ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಬೇಡ್ತಿ ತೀರದಲ್ಲಿ ದೆವ್ವಗಳ ಕಾಟ
ವಿಶೇಷ ವರದಿ
ದೆವ್ವ, ಭೂತ, ಪಿಶಾಚಿ ಅಂದರೆ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರ ತನಕ ಎಲ್ಲರಿಗೂ ಅಂಜಿಕೆ. ಅದೊಂಥರಾ ಕುತೂಹಲ. ಆ ಶಬ್ದಗಳೇ ಒಂಥರಾ ನಿಗೂಢ ಹಾಗೂ ಸ್ವಾರಸ್ಯಕರ.ಹೌದು ನಾವು ಹೇಳ ಹೊರಟದ್ದೂ ಅದನ್ನೇ...


ಮುಸಂಜೆಯ ಸಮಯ, ಹಳೇಯ ಪಾಳು ಬಂಗಲೆ, ನಿರ್ಜನ ಪ್ರದೇಶ, ತಣ್ಣನೆಯ ಗಾಳಿ, ಒಂಟಿ ಮಹಿಳೆ ಇಂಥವುಗಳೆಲ್ಲ ಸಿನಿಮಾದೃಶ್ಯಗಳಲ್ಲಿ ಬರುವಂತಹ ಕಾಲ್ಪನಿಕ ದೆವ್ವಗಳ ಸನ್ನಿವೇಶಗಳಾದರೆ ನೈಜತೆಯ ಸಾರಥ್ಯಹೊತ್ತಂತವು ಇನ್ನೂ ಅನೇಕವಿದೆ.

ಯಲ್ಲಾಪುರ - ಸಿರಸಿ ಮಾರ್ಗಮದ್ಯೆ ನಡುರಾತ್ರಿ ದೆವ್ವಗಳ ಕಾಟವಿದೆಯಂತೆ.ಇದು ಹಲವರ ಅನುಭವದ ಮಾತು. ಅಮವಾಸ್ಯೆಯಂತಹ ರಾತ್ರಿಗಳಲ್ಲಿ ಇಲ್ಲಿ ಸಂಚರಿಸುವ ನರಮಾನವನಿಗೆ ದೆವ್ವಗಳು ಕೈಬೀಸಿ ಕರೆಯುತ್ತವಂತೆ..! ಹೆಣ್ಣಿನ ಆಕೃತಿಯೊಂದು ಇಲ್ಲಿ ಅಪರೂಪಕ್ಕೊಮ್ಮೆ ದರ್ಶನ ನೀಡಿ ಪ್ರಯಾಣಿಕರು ಪರಿತಪಿಸುವಂತೆ ಮಾಡುತ್ತದೆ.

ಬೇಡ್ತಿ ಘಟ್ಟದಲ್ಲಿ ವಾಹನಗಳು ಕೆಟ್ಟು ನಿಲ್ಲಲು, ಇದ್ದಕ್ಕಿದ್ದಂತೆ ಚಕ್ರದಲ್ಲಿನ ಗಾಳಿ ಮಾಯವಾಗಲು ಇಲ್ಲಿನ ದೆವ್ವದ ಮಹಿಮೆಯೇ ಕಾರಣವಂತೆ. ಆಸ್ತಿಕರಷ್ಟೆ ಅಲ್ಲ. ನಾಸ್ತಿಕರೂ ಕೂಡ ನಡುರಾತ್ರಿಯಲ್ಲಿ ಬೇಡ್ತಿ ತೀರವೆಂದರೆ ಅಂಜುತ್ತಾರೆ. ಈಗಿನ ಅಧುನಿಕ ಯುಗದಲ್ಲಿ ಇವೆಲ್ಲ ನಂಬಲಾಗದ ದೃಶ್ಯ. ಕೇಳಿದರೆ ಹಾಸ್ಯ ಮಾಡಿ ನಗಬಹುದಾದಂತ ವಿಷಯ. ಆದರೂ ಇಲ್ಲಿನ ಅನೇಕರ ಅನುಭವಗಳು ಬೆಚ್ಚಿ ಬೀಳಿಸುವಂತಹುದು.

ಇಲ್ಲಿನ ಅನುಭವವನ್ನು ಹಂಚಿಕೊಂಡ ಹಲವರು ಅದನ್ನು ಪುನ: ನೆನಪು ಮಾಡಿಕೊಳ್ಳಲು ಸಹ ಹೆದರುತ್ತಾರೆ. ಕಾರಿನಲ್ಲಿ ಸಂಚರಿಸುತ್ತಿರುವಾಗ ಕಿಡಕಿಯ ಬಳಿ ಬಂದು ದೆವ್ವವೊಂದು ಕಾಟ ಕೊಡುವದಂತೆ. ತಿಂಗಳುಗಳ ಹಿಂದೆ ರಾತ್ರಿ ವೇಳೆ ಕುಡಿಯುವ ನೀರಿನ ಯೋಜನೆಯೊಂದರ ಕೆಲಸದಲ್ಲಿ ನಿರತನಾಗಿದ್ದ ಕಾರ್ಮಿಕನೋರ್ವ ದೆವ್ವವನ್ನು ನೋಡಿದ್ದನಂತೆ. ಹಳದಿ ಬಣ್ಣದ ಸೀರೆಯನ್ನುಟ್ಟ ಮಹಿಳೆಯೋವಳು ಕಂಡು ಕಾಣದಂತೆ ಮಾಯವಾಗುತ್ತಾಳಂತೆ.

ದ್ವಿಚಕ್ರ ಸವಾರನೋರ್ವನಿಗೆ ತನ್ನನ್ನು ಯಾರೋ ಹಿಂಬಾಲಿಸುತ್ತಲಿರುವಂತೆ, ಇನ್ನೋರ್ವರಿಗೆ ಕೈ ಬೀಸಿ ಕರೆದಂತೆ, ಕೆಲ ಪ್ರಯಾಣಿಕರಿಗೆ ತಮ್ಮ ಹೆಸರನ್ನಿಡಿದು ಯಾರೋ ಕೂಗಿದಂತೆ, ತನ್ನನ್ನು ಕಾಪಾಡು ಎಂದು ವಿನಂತಿಸಿಕೊಂಡಂತೆ ಕೇಳಿದ ಅನುಭವವಾಗಿದೆಯಂತೆ.!
ಅತ್ತ ಕಾಡಿನಂತಹ ಪ್ರದೇಶದಲ್ಲಿ ಸುತ್ತಲೆಲ್ಲೂ ಮನೆ - ಮಠಗಳಿಲ್ಲದಂತಹ ಪ್ರದೇಶದಲ್ಲಿ ಇಂಥಹದೊಂದು ವಾತಾವರಣವಿರುವ ಕುರಿತು ಕೇಳಿದರೆ ಆಶ್ಚರ್ಯವಾಗುವದು ಸಹಜ.


ಒಂಟಿ ಹೆಣ್ಣು ಗೋಚರಿಸುವ ಸನ್ನಿವೇಶ ಭಯ ಆತಂಕ ಎರಡನ್ನು ಉಂಟು ಮಾಡುತ್ತದೆ. ಜೊತೆಯಲ್ಲಿ ತೀರದ ಕುತೂಹಲವನ್ನು ಸಹ. ಇಲ್ಲಿ ಕಂಡುಬರುವ ಹೆಣ್ಣನ್ನು ಒಬ್ಬಂಟಿಹೆಣ್ಣು ಎಂದು ಕರೆಯುವಂತಿಲ್ಲ. ದೆವ್ವ ಎಂದು ಅಧಿಕೃತವಾಗಿ ಒಪ್ಪಿಕೊಳ್ಳಲು ವೈಚಾರಿಕತೆ ಬಿಡುವದಿಲ್ಲ. ಪುರಾತನ ಕಥೆಗಳನ್ನು ಆಲಿಸಿದರೆ ಬೇಡ್ತಿಗೆ ಸೇತುವೆ ಕಟ್ಟುವ ಮುನ್ನ ಮಾನವನ ಜೀವವೊಂದನ್ನು ಇಲ್ಲಿ ಬಲಿ ನೀಡಲಾಗಿದೆ ಎಂಬ ವದಂತಿಯೊಂದು ಕೇಳಿ ಬರುತ್ತದೆ. ಆ ಜೀವಕ್ಕೆ ಮುಕ್ತಿ ಲಭಿಸದೇ ಪ್ರೇತಾತ್ಮವಾಗಿ ಕಾಡುತ್ತದೆ ಎಂದು ಹೇಳುವವರು ಇದ್ದಾರೆ. ಈ ಕ್ಷೇತ್ರದಲ್ಲಿ ಘಟಿಸಿದ ಕೆಲ ಘಟನೆಗಳು ಕೆಲವರ ಊಹೆಗೆ ಬಿಟ್ಟದ್ದು. ಹಲವರಿಗೆ ಮರೆಯಲಾಗದ ರೋಚಕ ಅನುಭವ. ಒಟ್ಟಿನಲ್ಲಿ ಇದು ವಾಸ್ತವವನ್ನು ಮೀರಿದ ಜಗತ್ತು. ಇದರಲ್ಲಿ ಎಷ್ಟು ನೈಜತೆ ಅಡಗಿದೆ ಎಂಬುದು ಅವರವರ ಬಾವಕ್ಕೆ ಅವರವರ ಬಕುತಿಗೆ ಬಿಟ್ಟ ವಿಚಾರ.

ಅಚ್ಯುತಕುಮಾರ. ಯಲ್ಲಾಪುರ

1 comments:

Anonymous said...

IdakkenU Parihara..??

DarshaN

Post a Comment