ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

`ಅದ್ಭುತ ಬಾಲಕಿ' ಖ್ಯಾತಿಯ ಅಯನಾ ವಿ.ರಮಣ್ ನೃತ್ಯ-ಪ್ರತಿಭಾ ಪ್ರದರ್ಶನ ಸಪ್ತಾಹ'
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ: ಕರ್ನಾಟಕ ರಾಜ್ಯದಾದ್ಯಂತ ನೂರಾರು ಪ್ರದರ್ಶನಗಳನ್ನು ನೀಡಿ `ಅದ್ಭುತ ಬಾಲಕಿ' ಖ್ಯಾತಿ ಗಿಟ್ಟಿಸಿ ಕೊಂಡಿರುವ, ನಯನ ಮನೋಹರವಾದ ಭರತನಾಟ್ಯ ಕಾರ್ಯಕ್ರಮದಲ್ಲಿ ನಾಟ್ಯಮಯೂರಿ ಬಿರುದು ಪಡೆದಿರುವ ಕೇವಲ 9 ವರ್ಷ ಪ್ರಾಯದ ಬಹುಮುಖ ಪ್ರತಿಭೆ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, `ಅರಳುಮಲ್ಲಿಗೆ' ಪ್ರಶಸ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾಡಳಿತದ ಕರಾವಳಿ ಸಂಭ್ರಮ ಪುರಸ್ಕೃತ ಕು| ಅಯನಾ ವಿ.ರಮಣ್ ಇದೀಗ ಮುಂಬಯಿ ನೆಲದಲ್ಲಿ ತನ್ನ ಅದ್ಭುತ ಪ್ರತಿಭೆ ಮೆರೆಯತೊಡಗಿದ್ದಾಳೆ. ಪ್ರಥಮ ಬಾರಿಗೆ ಭಾರತ ರಾಷ್ಟ್ರದ ವಾಣಿಜ್ಯ ನಗರಿಯಲ್ಲಿ ತನ್ನ ನೃತ್ಯ-ಪ್ರತಿಭಾ ಪ್ರದರ್ಶನದ ಸಪ್ತಾಹಕ್ಕೆ ಮುನ್ನುಡಿ ಬರೆದಿರುವ ಈಕೆ ಭವಿಷ್ಯದಲ್ಲಿ ಓರ್ವ ಖ್ಯಾತ ಸಾಧಕಿಯಾಗುವ ಎಲ್ಲಾ ಲಕ್ಷಣ ಮೆರೆದಿದ್ದಾಳೆ.


ಮಹಾನಗರದಲ್ಲಿನ ಕಲಾಜಗತ್ತು ಮುಂಬಯಿ ಮತ್ತು ಸನಾತನ ವೇದಿಕೆ ಇವುಗಳ ಸಾರಥ್ಯದಲ್ಲಿ ಆಯೋಜಿಸಿರುವ `ಅಯನಾ ನೃತ್ಯ-ಪ್ರತಿಭಾ ಪ್ರದರ್ಶನ ಸಪ್ತಾಹ'ಕ್ಕೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೋನಿ ಇಲ್ಲಿನ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ಚಾಲನೆಯನ್ನೀಡಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತ ಕರ್ಣಾಟಕ ಬ್ಯಾಂಕ್ನ ಉಪ ಪ್ರಧಾನ ವ್ಯವಸ್ಥಾಪಕ ಸುಭಾಶ್ಚಂದ್ರ ಪುರಾಣಿಕ್ ಅವರು ದೀಪ ಬೆಳಗಿಸಿ `ಸಪ್ತಾಹ'ಕ್ಕೆ ಚಾಲನೆಯಿತ್ತರು.

ಕಾರ್ಯಕ್ರಮ ಫಲಕವನ್ನು ಅನಾರವಣಗೊಳಿಸಿ ಹಾಗೂ ಭಿತ್ತಿಪತ್ರವನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಪುರಾಣಿಕ್ ಅಯನಾ ತನ್ನ ಪ್ರತಿಭೆಯ ಮೂಲಕ ಸಂಸ್ಕೃತಿ ಸಾರುವ ಪಯಣ ಬೆಳೆಸಿದ್ದು ಇದು ಭಾರತೀಯ ಸಂಸ್ಕೃತಿಗೆ ಅಪೂರ್ವ ಕೊಡುಗೆಯಾಗಿದೆ. ಇಂತಹ ಅರಳು ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಅವಶ್ಯವಾಗಿದೆ. ಪ್ರೇರಣೆಯೇ ಪ್ರತಿಭಾ ಪುರಸ್ಕಾರವಾಗಿದ್ದು, ಇದನ್ನು ಸಾರ್ವತ್ರಿಕವಾಗಿ ಪೋಷಿಸಿ ಬೆಳೆಸಿದ್ದಲ್ಲಿ ಪ್ರತಿಭೆಗಳು ಬೆಳಕಾಗಿ ಪ್ರಕಾಶಿಸ ಬಲ್ಲವು. ಪ್ರಸ್ತುತ ಕಿರಿಯ ಪ್ರತಿಭೆಗಳ ಅತ್ಯಾದ್ಭುತವಾದ ಪ್ರದರ್ಶನದಿಂದ ಹಿರಿಯ ಕಲಾವಿದ ಪ್ರತಿಭೆಗಳು ಹಿಂದುಳಿಯುವಂತೆ ಮಾಡುತ್ತಿದೆ ಎನ್ನುತ್ತಾ ಕಾರ್ಯಕ್ರಮದ ಯಶಸ್ಸಿಗಾಗಿ ಶುಭಕೋರಿದರು.

ಕಾರ್ಯಕ್ರಮದಲ್ಲಿ ಡಾ| ಎಂ.ಸೀತರಾಮ ಆಳ್ವ, ಶಾಸ್ತವು ಶ್ರೀ ಭೂತನಾಥೇಶ್ವರ ದೇವಸ್ಥಾನ ಎಡಪದವು ಇದರ ಹರಿಣಾಕ್ಷಿ ವಿಜಯನಾಥ್ ಶೆಟ್ಟಿ, ಪೇಜಾವರ ಮಠ ಮುಂಬಯಿ ಶಾಖೆಯ ಪ್ರಧಾನ ವ್ಯವಸ್ಥಾಪಕರುಗಳಾದ ವಿದ್ವಾನ್ ರೆಂಜಾಳ ರಾಮದಾಸ್ ಉಪಾಧ್ಯಾಯ, ರಾಮಕುಂಜ ಪ್ರಕಾಶ್ ಆಚಾರ್ಯ, ಸನಾತನ ವೇದಿಕೆಯ ಕಾರ್ಯದರ್ಶಿ ಬಾಲಕೃಷ್ಣ ಹೆಗ್ಡೆ ಬೆಳ್ಳಂಪಳ್ಳಿ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕು| ಅಯನಾ ಅವರನ್ನು ಸ್ಮರಣಿಕೆ, ಪುಷ್ಫಗುಪ್ಚ ನೀಡಿ ಶಾಲು ಹೊದಿಸಿ ಗೌರವಿಸಿದರು.

ಏಕಕಾಲದಲ್ಲಿ ಎರಡೂ ಕೈಗಳಲ್ಲಿ ಬೇರೆ ಬೇರೆ ತಾಳಗಳನ್ನು ಹಾಕಿಕೊಂಡು, ಬಾಯಲ್ಲಿ ಸಂವತ್ಸರಗಳ ಹೆಸರುಗಳನ್ನು ಹೇಳುತ್ತಾ ಒಂದು ಹುಬ್ಬನ್ನು ಮೇಲೆ-ಕೆಳಗೆ ಹಾರಿಸುವುದರೊಂದಿಗೆ ನೂರಾರು ಕನ್ನಡ ಸಾಹಿತಿಗಳ ಹೆಸರು ಹೇಳುತ್ತಾ, ನೂರೊಂದು ದೈವಗಳ ಹೆಸರುಗಳನ್ನು ಉವಾಚಿಸಿ 35 ತಾಳಗಳನ್ನು ವಿಭಿನ್ನ ಗತಿಗಳಲ್ಲಿ ಗುರುತಿಸಿ ವಿಶೇಷ ಜ್ಞಾಪಕ ಶಕ್ತಿಗೆ ಸವಾಲಾಗುವ ವಿಸ್ಮಯಗಳನ್ನು ಪ್ರದರ್ಶಿಸುತ್ತಾ ತನ್ನ ವೈಶಿಷ್ಟ್ಯ ಕಾರ್ಯಕ್ರಮ ಸಾದರ ಪಡಿಸಿ ನೆರೆದ ಎಲ್ಲಾ ಕಲಾಭಿಮಾನಿಗಳಿಗೆ ಆಶ್ಚರ್ಯಚಕಿತ ಗೊಳಿಸಿದಳು.

ಮುಂಬಯಿ ನಗರದಾದ್ಯಂತ ಮೇ 20ರಿಂದ 26ರ ವರೆಗೆ ಮನೆ ಮನೆಗಳಿಗೆ ಸಾಗಿ ಮನ ಮನಗಳನ್ನು ಅಚ್ಚರಿ ಮೂಡಿಸಿದ ದಿ ಜರ್ನಿ ಆಫ್ ಡಾನ್ಸ್ ಟು ಹೌಸಸ್ ಹೆಸರಿನಿಂದ ಭರತನಾಟ್ಯ, ಸಂಗೀತ, ನೃತ್ಯ ಮತ್ತು ಸಂಸ್ಕೃತಿಗಳ ಜಾಗೃತಿ ಅಭಿಯಾನ ಆಗಿರಿಸಿ ಈ ವಿಶೇಷ ಕಾರ್ಯಕ್ರಮವನ್ನು ನೀಡುತ್ತಿದ್ದು, ಪ್ರತಿಭಾನ್ವಿತ ಅತ್ಯಾದ್ಭುತ ಪ್ರತಿಭೆಯನ್ನು ಪ್ರೋತ್ಸಾಹಿಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಭಾರತೀಯ ಕಲೆಗಳ ತರಬೇತಿ ಕೇಂದ್ರ ರಂಗಭಾರತಿಯ ನಿರ್ದೇಶಕ, ಕಲಾವಿದ, ಪತ್ರಕರ್ತ ಕೆ.ವಿ.ರಮಣ್-ಉಪನ್ಯಾಸಕಿ ಮುಕಾಂಬಿಕಾ ದಂಪತಿ ವಿನಂತಿಸಿದ್ದಾರೆ.

ದಿ ಜರ್ನಿ ಆಫ್ ಡಾನ್ಸ್ ಟು ಹೌಸಸ್ ಎಂಬ "ನಾಟ್ಯಾಯನ"ಕಾರ್ಯಕ್ರಮದ ಮಾಧ್ಯಮ ಸಹಭಾಗಿತ್ವವನ್ನು ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿತಾಣ ಈ ಕನಸು.ಕಾಂ ವಹಿಸಿದೆ.

1 comments:

Anonymous said...

good news coverage with photographs

Post a Comment