ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ
ವೇಣೂರು: ಇಲ್ಲಿಗೆ ಸಮೀಪದ ಕರಿಮಣೇಲು ಗ್ರಾಮದ ಮೀಯಂದೂರು ಸುಬ್ರಾಯ ಭಟ್ ಅವರ ಕೃಷಿಭೂಮಿಗೆ ವಿದ್ಯುತ್ ತಂತಿ ಕಡಿದು ಬಿದ್ದು ತೀವ್ರ ತೊಂದರೆ ಉಂಟಾಗಿದೆ. ಶುಕ್ರವಾರ ತಡರಾತ್ರಿ ವಿದ್ಯುತ್ ತಂತಿ ತುಂಡಾಗಿ ರಬ್ಬರ್ ತೋಟದೊಳಗೆ ಬಿತ್ತು.ಪರಿಣಾಮ ಬೆಂಕಿ ಹತ್ತಿಕೊಂಡಿತು. ಸುಮಾರು ಎರಡು ಎಕ್ಕರೆ ಪ್ರದೇಶದಲ್ಲಿ ಬೆಂಕಿ ಆವರಿಸಿ ಭಸ್ಮವಾಗಿದೆ.


ರಾತ್ರಿ ಹನ್ನೆರಡರ ಸುಮಾರಿಗೆ ಘಟನೆ ನಡೆಯಿತು.ಮುಖ್ಯರಸ್ತೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿ ರಬ್ಬರ್ ತೋಟವಿದೆ.ಇಕ್ಕಟ್ಟಾದ ಮಣ್ಣಿನ ರಸ್ತೆಯ ಮೂಲಕ ಸಾಗಿ ತೋಟ ಸೇರುವ ಪರಿಸ್ತಿತಿ. ಅಗ್ನಿಶಾಮಕ ದಳ ಸ್ಥಳಕ್ಕೆ ಬಂತಾದರೂ ಇಕ್ಕಟ್ಟಾದ ರಸ್ತೆ,ತೋಟದೊಳಗೆ ಸಮರ್ಪಕ ವಾಹನ ಸಂಚಾರಕ್ಕೆ ಅನುಕೂಲವಿಲ್ಲದ ಹಿನ್ನಲೆಯಿಂದಾಗಿ ಬೆಂಕಿ ಆರಿಸುವಲ್ಲಿ ವಿಳಂಬವಾಯಿತು.

ಎರಡೂವರೆ ಗಂಟೆಗಳ ಕಾಲ ನಿರಂತರವಾಗಿ ಬೆಂಕಿಉರಿದಿದೆ.ಶನಿವಾರ ಮುಂಜಾನೆಯೂ ಬೆಂಕಿ ಪೂರ್ತಿಯಾಗಿ ನಂದಿರಲಿಲ್ಲ.0 comments:

Post a Comment