ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಹಳೆಯದು ಹೊಸತಾಗುತ್ತಿದೆ. ಹಳೆಯ ಪದ್ಧತಿ ಹೊಸ ಫ್ಯಾಶನ್ ಆಗಿ ಪರಿವರ್ತನೆಗೊಳ್ಳುತ್ತಿದೆ. ಇಂದು ಇದು ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯಿಸುತ್ತಿದೆ. ಕವಣೆ ಕಲ್ಲು ಅಥವಾ ಚಾಟಿಬಿಲ್ಲು ಎಂದು ಕರೆಯುವ ಕಲ್ಲೆಸೆಯುವ ಸಾಧನವೂ ಹೊಸ ಗೆಟಪ್ ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.


ಕವಣೆ ಎಂದರೆ ಕಲ್ಲನ್ನು ಬಹುದೂರದ ತನಕ ಎಸೆಯಲು ಉಪಯೋಗಿಸುವ ಒಂದು ಪರಿಕರ. ಆಂಗ್ಲ ಭಾಷೆಯ "ವೈ" ಅಕ್ಷರವನ್ನು ಹೋಲುವ ರೀತಿಯಲ್ಲಿರುವ ಈ ಮರದ ಕಬೆಯ ತೆರೆದ ಅಂಚಿನಲ್ಲಿ ಬಿಗಿಯಲ್ಪಟ್ಟ ರಬ್ಬರ್ ನ ಮಧ್ಯಭಾಗದಲ್ಲಿ ಕಲ್ಲನ್ನಿರಿಸಲು ಅನುಕೂಲಕರ ರೀತಿಯಲ್ಲಿ ಅಗಲವಾದ ಚರ್ಮದ ತುಂಡನ್ನು ಅಳವಡಿಸಲಾಗುತ್ತದೆ.

ಈ ಕವಣೆ ಕಲ್ಲನ್ನು ಬಳಸಿ ಮಾವಿನ ಹಣ್ಣು, ಕಾಯಿಗಳನ್ನು ಕೀಳುವುದು, ಪ್ರಾಣಿಗಳಿಗೆ ಗುರಿಯಿಟ್ಟು ಓಡಿಸುವುದು ಅಥವಾ ಆಟವಾಡುವುದು ಹಳ್ಳಿಗಳಲ್ಲಿ ಇಂದಿಗೂ ರೂಢಿಯಲ್ಲಿದೆ. ಇದೇ ಕವಣೆ ಇಂದು ಹೊಸ ರೂಪ ಪಡೆದುಕೊಳ್ಳುತ್ತಿದೆ. ಈ ವೈ ಅಕ್ಷರಾಕಾರದ ಮರದ ಹಿಡಿಯ ಬದಲಾಗಿ ಇಂದು ಪ್ಲಾಸ್ಟಿಕ್ ಮುಷ್ಠಿಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ. ರಬ್ಬರ್ ನ ಬದಲಾಗಿ ರಬ್ಬರ್ ಪೈಪ್ ಗಳನ್ನು ಅಳವಡಿಸಿ ಹೊಸ ಲುಕ್ ನೀಡಲಾಗಿದೆ.ಹಳ್ಳಿಮನೆಯಲ್ಲಿ ತಯಾರಾಗುತ್ತಿದ್ದ ಚಾಟಿಬಿಲ್ಲು ಇಂದು 20ರುಪಾಯಿಗೆ ಹೊಸ ಗೆಟಪ್ ನೊಂದಿಗೆ ಅಂಗಡಿಗಳಲ್ಲಿ ಮಾರಲ್ಪಡುತ್ತಿದೆ.

2 comments:

Anonymous said...

Gundappa Patil :old is gold

Anonymous said...

Jyoti Shetty :haleya nenapinondige hosatana..... really great.........

Post a Comment