ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಇದು ಜೀವನೋದ್ದೀಪದ ಪೇಯ... ನೈಸರ್ಗಿಕ ಹಾಗೂ ಆರೋಗ್ಯವರ್ಧಕ ಪಾನೀಯ...ಈ ಕಾರಣಕ್ಕೇ ಅಮೆರಿಕನ್ನರು ಇದನ್ನು ಮುಗಿಬಿದ್ದು ಕೊಳ್ಳುತ್ತಿದ್ದಾರೆ...


ವರ್ಣರಂಜಿತ ತಂಪು ಪಾನೀಯಗಳನ್ನು ವರ್ಜಿಸಿ ಈ ನಿಸರ್ಗದತ್ತ ಪಾನೀಯದತ್ತ ಆಕರ್ಷಿತರಾಗಿದ್ದಾರೆ. ಇಷ್ಟೇ ಅಲ್ಲದೆ ಅತ್ಯಂತ ಪ್ರತಿಷ್ಠಿತರು ಮಾರು ಹೋಗಿದ್ದ ಅಕಾಯ್ ಬೆರಿ ಮತ್ತು ಕಬ್ಬಲಾ ವಾಟರ್ ಸ್ಥಾನಕ್ಕೆ ಇದೀಗ ಕೋಕನಟ್ ವಾಟರ್ ಏರಿನಿಂತಿದೆ...

ಅಮೆರಿಕನ್ನರು ಇದೀಗ ತಮ್ಮ ಆರೋಗ್ಯ ಹಾಗೂ ಸೌಂದರ್ಯದತ್ತ ಹೆಚ್ಚಿನ ಗಮನ ಕೊಡುತ್ತಿದ್ದಾರೆಂದರೆ ತಪ್ಪಾಗಲಾರದು. ಕಾರಣ ಈ ಕೂಲ್ ಡ್ರಿಂಕ್ಸ್ ಹಾಗೂ ಇತರೆ ಸಿದ್ಧ ಪಾನೀಯಗಳಿಂದ ಹೆಜ್ಜಾಗಿ ನೈಸರ್ಗಿಕ ಪಾನೀಯಗಳ ಬಳಕೆಯತ್ತ ಅಮೆರಿಕನ್ನರ ಚಿತ್ತ ನಟ್ಟಿದೆ. ಇದಕ್ಕೆ ಪುರಾವೆ ಎಂಬಂತೆ ವಿಟಾಕೋಕೋ, ಜೀಕೋ ಎಂಬ ಅಮೇರಿಕಾದಲ್ಲಿನ ಅತಿದೊಡ್ಡ ಮಾರಾಟ ಸಂಸ್ಥೆ ಹೇಳಿಕೆ ಪ್ರಕಾರ ತೆಂಗಿನ ಕಾಯಿಯ ಉದ್ಯಮ 53ಶತಕೋಟಿ ಮೌಲ್ಯದ ಅತಿದೊಡ್ಡ ಉದ್ಯಮವಾಗಿ ಬೆಳೆದಿದೆಯಂತೆ...!


ಆಪಿ, ಪ್ರೂಟಿ, ಕೋಲಾ, ಮಾಝ್ಹಾ ಮೊದಲಾದ ಪೇಯಗಳ ಸಣ್ಣ ಪ್ಯಾಕೆಟ್ ,ಶ್ಯಾಶೆಗಳಂತೆಯೇ ಸಂಸ್ಕರಿಸಲ್ಪಟ್ಟ ಎಳೆನೀರಿನ ಪ್ಯಾಕೆಟ್ ಶ್ಯಾಶೆಗಳು ಅಮೆರಿಕದಲ್ಲಿ 3ಯು.ಎಸ್.ಡಾಲರ್ ಗಳಿಗೆ ಭರ್ಜರಿ ಮಾರಾಟ ಆಗುತ್ತಿದೆ.
ಎಳೆನೀರಿನಲ್ಲಿ ಫ್ಯಾಟ್ ಇಲ್ಲ. ಇದರಲ್ಲಿ ಅಲ್ಪ ಪ್ರಮಾಣದ ಶುಗರ್, ಸ್ವಲ್ಪ ಕೊಲೆಸ್ಟ್ರಾಲ್ ಮಾತ್ರವಿದೆ. ಡಯಟ್ ಮಾಡುವಂತಹವರು ಈ ಎಳೆನೀರನ್ನು ಇಷ್ಟಪಡುವುದೊಳಿತು. ಈ ಮಾತು ಚೆರಿಯನ್ ಹಾರ್ಟ್ ಫೌಂಡೇಷನ್ ನ ಡಯಟಿಂಗ್ ಸಲಹಗಾರ್ತಿ ನಿರ್ಮಲಾ ಜೇಸುದಾಸ್ ಅವರದ್ದು.

ಎಳೆನೀರಲ್ಲಿ ಎಲೆಕ್ಟ್ರೋಲೈಟ್ಸ್ ಅಂಶ ಸಮೃದ್ಧವಾಗಿದೆ. ಇದು ಅತ್ಯುತ್ತಮ ಪೋಷಣಾ ವಸ್ತುವಾಗಿ ಕಾರ್ಯನಿರ್ವಹಿಸಬಲ್ಲದು ಎಂಬುದು ಅವರ ವಾದ.
ದೇಹಕ್ಕೆ ಅವಶ್ಯಕವಾಗಿ ಬೇಕಾಗಿರುವ ಪೊಟ್ಯಾಷಿಯಂ ಅಂಶವೂ ಈ ಬೊಂಡದಲ್ಲಿ ಲಭ್ಯವಿದೆ. ವೈರಾಣು, ಶಿಲೀಂದ್ರ, ಬ್ಯಾಕ್ಟೀರಿಯಾ ವಿರೋಧಿಯಾಗಿಯೂ ಎಳೆನೀರಿಲ್ಲಿರುವ ಅಂಶಗಳು ಹೋರಾಟನಡೆಸುವುದರಿಂದ ಇದೊಂದು ಉತ್ತಮ ಆರೋಗ್ಯ ಸಂಜೀವಿನಿಯಾಗಿ ಕಂಡುಬರುತ್ತದೆ. ಮನುಷ್ಯರಲ್ಲಿರುವ ಆತಂಕ, ಖಿನ್ನತೆ, ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ದೇಹಾಲಸ್ಯವನ್ನು ಹೋಗಲಾಡಿಸಿ ಸದಾ ಉಲ್ಲಾಸಭರಿತರನ್ನಾಗಿಸುವ ವಿಶಿಷ್ಠಗುಣ ಈ ಎಳೆನೀರಿನಲ್ಲಿದೆ ಎಂಬುದು ಸಂಶೋಧನೆಯಿಂದ ದೃಢೀಕರಿಸಲ್ಪಟ್ಟಿದೆ.

1 comments:

Rajendra K. Halemane said...

ಪ್ರಕೃತಿದತ್ತ ಪಾನೀಯವೇ ಒಳ್ಳೆದು ಎಂದು ಇನ್ನಾದರೂ ನಮ್ಮ ಜನತೆ ಎಚ್ಚೆತ್ತುಗೊಳ್ಳಲೆಂದು ಆಶಿಸುತ್ತೇನೆ.

Post a Comment