ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೇಹವೇ ದೇಗುಲ ಅಂದಾವ ಶರಣ
ಕೈಯೊಳಗೇನೆ ಲಿಂಗ ತಂದಾವ ಶರಣ
ಜಾತಿ ಮುಳ್ಳನು ಕಿತ್ತಿ ಒಗೆದಾವ
ಜಾತ್ಯಾತೀತತೆಯ ದಾರೀಲಿ ನಡೆದಾವ ಶರಣ

ಕಾಯಕದಿ ಕೈಲಾಸ ಕಂಡಾವ
ಆದರ್ಶ ಜಗದ ಕನಸ ಕಂಡಾವ ಶರಣ

ಜಗಕೆ ಚಿಂತನೆಯ ಕಿಚ್ಚ ಹಚ್ಚಿದಾವ
ಜನರ ಹೃದಯದಿ ಜ್ಯೋತಿಯಾಗುಳಿದಾವ ಶರಣ

ಇವರಾರೆನ್ನುವ ಹಂಗ ತೊರೆದಾವ
ಎಲ್ಲ ನಮ್ಮವರೆಂದು ಪ್ರೀತಿ ಮಾಡಿದಾವ ಶರಣ

ಲಿಂಗ ಬೇಧವ ಅಳಿಸಿ ನಿಂದಾವ
ಹೆಣ್ಣು -ಗಂಡು ಒಂದೇ ಎಂದಾವ ಶರಣ

ಶರಣರ ನಾಡ ಕಟ್ಟಿ ತಂದಾವ
ನಡೆ-ನುಡಿಯನು ಒಂದೇ ಎಂದಾವ ಶರಣ

ಅನುಭವ ಮಂಟಪ ಕಟ್ಟಿ ಬಿಟ್ಟಾವ
ಅನುಭಾವದ ಬೀಜ ನೆಟ್ಟೇ ಬಿಟ್ಟಾವ ಶರಣ

ಆಸೆಯ ಹಂಗಿನ ಹಂಗ ತೊರದಾವ
ದಾಸೋಹ ಭಾವದಿ ಒಂದಾಗಿ ನಡೆದಾವ ಶರಣ

ಬಿಜ್ಜಳ ಅರಸನಲಿ ಕರಣಿಕನಾದಾವ
ಜಗದ ಜನಕೆ ಕಾರಣಿಕನಾದಾವ ಶರಣ

ಜನರ ಜೀವದಿ ಒಂದಾಗಿ ಹೋದಾವ
ಜಗದಿ ವಚನದ ಪ್ರಕಾಶವ ಚೆಲ್ಲಿ ಹೋದಾವ ಶರಣ

ಶರಣಾರ ಶರಣ ವಚನದಿ ಮೂಡ್ಯಾವ ಕಿರಣ
ಸದಾ ಹೃದಯದಿ ನೆಲೆ ನಿಂದಾವ ಕೂಡಲ ಸಂಗನ ಶರಣ

ಪ್ರಕಾಶ.ಬಿ. ಜಾಲಹಳ್ಳಿ

1 comments:

Anonymous said...

sharanar sharn kvite chenngigde nimage shranu sharnarti. shivu

Post a Comment