ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಮಾರ್ಕೆಟ್ ತರಕಾರಿ ಸಾಕಾಗಿ ಹೋಯ್ತು...ಛೆ...ಅದೇ ಬೆಂಡೆ,ತೊಂಡೆ,ನವಿಲುಕೋಸು,ಬೀಟ್ರೂಟ್ , ಕ್ಯಾರೆಟ್, ಕ್ಯಾಬೇಜ್ ಅಂತ ಮೂಗು ಮುರೀತೀರಲ್ಲಾ...ಅದಕ್ಕೆ ಗುಡ್ ಬೈ ಹೇಳಿ... ಕಣಿಲೆಗೆ ಜೈ ಹೇಳಿ...ಇದೀಗ ಕಣಿಲೆಯ ಸೀಸನ್... ಕಣಿಲೆಯ ವಿವಿಧ ವ್ಯಂಜನಗಳು ಈ ಕನಸು ಓದುಗರಿಗಾಗಿ...


ಕಣಿಲೆ ಗಸಿ

ಬೇಕಾಗುವ ಸಾಮಾಗ್ರಿ: ಕಣಿಲೆ ತುರಿ ಎರಡು ಕಪ್, ತೊಗರಿ ಬೇಳೆ ಕಾಲು ಅರ್ಧ ಕಪ್, ಕೊತ್ತಂಬರಿ ಅರ್ಧ ಚಮಚ, ಜೀರಿಗೆ ಕಾಲು ಚಮಚ, ಒಣಮೆಣಸು ಮೂರು, ಬೆಳ್ಳುಳ್ಳಿ ನಾಲ್ಕು ಎಸಳು, ಚಿಟಿಕೆ ಅರಸಿನ ಹುಡಿ, ಹುಳಿ ಅರ್ಧನೆಲ್ಲಿಕಾಯಿ ಗಾತ್ರದ್ದು, ಅದೇ ಪ್ರಮಾಣದಲ್ಲಿ ಬೆಲ್ಲ, ಒಗ್ಗರಣೆ ವಸ್ತು, ಹಸಿಮೆಣಸು ಎರಡು, ತೆಂಗಿನ ತುರಿ ಒಂದು ಕಪ್.ಮಾಡುವ ವಿಧಾನ : ಕಣಿಲೆ ತುರಿಯನ್ನು ಬೇಯಿಸಿ ನೀರು ಸೋಸಿಟ್ಟುಕೊಳ್ಳಿ. ತೊಗರಿ ಬೇಳೆಯನ್ನು ಚೆನ್ನಾಗಿ ಬೇಯಿಸಿ. ಸಾಂಬಾರ ಪದಾರ್ಥಗಳನ್ನು ಎಣ್ಣೆ ಹಾಕಿ ಹುರಿದು, ಬೆಳ್ಳುಳ್ಳಿಯನ್ನು ಸೇರಿಸಿ ತೆಂಗಿನ ತುರಿಯೊಂದಿಗೆ ನುಣ್ಣಗೆ ರುಬ್ಬಿ. ನಂತರ ಬೆಂದ ಕಣಿಲೆ ಹಾಗೂ ತೊಗರಿ ಬೇಳೆಗೆ ಈ ಮಸಾಲೆ ಸೇರಿಸಿ ಕುದಿಸಿ ಒಗ್ಗರಣೆ ಕೊಡಿ. ಇದು ಊಟದೊಂದಿಗೆ, ತಿಂಡಿಯೊಂದಿಗೆ ತಿನ್ನಲು ರುಚಿ.

ಉಪ್ಪಿನಕಾಯಿ
ಬೇಕಾಗುವ ಸಾಮಾಗ್ರಿ: ಕಣಿಲೆ ಎರಡು ತುಂಡು, ಖಾರದ ಒಣಮೆಣಸು 12, ಸಾಸಿವೆ 4 ಚಮಚ, ಜೀರಿಗೆ ಕಾಲು ಚಮಚ, ಹುಳಿ ನೆಲ್ಲಿಕಾಯಿಗಾತ್ರದ್ದು, ಇಂಗು ಚಿಟಿಕೆ, ಅರಸಿನ ಪುಡಿ ಚಿಟಿಕೆ, ಕಾಳುಮೆಣಸು ನಾಲ್ಕು, ಉಪ್ಪುನೀರು.
ಮಾಡುವ ವಿಧಾನ : ಕಣಿಲೆಯನ್ನು ಸಪೂರವಾಗಿ ಸೀಳಿ ಕಾಲಿಂಚು ಉದ್ದದ ತುಂಡು ಮಾಡಿ ಚೆನ್ನಾಗಿ ಬೇಯಿಸಿ ನೀರು ಸೋಸಿಟ್ಟುಕೊಳ್ಳಿ. ಎಲ್ಲಾ ಮಸಾಲೆ ಪದಾರ್ಥಗಳನ್ನು ಎಣ್ಣೆ ಹಾಕಿ ಬೇರೆ ಬೇರೆಯಾಗಿ ಹುರಿಯಿರಿ. ಹುರಿದ ಮಸಾಲೆಯನ್ನು ಹುಳಿ ಸೇರಿಸಿ ನುಣ್ಣಗೆ ರುಬ್ಬಿ. ಅಗತ್ಯವಿದ್ದಷ್ಟು ಉಪ್ಪುನೀರು ಸೇರಿಸಿ. ಬೆಂದ ಕಣಿಲೆಯ ಹೋಳುಗಳನ್ನು ಹಾಕಿ ಮಿಶ್ರಮಾಡಿ.ಜಾರಿಯಲ್ಲಿ ತುಂಬಿಡಿ.

ಕಣಿಲೆಯ ಪಲ್ಯ
ಬೇಕಾಗುವ ಸಾಮಾಗ್ರಿಗಳು : ಕಣಿಲೆ ತುರಿ ಎರಡು ಕಪ್, ಉಪ್ಪು, ಬೆಲ್ಲ ನೆಲ್ಲಿಕಾಯಿ ಗಾತ್ರದ್ದು, ಮೆಣಸಿನ ಹುಡಿ ಒಂದು ಚಮಚ, ಚಿಟಿಕೆ ಅರಸಿನಪುಡಿ, ಸ್ವಲ್ಪವೇ ಹುಳಿ, ಒಗ್ಗರಣೆ ವಸ್ತು, ತೆಂಗಿನ ತುರಿ ಕಾಲು ಕಪ್.
ಮಾಡುವ ವಿಧಾನ : ಕಣಿಲೆ ತುರಿಯನ್ನು ಬೇಯಿಸಿ ನೀರು ಸೋಸಿಟ್ಟುಕೊಳ್ಳಿ. ನೀರು ಬಸಿದ ನಂತರ ಮೆಣಸಿನ ಹುಡಿ , ಅರಸಿನ ಹುಡಿ, ಬೆಲ್ಲ, ಹುಳಿ, ಉಪ್ಪು ಹಾಕಿ. ಬಾಣಲೆಯಲ್ಲಿ ಉದ್ದಿನ ಬೇಳೆ ಒಗ್ಗರಣೆಗಿಟ್ಟು ಸಾಸಿವೆ ಸಿಡಿದ ನಂತರ ಎಲ್ಲವನ್ನೂ ಹಾಕಿ. ತಸು ನೀರು ಹಾಕಿ ಮುಚ್ಚಿಟ್ಟುಕೊಳ್ಳಿ, ನೀರಾರುತ್ತಾ ಬಂದಾಗ ತೆಂಗಿನತುರಿಹಾಕಿ ಎರಡುಚಮಚ ಎಣ್ಣೆಹಾಕಿ ಗೊಟಾಯಿಸಿ ಕೆಳಗಿಳಿಸಿ.ಊಟದೊಂದಿಗೆ ಕಣಿಲೆಪಲ್ಯ ಸೂಪರ್...


ಸುಮತಿ ಕೆ.ಸಿ.ಭಟ್ ಆದೂರು.

2 comments:

Anonymous said...

chennagide... kanile bahala ruchi...gotta

Anonymous said...

e kanasu .com bahala chennagi mudi baruttide. hege mahitipurnavagi mudi barali..

manjunath,bengalore

Post a Comment