ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಕರಾವಳಿಯ ಬಾಲೆ ದೂರದ ಮುಂಬೈನಲ್ಲಿ ಗಳಿಸಿದ ಹೆಸರು ನಿಜಕ್ಕೂ ಅಚ್ಚರಿ...ಅಷ್ಟೇ ಅದ್ಭುತವೂ ಹೌದು...ಈಕೆ ಬಾಲ ಕಲಾವಿದೆ. ತನ್ನ ಅಮೋಘವಾದ ಕಲಾ ಪ್ರತಿಭೆಯನ್ನು ವಾಣಿಜ್ಯ ನಗರಿ ಮುಂಬೈನ ಹಲವು ಕಡೆಗಳಲ್ಲಿ ಯಶಸ್ವೀ ಪ್ರದರ್ಶನ ನೀಡಿ ಎಲ್ಲರನ್ನೂ ಮೋಡಿ ಮಾಡಿದ್ದಾಳೆ...ಅಚ್ಚರಿ ಮೂಡಿಸಿದ್ದಾಳೆ. ಈಕೆ ಮೂಡಬಿದಿರೆಯ ಮನೆ ಮಗಳು... ಹಿರಿಯರನ್ನೂ ಬೆರಗುಗೊಳಿಸುವ ರೀತಿಯಲ್ಲಿ ಅದ್ಭುತ ಕಲಾ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾಳೆ.


ಮುಂಬೈಯ ವಿವಿಧ ಪ್ರದೇಶಗಳಲ್ಲಿ ಸಂಗೀತ-ನೃತ್ಯ-ಸಂಸ್ಕೃತಿಗಳ ಜಾಗೃತಿ ಅಭಿಯಾನವನ್ನು ನೃತ್ಯ ಪ್ರತಿಭಾ ಪ್ರದರ್ಶನದ ಮೂಲಕ ನಡೆಸಿಕೊಟ್ಟ ಮಂಗಳೂರಿನ ರಂಗಭಾರತಿ ಸಂಸ್ಥೆಯ ಬಾಲಕಲಾವಿದೆ ಅಯನಾ ವಿ. ರಮಣ್. ಈಕೆ ಕಲಾವಿದ,ಪತ್ರಕರ್ತ ಕೆ.ವಿ.ರಮಣ್ ಹಾಗೂ ಮೂಕಾಂಬಿಕಾ ಅವರ ಸುಪುತ್ರಿ.
ಸುಂದರವಾದ ಭರತನಾಟ್ಯ, ಅದ್ಭುತವಾದ ಜ್ಞಾಪಕಶಕ್ತಿ, ಸಂಗೀತ-ಸಂಸ್ಕೃತಿ ವಿಚಾರಗಳ ಅಸಾಧಾರಣ ಪ್ರತಿಭೆಗಳ ಮೂಲಕ ಮುಂಬೈ ಮಹಾನಗರದಲ್ಲಿ ಮಕ್ಕಳಿಗೆ, ಆಶ್ರಮವಾಸಿಗಳಿಗೆ, ಕೊಳೆಗೇರಿ ನಿವಾಸಿಗಳಿಗೆ, ಹೆತ್ತವರಿಗೆ ಮತ್ತು ಕಲಾರಸಿಕರಿಗೆ ವಿಶೇಷ ರಂಜನೆಯೊಂದಿಗೆ ಸ್ಫೂರ್ತಿಯೊದಗಿಸಿದ ಅಯನಾ ವಿ.ರಮಣ್ ಎಲ್ಲರಿಂದ "ಅದ್ಭುತ ಬಾಲಕಿ" ಎಂಬ ಪ್ರಶಂಸೆಗೊಳಗಾಗಿದ್ದು ಸುಳ್ಳಲ್ಲ."ದ ಜರ್ನಿ ಆಫ್ ಡ್ಯಾನ್ಸ್ ಟು ಹೌಸಸ್"ಎಂಬ ಸರಣಿ ಕಾರ್ಯಕ್ರಮ ಮುಂಬೈ ಮಹಾನಗರಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಕಾರ್ಯಕ್ರಮದ ಮಾಧ್ಯಮ ಸಹಭಾಗಿತ್ವವನ್ನು ಈ ಕನಸು.ಕಾಂ ವಹಿಸಿತ್ತು.

0 comments:

Post a Comment