ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಆಧುನಿಕತೆಯ ಸೋಗಿನಲ್ಲಿ ನಲುಗುತ್ತಿರುವ ಅಗ್ರಹಾರಗಳು...
ದಕ್ಷಿಣ ಭಾರತದಲ್ಲಿ ಮಾತ್ರ ಕಂಡು ಬರುವ ಈ ಅಗ್ರಹಾರ ಬೀದಿಯ ಮನೆಗಳು ತಮ್ಮದೇ ಆದ ಸರಳಸುಂದರ ವಾಸ್ತು ಶೈಲಿಯನ್ನು ಹೊಂದಿತ್ತು.ತಮಿಳುನಾಡಿನ ಕೆಲವು ಪ್ರಮುಖ ಅಗ್ರಹಾರಗಳಲ್ಲಿ ಕೆಲವೇ ಕೆಲವು ಮನೆಗಳು ಇಂದಿಗೂ ಆ ವಾಸ್ತು ಶೈಲಿಯನ್ನು ಹೊಂದಿದೆ.ಉಳಿದಂತೆ ಇನ್ನೆಲ್ಲ ಕಡೆಗಳಲ್ಲಿ ಅಗ್ರಹಾರಗಳು ಆಧುನಿಕತೆಗೆ ಒಳ ಪಟ್ಟಿವೆ.


ವಾಸ್ತುವಿನ ಪ್ರಕಾರವೇ ಕಟ್ಟಲಾದ ಈ ಮನೆಗಳು ಇಳಿಜಾರಿನ ಛಾವಣಿಯನ್ನು ಹೊಂದಿರುತ್ತಿತ್ತು.ಮನೆಯ ಒಳಭಾಗ ತಂಪಾಗಿರಲು ಟೆರ್ರಾಕೋಟದಿಂದ ಮೇಲ್ಛಾವಣಿಯನ್ನು ನಿರ್ಮಿಸುತ್ತಿದ್ದರು.ಪ್ರತೀ ಮನೆಯ ಮುಂದಿನ ಭಾಗದಲ್ಲಿ ಅಗಲವಾದ ಕಟ್ಟೆ,ಬಾಗಿಲಿನಿಂದ ಒಳಗೆ ಸಾಗುತ್ತಿದ್ದಂತೆ ಮತ್ತೆ ಅಗಲವಾದ ಕಟ್ಟೆ ನಂತರ ವಿಶಾಲವಾದ ಜಗುಲಿ ಇರುತ್ತಿತ್ತು.ಇದರ ಮುಂದಿನ ಭಾಗದಲ್ಲಿ ಹಜಾರ ಅದಕ್ಕೆ ಹೊಂದಿಕೊಂಡಂತೆ ಅಡುಗೆ ಕೋಣೆ ನಿರ್ಮಿಸುತ್ತಿದ್ದರು.ಸಾಮಾನ್ಯವಾಗಿ ಈ ಅಗ್ರಹಾರಗಳು ನಾಲ್ಕು ಅಥವಾ ಐದು ಸೂತ್ರದ ಮನೆಗಳನ್ನು ಹೊಂದಿರುತ್ತಿತ್ತು.ಮನೆಯ ಮಧ್ಯ ಭಾಗದಲ್ಲಿ ಸಣ್ಣ ಅಂಗಳ ಹೊಂದಿ ಬೆಳಕಿಗೆ ತೆರೆದು ಕೊಂಡಿರುತ್ತಿತ್ತು.ಕೆಲವು ಮನೆಗಳು ಹಿಂಭಾಗದಲ್ಲಿಯೂ ಸಹ ಅಂಗಳವನ್ನು ಹೊಂದಿರುತ್ತಿತ್ತು.


ಆದರೆ ತಮಿಳುನಾಡಿನ ಕೆಲವು ಬ್ರಾಹ್ಮಣ ವಿರೋಧಿ ಚಳುವಳಿಗಳು ಈ ಪರಂಪರಾಗತ ಶೈಲಿಗೇ ದಾಳಿ ಮಾಡಿದ್ದು ಅಲ್ಲಿನ ಬ್ರಾಹ್ಮಣ ಕುಟುಂಬಗಳು ಬದಲಾದ ವಸ್ತು ಸ್ಥಿತಿಗೆ ಅನಿವಾರ್ಯವಾಗಿ ಹೊಂದಿಕೊಂಡಿದ್ದಾರೆ.ತಮಿಳುನಾಡು ಮಾತ್ರವಲ್ಲ ದಕ್ಷಿಣ ಭಾರತದಲ್ಲಿನ ಅನೇಕ ಅಗ್ರಹಾರಗಳು ತಮ್ಮ ನೈಜ ಸೌಂದರ್ಯವನ್ನು ಕಳೆದುಕೊಂಡಿರುವುದು ಜಾತೀ ವಾದವೆಂಬ ಪೆಡಂಭೂತದಿಂದ.ಆಧುನಿಕತೆ ಭಾರತದ ಪ್ರತಿಯೊಂದು ಪ್ರದೇಶದಲ್ಲೂ ಹಾಸು ಹೊಕ್ಕಾಗಿದೆ.ಎಲ್ಲೆಲ್ಲೂ ಮನೆಗಳು ನವೀನ ಮಾದರಿಯನ್ನು ಮೈಗೂಡಿಸಿಕೊಂಡಿದೆ.ನಮ್ಮ ಪರಂಪರಾಗತ ಶೈಲಿಯು ಲವಲೇಶವೂ ಇಲ್ಲದಂತೆ ಮಾಯವಾಗಿದೆ. ಪರಂಪರೆ, ಸಂಸ್ಕೃತಿ ಉಳಿಯಬೇಕು ಎಂಬುದು ಒಂದು ವೈಚಾರಿಕ ವಾದವಾದರೆ ಇನ್ನೊಂದು ವಾದ ಅದ್ಯಾವುದೂ ಬೇಡವೇ ಬೇಡ ಎಂಬಂತಹುದು. ಇದಕ್ಕೆ ಅಗ್ರಹಾರ ಕೂಡಾ ಒಳಪಟ್ಟಿದೆ.


ಇಡೀ ಪ್ರಪಂಚದಲ್ಲಿ ವಿವಿಧತೆ, ವಿಶಿಷ್ಠತೆಗೆ ಹೆಸರಾಗಿರುವ ನಮ್ಮ ದೇಶ ವಿಭಿನ್ನ ಸಂಸ್ಕೃತಿಗಳ ಸಂಗಮ. ಆದರೆ ಆಧುನಿಕ ಪರಿಸರ ನಮ್ಮ ತನವನ್ನು ನಾಶವಾಗಿಸುತ್ತಿರುವುದು ವಿಷಾಧನೀಯ. ಇತ್ತೀಚಿನ ವಿದ್ಯಮಾನಗಳಲ್ಲಿ ಪಾಶ್ಚಾತ್ಯದೇಶಗಳು ತಮ್ಮ ಮೂಲ ಸಂಸ್ಕೃತಿಯನ್ನು ಮರುಶೋಧಿಸಿ ತಮ್ಮ ತಮ್ಮ ಪರಂಪರೆಯನ್ನು ಉಳಿಸಿಕೊಳ್ಳುವತ್ತ ನಡೆದರೆ ನಾವು ಭಾರತೀಯರು ಭಿನ್ನವಾದ, ಕೋಮು - ಜಾತಿ ವಾದಗಳಲ್ಲಿನಿರತರಾಗಿ ನಮಗೊಂದು ಸಂಸ್ಕೃತಿ ಪರಂಪರೆಯೇ ಇಲ್ಲದಂತೆ ನಡೆದುಕೊಳ್ಳುತ್ತಿದ್ದೇವೆ. ಇಂತಹ ನಮ್ಮದಲ್ಲವೆಂಬಂತಹ , ನಮಗೆ ಬೇಡವೆಂಬಂತಹ ನಡುವಳಿಕೆಯಿಂದಾಗಿ ಅಗ್ರಹಾರದಂತಹ ಪರಂಪರೆಯೂ ಇಂದು ನಾಶವಾಗುತ್ತಿದೆ.


ಜಾತಿವಾದ ಇಡೀ ಭಾರತದ ಯಾವತ್ತಿನ ಸಮಸ್ಯೆ. ಬ್ರಾಹ್ಮಣ ವಿರೋಧೀ ಅಲೆಗಳು ಭಾರತದ ಹೊಸ ಟ್ರೆಂಡ್. ಆದರೆ ಬ್ರಾಹ್ಮಣರೂ ಭಾರತೀಯರು ಎಂಬುದನ್ನು ಈ ವಿರೋಧಿಗಳು ಮರೆತು ಬಿಡುತ್ತಾರೆ. ವಿಶಾಲ ಚಿಂತನೆ ಬೇಕೆಂಬ ಅದೆಷ್ಟೋ ಬುದ್ದಿಜೀವಿಗಳು ಕೂಡಾ ಬ್ರಾಹ್ಮಣತ್ವವನ್ನು ವಿರೋಧಿಸುವುದು ಮಾತ್ರವಷ್ಟೇ ತಮ್ಮ ಹೆಗ್ಗಳಿಕೆ ಎಂದು ತಿಳಿದುಕೊಂಡಿದ್ದಾರೆ.
ಸ್ವತಂತ್ರ ಭಾರತದ ನವ ಅಲೆಗಳು ಇಂದು ಈ ಅಗ್ರಹಾರಗಳ ಮೇಲೂ ಗಾಢ ಪರಿಣಾಮ ಬೀರಿವೆ. ಎಷ್ಟೋ ವಿದೇಶಿಯರಿಗೆ ಕುತೂಹಲಕಾರಿಯಾದ ಅಗ್ರಹಾರ ವ್ಯವಸ್ಥೆ ದೇಶೀಯರಿಗೆ ಏನೂ ಅಲ್ಲವಾಗಿದೆ. ಅಗ್ರಹಾರ ವಾಸ್ತುಶೈಲಿಯು ನಮ್ಮ ಪರಂಪರೆಯ ಒಂದು ಭಾಗ. ಅದನ್ನು ಜಾತೀಯತೆಯ ಸೋಗಿಲ್ಲದೆ ಅಭ್ಯಸಿಸಬೇಕಾಗಿದೆ.ಅಗ್ರಹಾರ ಶೈಲಿಯ ಮನೆಗಳು ವಾಸ್ತವಿಕವಾಗಿ ಅತ್ಯಂತ ವೈಜ್ಞಾನಿಕವಾಗಿ ಅಚ್ಚುಕಟ್ಟಾಗಿ ನಿಮರ್ಿಸಲ್ಪಟ್ಟ ಮನೆಗಳಾಗಿತ್ತು. ವೈಶಾಲ್ಯತೆ, ಗಾಳಿ , ಬೆಳಕು ವ್ಯವಸ್ಥೆ, ಭದ್ರತಾ ವ್ಯವಸ್ಥೆ ಇತರ ಎಲ್ಲಾ ದೃಷ್ಠಿಯಿಂದಲೂ ಸುವ್ಯವಸ್ಥಿತ ಗೃಹಗಳಾಗಿದ್ದವು. ಮನೆಗಳ ಮುಂದಿನ ಕಟ್ಟೆಗಳು ವಿಶ್ರಾಂತಿಗಾಗಿ , ಒಳಭಾಗದ ಜಗುಲಿ ಇತರ ಮಾತುಕತೆಗಳಿಗಾಗಿ, ಸ್ವಲ್ಪ ಕತ್ತಲಿರುವ ಹಜಾರ ಉಗ್ರಾಣದಂತೆ ಮಧ್ಯದ ತೆರೆದ ಅಂಗಳ ಮಕ್ಕಳ ಆಟಕ್ಕಾಗಿ ,ಕಾರ್ಯಕ್ರಮಗಳಿಗಾಗಿ ಹಾಗೂ ಸಾಕಷ್ಟು ಗಾಳಿ ಬೆಳಕು ಓಡಾಡಲು ಅನುಕೂಲವಾಗುವಂತೆ ಈ ಶೈಲಿಯಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದವು.

ಈಗಾಗಲೇ ರಿಯಲ್ ಎಸ್ಟೇಟ್ ಧನಿಗಳ ಕರಾಮತ್ತಿನಿಂದಾಗಿ ಕೆಲವು ಬ್ರಾಹ್ಮಣರು ಅನಿವಾರ್ಯವಾಗಿ ಅಗ್ರಹಾರಗಳನ್ನು ತೊರೆಯಬೇಕಾಗಿವೆ. ಎಷ್ಟೋ ಮನೆಗಳು ವಾಣಿಜ್ಯ ಸಂಬಂಧ ಉಪಯೋಗಕ್ಕಾಗಿ ಕೆಡವಲ್ಪಟ್ಟಿವೆ. ಎಲ್ಲಾ ಬ್ರಾಹ್ಮಣರೂ ಶ್ರೀಮಂತರಲ್ಲ. ಹಾಗಾಗಿ ಪ್ರಮುಖ ಸ್ಥಳಗಳಲ್ಲಿನ , ಅಂದರೆ ಪ್ರಸಿದ್ಧ ದೇಗುಲಗಳ ಬಳಿ ಇರುವ ಮನೆಗಳು ಹಣಕ್ಕೇ ಮಾರಲ್ಪಟ್ಟಿವೆ. ಅಷ್ಟೇ ಅಲ್ಲ ಎಷ್ಟೋ ಬ್ರಾಹ್ಮಣರ ವಲಸೆ ಕೂಡಾ ಅಗ್ರಹಾರಗಳು ಮರೆಯಾಗುತ್ತಿರುವುದಕ್ಕೆ ಕಾರಣವಾಗಿವೆ.
ಜಾಗತೀಕರಣ , ನಗರೀಕರಣ, ನಮ್ಮ ಪರಂಪರಾಗತ ವ್ಯವಸ್ಥೆಯನ್ನು ಮರೆಯಾಗಿಸಿವೆ. ಮರೆಯಾದ ಪಟ್ಟಿಯಲ್ಲಿ ಈ ಅಗ್ರಹಾರಗಳು ಕೂಡ ಒಂದಾಗಿವೆ ಎಂಬುದು ಬೇಸರದ ಸಂಗತಿ.

ಬ್ರಾಹ್ಮಣ ಜಾತಿಗೆ ಸೇರಿದ್ದೆಂಬ ಒಂದೇ ಒಂದು ಕಾರಣಕ್ಕಾಗಿ ಈ ವಿಶಿಷ್ಟ ಪರಂಪರೆಯ ಗೃಹ ನಿಮರ್ಾಣ ಪದ್ಧತಿಯನ್ನು ತಿರಸ್ಕರಿಸುವುದು ನಿಜಕ್ಕೂ ಒಂದು ವಿಷಾಧನೀಯ ಸಂಗತಿ. ಈಗಲಾದರೂ ವಾಸ್ತುಶಿಲ್ಪ , ಸಂಶೋಧನಾಸಕ್ತರು ಈ ಅಗ್ರಹಾರ ಮಾದರಿಯ ಗೃಹಗಳ ಬಗ್ಗೆ ಅಭ್ಯಸಿಸಿ ವಿಭಿನ್ನ ಪರಂಪರಾಗತ ವಾಸ್ತುಶೈಲಿಯನ್ನು ಮತ್ತೆ ಸಮಾಜಕ್ಕೆ ನೀಡುವತ್ತ ಗಮನ ಹರಿಸಬೇಕಾಗಿದೆ.

- ಸೌಮ್ಯ ಆದೂರು.

5 comments:

Anonymous said...

Drshivaji Rao Gaikwad - ಇ೦ತಹ ಅಗ್ರಹಾರಗಳಲ್ಲಿ ಬೆಳೆದ ಪ್ರತಿಭಾವ೦ತರು ವಿದೇಶಗಳನ್ನು ಸೇರಿ
ಹಿರಿಯರು ಕಾಲವಾಗಿ ಅಗ್ರಹಾರಗಳು ಮರೆಯಾಗಿವೆ

Anonymous said...

ಬಾಲಸುಬ್ರಹ್ಮಣ್ಯ ಕುಕ್ಕೆಮನೆ - :
ನಾವು ಆಂಗ್ಲರ ವಿದ್ಯಾಭ್ಯಾಸ ಪದ್ದತಿಯನ್ನು ಒಪ್ಪಿಗೊಂಡು ಅಳವದಿಗೊಂಡಾಗಲೇ ಕೊಳ್ಳಿ ಇಟ್ಟಾಗಿದೆ.ಈಗ ಆ ಹೊಗೆ ಮರೆಯಾಗಬೇಕಷ್ಟೆ..

Anonymous said...

ಬಾಲಸುಬ್ರಹ್ಮಣ್ಯ ಕುಕ್ಕೆಮನೆ ·-: ನಾವು ಬಿಜೇಪಿಯವರಿಗೆ ಕಾಂಗ್ರೆಸ್ ಏಜೆಂತೆರಾಗ್ತೇವೆ,ಕಾಂಗ್ರೆಸ್ ನವರಿಗೆ ಬೀಜೇಪಿ ,ಕಮ್ಯೂನಿಷ್ಟರಿಗೆ ಆರೆಸ್ಸ್....ದಲಿತವಿರೋಧಿ... ಇತ್ಯಾದಿ ಹಣೆಪಟ್ಟ ಲಭಿಸುತ್ತದೆ...

Anonymous said...

ಬಾಲಸುಬ್ರಹ್ಮಣ್ಯ ಕುಕ್ಕೆಮನೆ :ನಾವು ನಮ್ಮ ಚರಿತ್ರೆಯಿಂದ ಯಾವುದೇ ಪಾಠ ಕಲಿಯಲು ತಯಾರಿಲ್ಲ. ಎಲ್ಲರೂ ಇತಿಹಾಸವನ್ನು ತಿರುಚುವ ಕೆಲಸವನ್ನೇ ಮಾಡುತ್ತಿದ್ದೇವೆ. ಇದು ಭಾರತದ ದುರಂತ. ಇಂದು ವಿದ್ಯಾವಂತರೆನಿಸಿಕೊಂಡ ಜನ ನಡೆದುಕೊಳ್ಳುವ ರೀತಿ ನೋಡಿದರೆ ನಾವು ನಿಜವಾಗಿಯೂ ವಿದ್ಯಾವಂತರಾ ಅನಿಸುತ್ತದೆ.ಐದು ರುಪಾಯಿಯಾದರೂ ಸರಿ ಲಂಚವಿಲ್ಲದೇ ಯಾವ ಕೆಲಸವೂ ಈ ವಿದ್ಯಾವಂತರು ಮಾಡಿಕೊಡುವುದಿಲ್ಲ....

Anonymous said...

Rathnakar Hegdekatte : Mekale system of education....

Post a Comment