ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ವಿಶೇಷ ಸಂದರ್ಶನಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿಯಂತಹ ಅದ್ಭುತ ಹಿಟ್ ಸಿನಿಮಾಗಳನ್ನು ನೀಡಿದ ಕನ್ನಡದ ಸ್ಟಾರ್ ನಿರ್ದೇಶಕ ಯೋಗರಾಜ್ ಭಟ್ ಈ ಕನಸು.ಕಾಂಗೆ ನೀಡಿದ ವಿಶೇಷ ಸಂದರ್ಶನ.ಈ ಕನಸು.ಕಾಂ ನ ನಿರಂತರ ಬರಹಗಾರ ಆದಿತ್ಯ ಭಟ್ ನಡೆಸಿದ ಮಾತುಕತೆಯ ಆಯ್ದ ಭಾಗ ಇಲ್ಲಿದೆ.ಓದಿ ...ನಿಮ್ಮ ಅಭಿಪ್ರಾಯ ತಿಳಿಸಿ... - ಸಂ.

ಪ್ರಶ್ನೆ : ಮುಂಗಾರು ಮಳೆಯ ನಂತರ ನೀವು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಯಶಸ್ಸಿನ ತುದಿಯಲ್ಲಿ ನೀವಿದ್ದಿರಿ.ಆದರೆ ನಿಮ್ಮ ಮೊದಲೆರಡು ಚಿತ್ರ ಮಣಿ ಮತ್ತು ರಂಗ ಎಸ್.ಎಸ್.ಎಲ್.ಸಿ. ಸೋತಿತ್ತು. ಆಗ ನಿಮಗೆ ಹೇಗೆ ಅನಿಸಿತ್ತು?
ಉ. ಮಣಿ ಚಿತ್ರ ಸೋತಾಗ ನನ್ನ ಅಹಂ ಭಾವಕ್ಕೆ ಏಟು ಬಿದ್ದಿತ್ತು.


ಪ್ರಶ್ನೆ : ಯೋಗರಾಜ್ ಭಟ್ರು ಹೇಗೆ? ನಿಮ್ಮ ಚಿತ್ರದ ನಾಯಕ ನಟನಂತೆ ಯಾವಾಗಲೂ ಜಗತ್ತನ್ನು ಗೇಲಿ ಮಾಡುತ್ತ ಇರುತ್ತೀರ ನೀವು?
ಉ. ನಾನು Detached ಸದಾಕಾಲ ನಿರುದ್ಯೋಗದಲ್ಲಿ ಇರುವವನು. ನಿರುದ್ಯೋಗಿಯಾಗಿಯೆ ಯಶಸ್ವಿಯಾದವನು, ಜನ ಟೈಂಪಾಸ್ಗೆ ಅಂತ ಸಿನಿಮಾಗೆ ಬರುತ್ತಾರೆ. ನಾವು ಒಂಥರ ಟೈಂಪಾಸ್ ವೃತ್ತಿಯವರು. ಬೇರೆ ನಿರ್ದೇಶಕರ ವಿಚಾರ ನನಗೆ ಗೊತ್ತಿಲ್ಲ ನಾನಂತು ಟೈಂಪಾಸ್ಗಾಗಿ ಇರುವವನು ಅದಕ್ಕಾಗಿಯೇ ಕೆಲವು ಸಿನಿಮಾ ಮಾಡಿರುವ ನಿರುದ್ಯೋಗಿ.

ಪ್ರಶ್ನೆ : ಮಣಿ ಚಿತ್ರದ ಸೋಲಿನಿಂದ ಮುಂಗಾರು ಮಳೆಯ ಯಶಸ್ಸಿನ ತನಕ ನಿಮ್ಮನ್ನು ತಂದ ಶಕ್ತಿ ಯಾವುದು?
ಉ. ಅತಿರೇಕ. ನಾನು ಹಲವಾರು ವಿಚಾರಗಳಲ್ಲಿ ಅತಿರೇಕಿ ಆ ಅತಿರೇಕವೆ ನನ್ನನ್ನು ಕಾಪಾಡಿದೆ.

ಪ್ರಶ್ನೆ : ನಿಮ್ಮ ಸಿನಿಮಾದ ನಾಯಕ ನಟ ಯಾವಾಗಲೂ ಜಗತ್ತನ್ನು ಗೇಲಿ ಮಾಡುತ್ತ ಹಾಯಾಗಿ ಇರುತ್ತಾನಲ್ಲ. ಅದು ಬೇಜವಾಬ್ದಾರಿತನವೆ? ಅಥವಾ ಜಗತ್ತನ್ನು ನೋಡುವ Philosophy?
ಉ. ನಾನು ಅಂತದ್ದನ್ನು ಇಟ್ಟುಕೊಂಡು ಸಿನಿಮಾ ಮಾಡಲಿಲ್ಲ. ನಾನು detached.

ಪ್ರಶ್ನೆ : ಮನಸಾರೆ ಚಿತ್ರದಲ್ಲಿ ಹುಚ್ಚನೊಬ್ಬ ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಳ್ಳುತ್ತಾನೆ. ಹುಚ್ಚಾಸ್ಪತ್ರೆಗೆ ವಾಪಸ್ ಬರುತ್ತಾನೆ. ಬರುವಾಗ ಹೊರಗೆ ಏನು ಇಲ್ಲ ಅಲ್ಲೆಲ್ಲ ದೊಡ್ಡ ಹುಚ್ಚರು ಅನ್ನುತ್ತಾನೆ. ಆ ದೃಶ್ಯದ ಬಗ್ಗೆ ಹೇಳಿ.
ಉ. ಯಾರ ಹುಚ್ಚನ್ನ ವಾಸಿ ಮಾಡಬಹುದೊ ಅಂಥವರನ್ನ ಹುಚ್ಚಾಸ್ಪತ್ರೆಗೆ ಕಳುಹಿಸುತ್ತಾರೆ. ಯಾರ ಹುಚ್ಚನ್ನ ವಾಸಿ ಮಾಡಲಾಗುವುದಿಲ್ಲವೊ ಅಂಥವರು ಹೊರಗೆ ಇರುತ್ತಾರೆ ಇದನ್ನು ಹೇಳಿದವರು ಸಿಗ್ಮಂಡ್ ಫ್ರಾಯ್ಡ್. ಕನ್ನಡದಲ್ಲಿ ಇದನ್ನ ಬೀಚಿ ತುಂಬಾ ಚೆನ್ನಾಗಿ ಹೇಳಿದ್ರು. ನಾನು ಅದನ್ನು ನಂಬಿದವನು.


ಪ್ರಶ್ನೆ : ನಿಮ್ಮ ಮುಂದಿನ ಚಿತ್ರ ಡ್ರಾಮಾ ಎಲ್ಲಿ ತನಕ ಬಂತು?
ಉ. ಶೂಟಿಂಗ್ ನಡಿತಾ ಇದೆ. ಇವತ್ತು ರಾತ್ರಿ ಮೈಸೂರು ಹೊರಟೆ. ನಾಳೆ ಬೆಳಿಗ್ಗೆ ಶೂಟಿಂಗ್ ಇದೆ.

ಈ ವರ್ಷ ದಿವಂಗತ ಗೌರೀಶ ಕಾಯ್ಕಿಣಿಯವರ ಜನ್ಮಶತಾಬ್ಧಿ. ಅದರ ನಿಮಿತ್ತ ಅವರ ಮಗ, ಖ್ಯಾತ ಬರಹಗಾರ ಜಯಂತ್ ಕಾಯ್ಕಿಣಿ ಗೋಕರ್ಣದ ತಮ್ಮ ಮನೆ 'ಪರ್ಣಕುಟಿ'ಯಲ್ಲಿ ವರ್ಷಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಖ್ಯಾತ ನಟ ಅನಂತನಾಗ್, ನಿರ್ದೇಶಕ ಯೋಗರಾಜ್ ಭಟ್, ಬರಹಗಾರ ವಿವೇಕ ಶ್ಯಾನಭಾಗರೊಂದಿಗೆ ಸಂವಾದ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ಯೋಗರಾಜ್ ಭಟ್ರನ್ನು ಸಂದರ್ಶಿಸಬೇಕೆಂದು ಜಯಂತರಲ್ಲಿ ಕೇಳಿಕೊಂಡೆ. ಅವರು ಸಂತೋಷದಿಂದ ಒಪ್ಪಿದ್ದಲ್ಲದೆ ಅವರ ಮನೆಯಲ್ಲೆ ಸಂದರ್ಶಿಸಲು ಅವಕಾಶ ಮಾಡಿಕೊಟ್ಟರು.

3 comments:

Jagadish Shastri said...

ಹೆಸರೇ "ಯೋಗರಾಜ್ ". ಅದಕ್ಕೇ ಮುಟ್ಟಿದ್ದೆಲ್ಲ ಚಿನ್ನ.

Jagadish Shastri said...

ಹೆಸರೇ "ಯೋಗರಾಜ್ ". ಅದಕ್ಕೇ ಮುಟ್ಟಿದ್ದೆಲ್ಲ ಚಿನ್ನ.

Anonymous said...

good sir ide riti vishesh kalavidrnna sandrshna madi avar mansina bavane yellrigu tilisi .......... ravikiran .........

Post a Comment