ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಪಂಚದಲ್ಲೇ ಮೊದಲ ಪ್ರಯತ್ನ!

ಇದು ಪುನರ್ ಸೃಷ್ಠಿಯ ಪ್ರಕ್ರಿಯೆ ... ಅದೂ ಸಂಸ್ಕೃತಿಯ ಉಳಿವಿಗಾಗಿ ಈ ಪುನರ್ ಸೃಷ್ಠಿಯ ಕಾರ್ಯ...ಹೌದು ಅದು ಸಾಕಾರವಾದಾಗ ಆಗಿದ್ದೇ ಒಂದು ದಾಖಲೆ... ಅದು ಪ್ರಪಂಚದಲ್ಲೇ ಮೊದಲು ಎಂಬ ಖ್ಯಾತಿಗೆ ಪಾತ್ರವಾಯಿತು...ಶಿಲಾಮಯ ಶಿಥಿಲಾವಸ್ಥೆಯ ದೇಗುಲವನ್ನು ಪೂರ್ಣವಾಗಿ ದಾಖಲಿಸಿ ಪ್ರತೀ ಭಾಗವನ್ನೂ ಬಿಚ್ಚಿ, ಅಡಿಪಾಯವನ್ನು ಸರಿಪಡಿಸಿ ಪುನಃ ಅದೇ ಕಲ್ಲುಗಳನ್ನು ಬಳಸಿ ಯಥಾ ಪ್ರಕಾರ ಪುನರ್ ನಿರ್ಮಾಣ ಮಾಡಿರುವುದು ಪ್ರಪಂಚದ ಮೊದಲ ದೇಗುಲ ಎಂಬ ಹೆಗ್ಗಳಿಕೆ.

ದೇವಾಲಯದ ಜೀರ್ಣೋದ್ಧಾರದ ಈ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಕೈಗೊಳ್ಳಲಾಗಿದ್ದು ಪೂರಕ ಆರ್ಥಿಕ ನೆರವನ್ನು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಭರಿಸಿದೆ.

ಕಾಡಗರ್ಭದೊಳಗೆ ನೆಲೆನಿಂತ ಪಾಳುಬಿದ್ದಿ ಶಿಥಿಲ ಶ್ರೀ ಉಮಾಮಹೇಶ್ವರ ದೇವಾಲಯದ ಇಂಚಿಂಚು ಜಾಗವೂ ಒಂದಲ್ಲೊಂದು ಕೆತ್ತನೆಗಳಿಂದ ಕೂಡಿದೆ. ಒಟ್ಟಾರೆಯಾಗಿ ಇಡೀ ದೇಗುಲ ಹಳೆತಲೆಮಾರಿನ ಶಿಲ್ಪಿಗಳ ಚಾಣಾಕ್ಷತನಕ್ಕೆ ಒಂದು ಮಾದರಿ.

ಪುರಾತನ ಹಾಗೂ ವಾಸ್ತುವೈಭವಕ್ಕೆ ಒಂದು ನಿದರ್ಶನವೆಂಬಂತೆ ನಿಮರ್ಾಣಗೊಂಡ ಈ ದೇಗುಲದ ರಚನೆಯೇ ಒಂದು ವಿಸ್ಮಯ. ವಾಸ್ತುಶಿಲ್ಪ ಮತ್ತು ಜ್ಯೋತಿಷ್ಯಶಾಸ್ತ್ರಗಳ ಅಷ್ಟಮಂಗಲ ಪ್ರಶ್ನೆಯಿಂದ ತಿಳಿದು ಬಂದ ಮಾಹಿತಿಯಂತೆ ಕ್ರಿ.ಶ.10ನೇ ಶತಮಾನಕ್ಕೆ ಸೇರಿದ ದೇಗುಲ ಇದಾಗಿದೆ.

"ಕಲ್ಯಾಣ ಚಾಲುಕ್ಯ ಶೈಲಿ"ಯಲ್ಲಿ ನಿರ್ಮಾಣಗೊಂಡ ಈ ದೇಗುಲ 2400 ಚದರ ಅಡಿಗಳಷ್ಟು ವಿಶಾಲವಾಗಿದೆ. ಹಸಿರು ಕ್ಲೋರೈಸಿಸ್ಟ್ ಶಿಲೆಯಿಂದ ಈ ದೇಗುಲ ನಿರ್ಮಾಣಗೊಂಡಿದೆ. ಸಂಪೂರ್ಣ ಶಿಲಾಮಯವಾದ ಈ ದೇಗುಲದಲ್ಲಿ ಬಹಳಷ್ಟು ಬೃಹತ್ ಗಾತ್ರದ ಏಕಶಿಲೆಗಳನ್ನು ಬಳಸಲಾಗಿದೆ.

ದೇಗುಲದ ಮುಂಭಾಗದಲ್ಲಿರುವ ರಂಗಮಂಟಪದ ಕಂಬಗಳು, ದೇಗುಲದ ಗರ್ಭಗುಡಿಯ ಪ್ರವೇಶ ಧ್ವಾರ, ಗರ್ಭಗುಡಿಯ ಹೊರ ಆವರಣ ಮತ್ತು ಒಳಭಾಗದಲ್ಲಿರುವ ಕಲಾತ್ಮಕ ಕೆತ್ತನೆಗಳು, ಬಾಗಿಲ ಜಂಥಿಯಲ್ಲಿನ ಕೆತ್ತನೆಗಳು, ಕಿಟಿಕಿ, ಗೋಡೆಗಳ ಸೂಕ್ಷ್ಮಕೆತ್ತನೆಗಳು ವಾಸ್ತುಶಿಲ್ಪದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆಯುತ್ತದೆ.


ಇಂತಹ ದೇಗುಲದ ಒಂದೊಂದು ಕಲ್ಲುಗಳನ್ನೂ ಜತನವಾಗಿ ತೆಗೆದಿಟ್ಟು ಸೂಕ್ತ ದಾಖಲೆಗಳನ್ನು ಮಾಡಿ ಮತ್ತೆ ಅದನ್ನು ಮರು ಜೋಡಿಸಿ ದೇಗುಲ ನಿರ್ಮಿಸಿದ ಕಾರ್ಯ ಒಂದು ಅಚ್ಚರಿಯೇ ಸೈ. ಇದೀಗ ಹಳೆಯ ದೇಗುಲ ಮತ್ತೆ ಹೊಸತಾಗಿದೆ. ಅದೇ ವಾಸ್ತುವೈಭವದೊಂದಿಗೆ ಮತ್ತೆ ಕಂಗೊಳಿಸುತ್ತಿದೆ...ನೀವೂ ಒಮ್ಮೆ ಭೇಟಿ ನೀಡಿ...


- ಹರೀಶ್ ಕೆ.ಆದೂರು

1 comments:

BIDIRE said...

ಈ ಕನಸಿನಿಂದ ಒಳ್ಳೆಯ ಲೇಖನ ಸಿಕ್ಕಿದ್ದಕ್ಕೆ ಧನ್ಯವಾದಗಳು ಸಾರ್....ಈ ಕನಸಿನಲ್ಲಿ ಮಾಹಿತಿಪೂರ್ಣ ಲೇಖನ ಮುಂದೆಯೂ ಬರಲಿ..............

ಯಶೋಧರ.ವಿ.ಬಂಗೇರ

Post a Comment