ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪುನರ್ ಸೃಷ್ಟಿ...

ಶಿಥಿಲಾವಸ್ಥೆಯ ಹೊಸಗುಂದದ ದೇಗುಲಗಳ ಜೀರ್ಣೋದ್ಧಾರಕ್ಕೆ 1980ರಿಂದಲೇ ಪ್ರಯತ್ನಗಳು ಸಾಗಿವೆ. 1995ರಲ್ಲಿ ಶಿವಮೊಗ್ಗದ ಮಲ್ನಾಡ್ ರಿಸ ರ್ಚ್ ಅಕಾಡೆಮಿ ಹೊಸಗುಂದ ಗ್ರಾಮಸ್ಥರ ಸಹಕಾರದೊಂದಿಗೆ ದಿ.ಹೆಚ್.ಡಿ.ನಾಗರಾಜಪ್ಪ ಗೌಡರ ನೇತೃತ್ವದಲ್ಲಿ ಐತಿಹಾಸಿಕ ವಿಚಾರಸಂಕಿರಣವೊಂದನ್ನು ನಡೆಸಿ ಹೊಸಗುಂದದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾರ್ಯ ನಡೆಯಿತು.


ನಂತರದ ದಿನದಲ್ಲಿ ಈ ಪ್ರದೇಶಕ್ಕೆ ಬಂದ ಸಿ.ಎಂ. ನಾರಾಯಣ ಶಾಸ್ತ್ರಿ ಶೋಭಾ ಶಾಸ್ತ್ರಿ ದಂಪತಿಗಳು ನೂರಾರು ವರುಷಗಳಿಂದ ಪೂಜೆಯಿಲ್ಲದೇ ಶೂನ್ಯವಾಗಿದ್ದ ಶ್ರೀ ಉಮಾಮಹೇಶ್ವರ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಕಠಿಬದ್ಧರಾದರು. ಖ್ಯಾತ ಆಗಮ ಶಾಸ್ತ್ರಜ್ಞ ವೇ.ಬ್ರ. ಶ್ರೀ ಕಟ್ಟೆ ಪರಮೇಶ್ವರ ಭಟ್ಟರ ಸೂಚನೆಯಂತೆ , ತಮ್ಮ ತಂದೆ ಚ.ಮೂ.ಈಶ್ವರ ಶಾಸ್ತ್ರಿಗಳ ದೃಢಸಂಕಲ್ಪ, ಊರಿನವರ ಸಹಕಾರದೊಂದಿಗೆ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಒಂದನ್ನು ಸ್ಥಾಪಿಸಿದರು. 2001ರ ಮೇ.4ರಂದು ಕಾಶಿಯಿಂದ ನರ್ಮದಾ ಬಾಣಲಿಂಗವನ್ನು ತಂದು ಪ್ರತಿಷ್ಠಾಪಿಸಿದರು. ಶ್ರೀ ಗೋಕರ್ಣ ಮಂಡಲಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಗೌರವಾಧ್ಯಕ್ಷತೆಯಲ್ಲಿ ಶ್ರೀ ಗುರುಗಳ ಆದೇಶ ಮಾರ್ಗದರ್ಶನದಂತೆ ಈ ಪ್ರದೇಶದಲ್ಲಿ ಲಭ್ಯ ಎಲ್ಲಾ ಸಾನಿಧ್ಯಗಳನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ನಿತ್ಯಪೂಜೆಯ ವ್ಯವಸ್ಥೆ ಮಾಡಲಾಗಿದ್ದು, ತದನಂತರ ಧಾರ್ಮಿಕ ಕಾರ್ಯಕ್ರಮಗಳು, ಜೀರ್ಣೋದ್ಧಾರ ಚಟುವಟಿಕೆಗಳು ಸಾಂಗವಾಗಿ ನಡೆಯತೊಡಗಿತು.


ನಾಳೆ : ಪ್ರಪಂಚದಲ್ಲೇ ಮೊದಲ ಪ್ರಯತ್ನ!

- ಹರೀಶ್ ಕೆ.ಆದೂರು.

0 comments:

Post a Comment