ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಇಂದಿನ ರುಚಿಯಲ್ಲಿ ಗೆಣಸಿನ ವಿವಿಧ ಖಾದ್ಯಗಳ ಎರಡನೇ ಭಾಗವನ್ನು ನೋಡೋಣ. ಮಳೆಗಾಲಕ್ಕಾಗುವಂತೆ ಗರಿ ಗರಿ ಚಿಪ್ಸ್ ಹಾಗೂ ಬಿಸಿ ಬಿಸಿ ಪಾಯಸವನ್ನು ಈ ಗೆಣಸಿನಿಂದ ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ...
ಗೆಣಸಿನ ಚಿಪ್ಸ್

ಗೆಣಸು, ಅಗತ್ಯವಿದ್ದಷ್ಟು ಉಪ್ಪು, ಕರಿಯಲು ಎಣ್ಣೆ.

ವಿಧಾನ : ಗೆಣಸನ್ನು ತೊಳೆದು ಉರುಟರುಟಾಗಿ ಕತ್ತರಿಸಿ. ಎಣ್ಣೆ ಕಾಯಲು ಇಟ್ಟು ಎಣ್ಣೆಗೆ ಗೆಣಸನ್ನು ಹಾಕಿ. ಸ್ವಲ್ಪ ಹೊತ್ತು ಕಳೆದ ನಂತರ ಉಪ್ಪು ನೀರನ್ನು ಹಾಕಿ. ಕೆಂಪಾದಾಗ ತೆಗೆಯಿರಿ. ಗರಿಗರಿಯಾದ ಚಿಪ್ಸ್ ರೆಡಿ. ಇದು ಡಬ್ಬದಲ್ಲಿ ಹಾಕಿಟ್ಟರೆ ಒಂದೆರಡು ವಾರವಾದರೂ ಕೆಡುವುದಿಲ್ಲ. ಬಿಸಿ ಬಿಸಿ ಕಾಫಿಯೊಂದಿಗೆ ಗರಿ ಗರಿಯಾದ ಚಿಪ್ಸ್ ಬಹು ರುಚಿ.
ಗೆಣಸಿನ ಪಾಯಸ

ಗೆಣಸು - ಅರ್ಧ ಕೆ.ಜಿ, ಸಕ್ಕರೆ - ಕಾಲು ಕೆ.ಜಿ, ತೆಂಗಿನ ಕಾಯಿ - ಒಂದು, ಏಲಕ್ಕಿ, ದ್ರಾಕ್ಷಿ, ಗೋಡಂಬಿ.

ವಿಧಾನ : ಗೆಣಸಿನ ಮೇಲಿನ ಸಿಪ್ಪೆ ತೆಗೆದು ಸಣ್ಣದಾಗಿ ಹೆಚ್ಚಿ. ತೊಳೆದು ನೀರು ಹಾಕಿ ಬೇಯಿಸಿ. ಬೇಯುವಾಗ ಗೋಡಂಬಿ , ದ್ರಾಕ್ಷಿಯನ್ನು ಹಾಕಿ. ಬೆಂದ ನಂತರ ಸಕ್ಕರೆ ಹಾಕಿ ಐದು ನಿಮಿಷ ಕೈಯಾಡಿಸುತ್ತಿರಿ. ನಂತರ ತೆಂಗಿನ ಕಾಯಿ ಹಾಲು , ಏಲಕ್ಕಿ ಪುಡಿ, ಹಾಕಿ ಕೆಳಗಿಡಿ. ಬಿಸಿ ಬಿಸಿಯಾದ ಪಾಯಸ ಬಲು ರುಚಿ.- ಸುಮತಿ ಕೆ.ಸಿ.ಭಟ್ ಆದೂರು.

0 comments:

Post a Comment