭಾಗಿಗಳಾದರೆ ಶಿಷ್ಯ ವೃಂದ ಒಂದೋ , ಎರಡೂ, ಮೂರೋ ...ಅಥವಾ ಸಾಧ್ಯವಾದಷ್ಟು ದಿನಗಳ ಕಾಲ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗುವ ಮೂಲಕ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಸೇರಿಕೊಳ್ಳಿ...ಜೊತೆಯಾಗಿ ಚಾತುರ್ಮಾಸ್ಯವ್ರತಾಚರಿಸೋಣ ಎಂದರು.
" ಹಿಂದೆ ನೋಡಿ ಮುಂದೆ ಹೋಗಿ..." ಈ ಮಾರ್ಮಿಕ ಸಂದೇಶವನ್ನು ಶ್ರೀ ಗುರುಗಳು ಸಮಾಜಕ್ಕೆ ರವಾನಿಸಿದ್ದಾರೆ. ಪ್ರತಿಯೊಬ್ಬರೂ ಮುಂದೆ ಹೋಗುವ ಭರದಲ್ಲಿ ಹಿಂದಿನ ಪರಂಪರೆ, ನಡೆದು ಬಂದ ಹಾದಿಯನ್ನು ಮರೆಯುತ್ತಿದ್ದಾರೆ. ಇದು ಸರಿಯಲ್ಲಿ ಹಿಂದಿನ ಪರಂಪರೆಗೆ , ಪಥಕ್ಕೆ ವ್ಯತಿರಿಕ್ತವಾಗದಂತೆ ಎಚ್ಚರದಿಂದ ಮುಂದೆ ಹೋಗಬೇಕಾಗಿದೆ. ಪ್ರಗತಿ ಬೇಕೇ ಬೇಕು.

ಈ ಪ್ರಗತಿಯ ಭರದಲ್ಲಿ ಬಂದ ಪಥವನ್ನು ಮರೆಯಬಾರದು...ಹಾಗೆಂದು ಹಿಂದೆ ನೋಡುತ್ತಾ ಸಾಗಿದರೆ ಎಡವುವ ಸಾಧ್ಯತೆಯಿದೆ...ಮುಂದೆ ಸಾಗಿದಷ್ಟು ಹಿಂದಿನ ಪಥವನ್ನು ನೆನಪಿಸುತ್ತಾ ಅದಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಮುಂದೆ ಸಾಗಿ...ಸಾಗುವ ರೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಮುಖ್ಯ ಎಂಬ ಸೂಕ್ಷ್ಮ ಸಂದೇಶವನ್ನು ಶ್ರೀಗುರುಗಳು ನೀಡಿದರು.

- ಹರೀಶ್ ಕೆ.ಆದೂರು

1 comments:

chirayugk said...

hare raama

Post a Comment