ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಕಾಡಿಗೆ ಹೋಗಿ ಬಿದಿರ ಮಳೆಗಳಿಂದ ಆಯ್ದ ಬಿದಿರುಗಳನ್ನು ತಂದು ಬುಟ್ಟಿ ಹೆಣೆದು ಹೊಟ್ಟೆ ತುಂಬಿಸಿಕೊಳ್ಳುವ ಬಡ ಹಳ್ಳಿಜನರನ್ನು ಬಿದಿರು ಕಡಿಯದಂತೆ,ಬಿದಿರಿನ ಉತ್ಪನ್ನಗಳನ್ನು ಮಾರದಂತೆ ತಾಕೀತು ಮಾಡುವ ಕೆಲವೊಂದು ಹಿತಾಸಕ್ತಿಗಳು ಬೃಹತ್ ಪ್ರಮಾಣದಲ್ಲಿ ಉದ್ಯಮ ನಡೆಸುವವರನ್ನು ಮಾತ್ರ ಹಾಗೇ ಬಿಟ್ಟಿದೆ ಎಂದರೆ ಇಂದಿನ ನಮ್ಮ ಆಡಳಿತವ ವ್ಯವಸ್ಥೆ ಹೇಗಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ...!


ಬಿದಿರು ಇದೊಂದು ಕಾಡು ಬೆಳೆ. ಹುಲ್ಲಿನ ಜಾತಿಗೆ ಸೇರಿದ ಈ ಬಿದಿರು ಇಂದು ಕೇವಲ ಕಾಡು ಬೆಳೆಯಾಗಿ ಉಳಿದಿಲ್ಲ. ಉದ್ಯಾನವನಗಳಲ್ಲಿ, ಮನೆಗಳಲ್ಲಿ ಶೃಂಗಾರದ ಹೆಸರಿನಲ್ಲಿ ಇದನ್ನು ಬೆಳೆಯಲಾಗುತ್ತಿದೆ. ವಂಶ, ವೇಣು,ಯುವಫಲ,ಶತಪರ್ವ ಎಂದು ಸಂಸ್ಕೃತದಲ್ಲಿ ಕರೆಯಲಾಗುತ್ತದೆ. ಬಾಸ್ ಎಂದು ಹಿಂದೂಸ್ತಾನಿಯಲ್ಲಿ ಕರೆಯುತ್ತಾರೆ.ಪೊವಾಸಿ ಕುಟುಂಬಕ್ಕೆ ಸೇರಿದ ಈ ಸಸ್ಯ ಹೂ ಬಿಡುವ ಸಸ್ಯ ಎಂದು ಗುರುತಿಸಿಕೊಂಡಿದೆ. ಜಗತ್ತಿನಲ್ಲಿ 550 ಪ್ರಭೇದಗಳ ಬಿದಿರುಗಳಿವೆ. ಭಾರತದಲ್ಲಿ 136ಜಾತಿಯ ಬಿದಿರುಗಳಿವೆ. ಆದರೆ ನಮಗೆ ಕಂಡುಬರುವುದು ಹೆಚ್ಚಾಗಿ 40 ಜಾತಿಯ ಬಿದಿರುಗಳು.ಬಿದಿರಿನಲ್ಲಿ ಹೂ ಬಿಡುವುದನ್ನು ಕಾಣಬಹುದು. 32ವರ್ಷಗಳ ನಂತರ ಈ ಸಸ್ಯ ಹೂಬಿಡುತ್ತದೆ. ತದನಂತರ 69,120ವರ್ಷಗಳಷ್ಟು ಸುಧೀರ್ಷ ಕಾಲ ಬಾಳಿದ ನಂತರ ಹೂ ಬಿಡಲಾರಂಬಿಸುತ್ತವೆ.
ಹೂ ಬಿಟ್ಟ ನಂತರ ಭತ್ತ ಕಟ್ಟಿಕೊಳ್ಳುತ್ತದೆ. ಇದಾದನಂತರ ಬಿದಿರು ಒಣಗಿಹೋಗುತ್ತದೆ.
ಬಿದಿರು ಸಸ್ಯದಲ್ಲಿ ಮುಳ್ಳಿರುವ ಹಾಗೂ ಇಲ್ಲದ ಎಂಬ ಪ್ರಭೇದಗಳನ್ನು ಗುರುತಿಸಬಹುದು.ಬಿದಿರು ಗುಂಪಾಗಿ ಬೆಳೆಯುವ ಸಸ್ಯ.
ಬಿದಿರನ ಕಂದ ಕಣಿಲೆ ಅಥವಾ ಕಳಲೆ ಉತ್ತಮ ಆಹಾರ. ಇದರಿಂದ ಪಲ್ಯ, ಸಾರು, ಸಾಂಬಾರು, ಗಸಿ, ಉಪ್ಪಿನಕಾಯಿ, ಪತ್ರೊಡೆ ಹೀಗೆ ವಿವಿಧ ವ್ಯಂಜನ ತಯಾರಿಸಲಾಗುತ್ತದೆ.
ಕಳಲೆಯನ್ನು ಆಹಾರವಾಗಿ ಬಳಸುವ ಮೊದಲು ಕನಿಷ್ಠ ಮೂರು ದಿನಗಳ ಕಾಲ ನೀರಿನಲ್ಲಿ ನನೆಸಿಟ್ಟು ಅದರಲ್ಲಿರುವ ವಿಷಕಾರಿ ಅಂಶವನ್ನು ತೆಗೆದು ಹಾಕುವುದು ಕ್ಷೇಮ.ಕಳಲೆಯನ್ನು ಸಂಸ್ಕರಿಸಿದ ಬಳಿಕ ಅದರ ಸಿಪ್ಪೆ ತುಂಡು, ಇತರ ಉಪಯೋಗ ರಹಿತ ಭಾಗಗಳನ್ನು ಜಾನುವಾರುಗಳಿಗೆ ಸಿಗದಂತೆ ಹೂತು ಹಾಕುವುದು ಅತೀ ಅವಶ್ಯಕ.

ಬಿದಿರನ್ನು ಕಾಗದದ ತಯಾರಿಕೆ, ರಯಾನ್ ಬಟ್ಟೆ ತಯಾರಿಕೆ, ಮನೆ ನಿರ್ಮಾಣ, ತೆಪ್ಪ, ದೋಣಿ, ಹಾಯಿ ಪಟಗಳಿಗೆ, ದೀಪದ ಕಂಬ, ಏಣಿ, ತೊಟ್ಟಿಲು, ಕೊಳಲು ತಯಾರಿಕೆ, ಅಟ್ಟಳಿಗೆ, ಕೃಷಿ ಉಪಕರಣ ತಯಾರಿಕೆಗೆ ಬಳಸಲಾಗುತ್ತಿದೆ. ವರ್ಷದ ಹಿಂದೆ ಬಿದಿರು ಹೂ ಬಿಟ್ಟಿದೆ. ಇದೀಗ ಬಿದಿರು ಒಣಗಿ ಹೋಗುತ್ತಿದೆ. ಕಾಡಿನೊಳಗಿರುವ ಬಿದಿರುಗಳಲ್ಲಿ ಪೀಠೋಪಕರಣ,ಫೋನ್ ಸ್ಟಾಂಡ್, ಏಣಿ, ವಿನೂತನ ವಿನ್ಯಾಸದ ಅಲಂಕಾರಿಕಾ ಸಾಧನೆಗಳು, ಪಾಟ್, ಟ್ರೀ, ಬ್ಯಾಗ್, ಚಿತ್ರಪಟ,ಬುಟ್ಟಿ,ಕೊಳಲು, ಮ್ಯಾಟ್ ಹೀಗೆ ಹಲವು ಸಾಧನಗಳು ನಿರ್ಮಾಣವಾಗುತ್ತಿವೆ.

ಕೆಲವೊಂದು ದೊಡ್ಡ ದೊಡ್ಡ ಫಾರ್ಮ್ ಗಳಲ್ಲೂ ಬಿದಿರು ಬೆಳೆಸಿ ವಾಣಿಜ್ಯೋದ್ದೇಶಗಳಿಗೆ ಮಾರಾಟಮಾಡಲಾಗುತ್ತಿದೆ. ಒಟ್ಟಿನಲ್ಲಿ ಒಂದೆಡೆಯಿಂದ ಬಿದಿರನ್ನು ಉಳಿಸುವ ಮಾತು ಕೇಳಿ ಬಂದರೆ ಇನ್ನೊಂದೆಡೆಯಿಂದ ಹಲವು ರೀತಿಯಲ್ಲಿ ಬಿದಿರನ್ನು ನಾಶಮಾಡುವ ಸಂಚು ವ್ಯವಸ್ಥಿತವಾಗಿ ಸಾಗುತ್ತಿವೆ.
ಮಳೆಗಾಲದಲ್ಲಿ ಬಿದಿರ ಮೆಳೆಗಳಲ್ಲಿ ಹುಟ್ಟುವ ಬಿದಿರ ಕಂದಮ್ಮ "ಕಣಲೆ"ಗೆ ಉಳಿಗಾಲವಿಲ್ಲ. ಕಣಲೆಯ ಬುಡಕ್ಕೆ ಕೊಡಲಿಯಿಡುವರ ಸಾಲು ಕಾಣಬಹುದು...ಅಂತೂ ಇಂತೂ ಬಿದಿರಿಗೆ ಉಳಿಗಾಲವಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

- ನಾಡೋಡಿ.

0 comments:

Post a Comment