ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ

ಬೆಂಗಳೂರು: ಕನ್ನಡ ಪತ್ರಿಕಾ ರಂಗದಲ್ಲಿ ಮತ್ತೊಂದು ಕರಾಳ ದಿನ ಎದುರಾಗುವುದೇ...? ಒಂದಷ್ಟು ಪತ್ರಕರ್ತರು ಮನೆಗೆ ಹೋಗಬೇಕಾದ ಪರಿಸ್ಥಿತಿ ಮತ್ತೆ ನಿರ್ಮಾಣವಾಗುತ್ತಿದೆಯೇ...? ಹಲವು ಪತ್ರಿಕೆಗಳಿಂದ ಮತ್ತೊಮ್ಮೆ ಪತ್ರಕರ್ತರು ವಲಸೆ ಹೋಗಲಿದ್ದಾರೆಯೇ... ಈ ಎಲ್ಲಾ ಪ್ರಶ್ನೆಗಳು ಮತ್ತೆ ಉದ್ಭವಿಸತೊಡಗಿದೆ. ಕನ್ನಡ ಪತ್ರಿಕಾರಂಗದಲ್ಲಿ ಮತ್ತೊಮ್ಮೆ ಕರಾಳ ದಿನ ಮರುಕಳಿಸುವ ಲಕ್ಷಣಗಳು ಕಾಣಿಸತೊಡಗಿವೆ.


ವಿಜಯವಾಣಿ ಫಾರ್ ಸೇಲ್! ಹೌದು ಈ ಮಾತು ಇಂದು ಮಾಧ್ಯಮ ವಲಯದಲ್ಲಿ ಅತ್ಯಂತ ಹಾಟ್ ಚಚರ್ೆಗೆ ಗ್ರಾಸವಾಗಿದೆ. ಬೆಳ್ಳಂಬೆಳಗ್ಗೆಯೇ ವಿಜಯವಾಣಿ ಪತ್ರಿಕೆಯ ಪತ್ರಕರ್ತರು , ಇತರ ಮಾಧ್ಯಮದ ಮಿತ್ರರು "ಹೌದೇ...ಹೀಗಂತೆ" ಎಂದು ಮಾತನಾಡಿಕೊಳ್ಳತೊಡಗಿದ್ದಾರೆ. ಭದ್ರತೆಯ ಚಿಂತೆ ಇದೀಗ ವಿಜಯವಾಣಿಯ ಮಾಧ್ಯಮ ಸಹೋದರರಿಗೆ ಕಾಡತೊಡಗಿದೆ.

ವಿ.ಆರ್.ಎಲ್.ಸಮೂಹ ಸಂಸ್ಥೆಯ ಅಧ್ಯಕ್ಷ ವಿಜಯ ಸಂಕೇಶ್ವರರು ಅಂದು ವಿಜಯ ಕರ್ನಾಟಕ ಎಂಬ ಪತ್ರಿಕೆಯೊಂದನ್ನು ಕನ್ನಡ ಓದುಗರ ಮಡಿಲಿಗಿಟ್ಟು ಸಾಧನೆ ಮೆರೆದಿದ್ದರು. ಹೌದು ಅದು ಒಂದು ದಾಖಲೆಯಾಗಿಹೋಯಿತು. ಅದಾದ ಕೆಲ ಸಮಯದಲ್ಲೇ ಆ ಪತ್ರಿಕೆಯನ್ನು ರಾಜ್ಯಮಟ್ಟದಲ್ಲಿ ಎಲ್ಲರ ಮನೆ ಮನೆಗಳಿಗೆ ತಲುಪಿಸಲು ಅನುಕೂಲವಾಗುವಂತೆ ಪ್ರಮುಖ ಕೇಂದ್ರಗಳಲ್ಲಿ ಆವೃತ್ತಿ ತೆರೆದರು. ಅದೂ ಒಂದು ಕನ್ನಡ ಪತ್ರಿಕೋದ್ಯಮದಲ್ಲಿ ದಾಖಲೆಯಾಯಿತು.

ಇದಾಗಿ ಕೆಲವೇ ದಿನಗಳಲ್ಲಿ ವಿಜಯ ಟೈಮ್ಸ್ ಎಂಬ ಆಂಗ್ಲ ಪತ್ರಿಕೆಯೂ ಇದೇ ವಿ.ಆರ್.ಎಲ್ ಸಮೂಹದಿಂದ ಹೊರ ಬಂತು. ಕೊಂಚ ಸಮಯದಲ್ಲೇ ಉಷಾ ಕಿರಣ ಎಂಬ ದ್ವಿತೀಯ ಕನ್ನಡ ದಿನಪತ್ರಿಕೆಯನ್ನು ಇದೇ ಸಂಸ್ಥೆ ಹೊರತಂದಿತು. ಅದು ಇಡೀ ಮಾಧ್ಯಮ ಸಮೂಹದಲ್ಲಿ ಮತ್ತೊಂದು ಸಂಚಲನ ಮೂಡಿಸುವಂತಾಯಿತು.

ಅಲ್ಲಿಯ ತನಕವಿದ್ದ ಕನ್ನಡ ಪತ್ರಿಕೆಗಳ ಪೈಕಿ ಉಷಾ ಕಿರಣ ನಿಜಕ್ಕೂ ಒಂದು ಉತ್ತಮ ಪತ್ರಿಕೆಯಾಗಿ ರೂಪುಗೊಂಡಿತ್ತು. ಆ ರೀತಿಯ ವಿಚಾರಗಳು, ವರದಿಗಳು ಒಟ್ಟಾರೆಯಾಗಿ ಮಾಹಿತಿ ಪೂರ್ಣವಾಗಿತ್ತು, ಜನಮಾನಸಕ್ಕೆ ಬೇಕಾದಂತಹ ಪತ್ರಿಕೆಯಾಗಿಯೂ ರೂಪುಗೊಂಡಿತ್ತು. ಅದರ ಜೊತೆಗೆ ವಿದ್ಯಾರ್ಥಿ ಸಂಗಾತಿ ಎಂಬ ಮತ್ತೊಂದು ಕನ್ನಡ ಪತ್ರಿಕೆಯೂ ಇದೇ ಸಮೂಹದಿಂದ ಪ್ರಾರಂಭಗೊಂಡಿತು. ಭಾವನ, ನೂತನ ಎಂಬ ವಾರ ಹಾಗೂ ಮಾಸಿಕಗಳೂ ವಿ.ಆರ್.ಎಲ್ ಸಮೂಹದ ಕೊಡುಗೆಗಳಾಗಿದ್ದವು. ಆದರೆ ಅವು ಹೆಚ್ಚು ಸಮಯ ಉಳಿದುಕೊಂಡಿಲ್ಲ.

ಆದರೆ ದುರದೃಷ್ಠವಶಾತ್ ವಿ.ಆರ್.ಎಲ್ ಸಮೂಹದ ಪತ್ರಿಕೆಗಳನ್ನು ಟೈಂಸ್ ಗ್ರೂಫ್ ಗೆ ಮಾರಾಟಮಾಡಲಾಯಿತು. ವಿಜಯ ಸಂಕೇಶ್ವರರು ಕಟ್ಟಿ ಬೆಳೆಸಿದ ಪತ್ರಿಕೆಗಳು ಟೈಂಸ್ ಮಾಲಕತ್ವಕ್ಕೆ ಮಾರಾಟವಾದವು. ಉಷಾ ಕಿರಣ, ವಿಜಯ ಟೈಂಸ್, ವಿದ್ಯಾರ್ಥಿ ಸಂಗಾತಿ ಈ ಎಲ್ಲಾ ಪತ್ರಿಕೆಗಳು ಹಂತ ಹಂತವಾಗಿ ನಿಂತು ಹೋದವು. ಟೈಂಸ್ ಗ್ರೂಪ್ ವಿಜಯ ಕರ್ನಾಟಕವನ್ನಷ್ಟೇ ಉಳಿಸಿಕೊಂಡಿತು. ಉಷಾಕಿರಣ ಇಂದಿಗೂ ಕನ್ನಡ ಪತ್ರಿಕಾ ರಂಗದಲ್ಲಿ ಮರೆಯಾದರೂ ಮರೆಯಲಾಗದ ಪತ್ರಿಕೆ ಎನಿಸಿಕೊಂಡಿತು.

ಇರಲಿ ಇದೆಲ್ಲಾ ಹಳೇ ಕಥೆ. ವಿಜಯ ಕರ್ನಾಟಕ ಸೇಲ್ ಆದ ನಂತರ ಸುಮಾರು ಐದಾರು ವರುಷ ಮಾಧ್ಯಮ ಕೈಯಲ್ಲಿಲ್ಲದೆ ಚಡಪಡಿಸುತ್ತಿದ್ದ ಸಂಕೇಶ್ವರರು ಮತ್ತೆ ಹೊಸ ಪತ್ರಿಕೆಯೊಂದನ್ನು ಆರಂಭಿಸಿದರು. ಸಂಕೇಶ್ವರರ ಹೊಸ ಪತ್ರಿಕೆಯ ಕುರಿತಾಗಿ ಸಾಕಷ್ಟು ನಿರೀಕ್ಷೆಗಳು ಚರ್ಚೆಗಳು ಮಾಧ್ಯಮ ವಲಯದಲ್ಲಿ ಕೇಳಿಬರುತ್ತಿದ್ದವು. ಆರು ಆವೃತ್ತಿಗಳಲ್ಲಿ ವಿಜಯ ವಾಣಿ ಎಂಬ ನೂತನ ಪತ್ರಿಕೆ ಹೊರಬಂದಿತು. ಆದರೆ ವಿಜಯ ವಾಣಿ ಪತ್ರಿಕೆ ಹೇಳುವಂತಹ ಯಶಸ್ಸು ಸಾಧಿಸಲಿಲ್ಲ.ಎಷ್ಟೆಂದರೆ ವಿಜಯವಾಣಿ ಪತ್ರಿಕೆಗೆ ಹಲವು ಕಡೆಗಳಲ್ಲಿ ಏಜೆನ್ಸಿಗಳೇ ದೊರೆತಿಲ್ಲ...! ಆ ರೀತಿಯ ಯಶಸ್ವೀ ಪತ್ರಿಕೆಯಾಗಿ ವಿಜಯ ವಾಣಿ ಮೂಡಿಬರಲೂ ಇಲ್ಲ.

ಏತನ್ಮಧ್ಯೆ ವಿಜಯ ವಾಣಿಯನ್ನು ಸಂಕೇಶ್ವರರು ಮಾರುತ್ತಾರಂತೆ ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೇ ಹಿಂದೂಸ್ಥಾನ್ ಟೈಂಸ್ ಜೊತೆಗೆ ಮಾತುಕತೆಯಾಗಿದ್ದು ಬಾಯಿಮಾತಿನ ಒಡಂಬಡಿಕೆಯಾಗಿದೆ ಎಂಬುದು ಇದೀಗ ಎಲ್ಲೆಡೆ ಪ್ರಚಾರ ಪಡೆಯುತ್ತಿದೆ. ಈ ಮಧ್ಯೆ ವಿಜಯ ಸಂಕೇಶ್ವರರ ವಿಜಯ ವಾಣಿ ಪತ್ರಿಕೆಯಲ್ಲೇ ಜಾಹೀರಾತೂ ಕಂಡು ಬಂದಿದೆ. ಮತ್ತೊಂದು ಕನ್ನಡ ಪತ್ರಿಕೆ ಆರಂಭಿಸುತ್ತಿದ್ದೇವೆ ಎಂಬುದಾಗಿ. ಇದೇ ನೋಡಿ ಈಗ ಬಹು ಚರ್ಚೆಗೆ ಗ್ರಾಸವಾಗಿರುವ ಅಂಶ. ಒಂದೊಮ್ಮೆ ಸಂಕೇಶ್ವರರು ವಿಜಯ ವಾಣಿಯನ್ನು ಮಾರಿದರೆ ನಮ್ಮ ಗತಿಯೇನು...?

ಈ ಹೆದರಿಕೆ ಇಂದು ವಿಜಯವಾಣಿಯ ಅನೇಕ ನೌಕರರಿಗೆ ಆಗಿದೆ. ವಿಜಯ ವಾಣಿಯನ್ನು ಮಾರುತ್ತಾರೆಯೇ...ಅಥವಾ ಇನ್ನು ಹೊಸತಾಗಿ ಪ್ರಾರಂಭಗೊಳ್ಳಲಿರುವ ಪತ್ರಿಕೆಯನ್ನು ಮಾರುತ್ತಾರೆಯೇ...? ಎಂಬುದು ಮತ್ತೊಂದು ಚರ್ಚೆ . ಅಷ್ಟಕ್ಕೂ ಹಿಂದೂ ಸ್ಥಾನ್ ಟೈಂಸ್ ಪತ್ರಿಕೆಯ ಆಡಳಿತ ವರ್ಗ ಹೇಳಿದೆಯಂತೆ 2ಲಕ್ಷ ಪ್ರಸರಣ ಸಂಖ್ಯೆಯನ್ನು ದಾಟಿದ ತಕ್ಷಣ ನಿಮ್ಮ ಪತ್ರಿಕೆಯನ್ನು ನಾವು ಕೊಂಡುಕೊಳ್ಳುತ್ತೇವೆ ಎಂಬುದಾಗಿ... ಹೀಗಾಗಿ ಇದೀಗ ಮಂಗಳೂರು ಸೇರಿದಂತೆ ವಿಜಯ ವಾಣಿಯ ಇತರ ಆವೃತ್ತಿಗಳಲ್ಲಿ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವ ಕಸರತ್ತು ಸಾಗುತ್ತಿದೆ. ಅದಕ್ಕಾಗಿ ಹೆಚ್ಚುವರಿ ಪರಿಣಿತರನ್ನು ಸಂಸ್ಥೆಗೆ ಸೇರಿಸಲಾಗಿದೆಯಂತೆ.... ಅಂತೂ ಇಂತು ವಿಜಯ ಸಂಕೇಶ್ವರರು ಪತ್ರಿಕೆಯನ್ನು ಮಾಡಿ ಮಾರಾಟಮಾಡುತ್ತಾ ಒಂದು ಹೊಸ ಉದ್ಯಮವನ್ನು ನಡೆಸುತ್ತಿದ್ದಾರೆ.

ಪ್ರಸ್ತುತ ವಿಜಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಹೊಸ ಪೇಪರ್ ಗೆ ತಾವೂ ಅರ್ಜಿ ಹಾಕಬೇಕೇ...? ಎಂಬ ಸಂದೇಹವೋ ಅಥವಾ ಸಂಕಟವೋ ಮೂಡತೊಡಗಿದೆ. ಇದು ವಿಜಯ ವಾಣಿಯ ಮಾಧ್ಯಮ ಮಿತ್ರರ ಅವಸ್ಥೆಯಾದರೆ ಇತರೆ ಮಾಧ್ಯಮದ ಪ್ರಮುಖರಿಗೆ ವಿಜಯ ಸಂಕೇಶ್ವರರು ಮತ್ತೊಂದು ಹೊಸ ಪೇಪರ್ ಹೊರ ತರುವುದಾದರೆ "ನಮ್ಮ ಕಚೇರಿಯಿಂದ ಇನ್ನೆಷ್ಟು ಜನರನ್ನು ಅವರು ಎಳೆದುಕೊಳ್ಳುತ್ತಾರೋ" ಎಂಬ ಭಯ ಮೂಡತೊಡಗಿದೆ.ಒಟ್ಟಿನಲ್ಲಿ ಅನಾರೋಗ್ಯಕರ ಪೈಪೋಟಿ ಕನ್ನಡದ ಮುದ್ರಣ ಮಾಧ್ಯಮದಲ್ಲಾಗುತ್ತಿದೆ.

1 comments:

Shiva kumar nidgunda said...

Yavaga ViJAYAKARNATAKA Prarambhavayithu RECOMENDATION mele varadhigararanna thegedukolluva prakriye alli nadedittu. idarinda arthavagutte Nithi Niyamagalillade pathrike prarambhavagide embudu. Eiga kooda VIJAYAVANI pathrikeyalli yavude INTERVIEW illade ade prakriye nadedide. ondu drushtiyinda nodidare VIJAYA SANKESHWAR avaru not a eligible person to lead the paper field.

Post a Comment