ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
6:03 PM

ರಾಮಾಯಣ ಪ್ರವಚನ

Posted by ekanasu

ರಾಜ್ಯ - ರಾಷ್ಟ್ರ
ಮೈಸೂರು : ಜಗದಾದಿದೇವ, ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಗುಣ ಮಹಿಮೆಗಳನ್ನು ವರ್ಣಿಸುವ ರಾಮಕಥಾ ಇಂದು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅನಾವರಣ ಗೊಂಡಿತು.

ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳಿಂದ ಜಗತ್ತಿನ ಆದಿಕಾವ್ಯ ವಾಲ್ಮೀಕಿ ರಾಮಾಯಣದ ಪ್ರವಚನ ನಡೆಯಿತು. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ತ್ರೇತಾಯುಗದ ರಾಮಾಯಣದ ಮೌಲ್ಯಗಳು ಇಂದಿನ ಸಮಾಜಕ್ಕೆ ಹೇಗೆ ಪೂರಕ ಎಂಬುದನ್ನು ಶ್ರೀಗಳವರು ಪ್ರವಚನದ ಮೂಲಕ ಚಿತ್ರಿಸಿದರು.

ರಾಮನಾಮದ ಜಪದಿಂದ ಅಂತ್ಯಜನಾದ ಬೇಡನೊಬ್ಬ ಮಹರ್ಷಿ ವಾಲ್ಮೀಕಿಯಿಂದ ರಚಿತವಾದ ರಾಮಾಯಣದ ಮಹತ್ವವನ್ನು ತಿಳಿಸಿದರು. ಪ್ರವಚನದೊಂದಿಗೆ ಸಂಗೀತ, ನೃತ್ಯ, ಚಿತ್ರ ಮತ್ತು ರೂಪಕಗಳು ಸೇರಿದ್ದ ಭಕ್ತರ ಮನಸ್ಸಿಗೆ ಮುದ ನೀಡಿತು.ಕೊನೆಯಲ್ಲಿ ವಾಲ್ಮೀಕಿ ಆವಿರ್ಭಾವ ರೂಪಕ ನಡೆಯಿತು. ರಾಮಕಥಾ ಪ್ರವಚನ ಸಮಿತಿ ಮತ್ತು ಮೈಸೂರು ಹವ್ಯಕ ವಲಯ ಕಾರ್ಯಕ್ರಮ ಆಯೋಜಿಸಿತ್ತು..
ಚಿತ್ರ - ವರದಿ: ಗೌತಮ್ ಬಿ.ಕೆ.

0 comments:

Post a Comment