ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಳ್ವಾಸ್ ಪ್ರಗತಿ: ಬೃಹತ್ ಉದ್ಯೋಗಮೇಳ
ಮೂಡಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿರುವ ಆಳ್ವಾಸ್ ಪ್ರಗತಿ -2012 ಬೃಹತ್ ಉದ್ಯೋಗಮೇಳಕ್ಕೆ ವೇದಿಕೆ ಸಿದ್ಧಗೊಂಡಿದೆ. ಈಗಾಗಲೇ ರಾಜ್ಯ ,ಹೊರರಾಜ್ಯಗಳಿಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಮೇಳಕ್ಕೆ ಆಗಮಿಸತೊಡಗಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ನಿರಂತರವಾಗಿ ವಿದ್ಯಾರ್ಥಿಗಳ ಉದ್ಯೋಗಾಕಾಂಕ್ಷಿಗಳ ಆಗಮನ ಆರಂಭವಾಗಿತ್ತು. ವಿದ್ಯಾಗಿರಿಯ ಆಳ್ವಾಸ್ ಕಾಲೇಜು ಆವರಣದಲ್ಲಿ ಉದ್ಯೋಗಮೇಳಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಉದ್ಯೋಗಮೇಳದಲ್ಲಿ ಸುಮಾರು 150ರಷ್ಟು ಕಂಪೆನಿಗಳು ಭಾಗವಹಿಸಲಿದ್ದು ಈಗಾಗಲೇ ಪ್ರತಿಯೊಂದು ಕಂಪೆನಿಗೆ ಒಂದೊಂದು ಕೊಠಡಿಗಳನ್ನು ಸಿದ್ಧಪಡಿಸಲಾಗಿದೆ.

ಪಾರದರ್ಶಕತೆ
ಉದ್ಯೋಗಮೇಳದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಲ್.ಸಿ.ಡಿ ಹಾಗೂ ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಕಂಪೆನಿಗಳ ವಿವರ, ಉದ್ಯೋಗಲಭ್ಯತೆಗಳು, ಹಾಗೂ ಸಂದರ್ಶನದ ವಿವರ ಸೇರಿದಂತೆ ಸಮಗ್ರ ಮಾಹಿತಿಗಳು ಕಾಲ ಕಾಲಕ್ಕೆ ಉದ್ಯೋಗಾಕಾಂಕ್ಷಿಗಳಿದೆ ಆ ಮೂಲಕ ಲಭ್ಯವಾಗಲಿದೆ.

ಉತ್ತಮ ಸ್ಥಳಾವಕಾಶ
ಉದ್ಯೋಗಮೇಳದಲ್ಲಿ ಬೃಹತ್ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲಿದ್ದು ಉದ್ಯೋಗಾಕಾಂಕ್ಷಿಗಳಿಗೆ ತೊಂದರೆಯಾಗದಂತೆ ಉದ್ಯೋಗಮೇಳದಲ್ಲಿ ನೋಂದಣಿಗಾಗಿ ವಿಶಾಲ ಸ್ಥಳಾವಕಾಶ ವ್ಯವಸ್ಥೆಗೊಳಿಸಲಾಗಿದೆ. ಐ.ಟಿ.ಐ,ಡಿಪ್ಲೋಮಾ,ಇಂಜಿನಿಯರಿಂಗ್, ಪದವಿ, ಹೀಗೆ ಹಲವು ವಿಭಾಗಗಳಲ್ಲಿ ನೋಂದಣಿಗಾಗಿ ವ್ಯವಸ್ಥೆಗೊಳಿಸಲಾಗಿದೆ.
ಉದ್ಘಾಟನೆ
ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಬೆಳಗ್ಗೆ 10ಗಂಟೆಗೆ ಉದ್ಯೋಗಮೇಳ ಉದ್ಘಾಟನೆಗೊಳ್ಳಲಿದೆ. ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಿ ಎರಡು ದಿನಗಳ ಮೇಳದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

ಎರಡು ದಿನಗಳ ಉದ್ಯೋಗಮೇಳದ ಪ್ರಧಾನ ಮಾಧ್ಯಮ ಸಹಭಾಗಿತ್ವ ಈ ಕನಸು.ಕಾಂ ನದ್ದಾಗಿದೆ.

0 comments:

Post a Comment