ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಜೀವವಿಜ್ಞಾನ ವಿಭಾಗ ಮತ್ತು ಮಂಗಳೂರು ವಿವಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೇತ್ರತ್ವದಲ್ಲಿ 'ಪ್ಲಾಸ್ಟಿಕ್ ಮಾಲಿನ್ಯದಿಂದ ಪರಿಸರ ಉಳಿಸಿ' ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಟಿ. ಸಿ. ಶಿವಶಂಕರ ಮೂರ್ತಿ ಉದ್ಛಾಟಿಸಿದರು. ಭೂಮಿಯ ಮೇಲಿರುವ ಜೀವಿಗಳೆಲ್ಲವೂ ಒಂದಕ್ಕೊಂದು ಪೂರಕವಾಗಿ ಬದುಕುತ್ತವೆ. ನಿಸರ್ಗದ ಈ ಸಹಬಾಳ್ವೆಯಲ್ಲಿ ಮಾನವನು ಒಂದು ಅಂಗವಾಗಿದ್ದರೂ ಕೂಡ, ತನ್ನ ಸ್ವಾರ್ಥ ಸಾಧನೆಯಿಂದಾಗಿ ಇತರ ಜೀವಿಗಳಿಗೆ ಕಂಟಕಪ್ರಾಯವಾಗಿದ್ದಾನೆ. ಪ್ರತಿಯೊಂದು ಪ್ರಭೇದವು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಅದರದ್ದೇ ಆದ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದರು.


'ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರ ಉಳಿಸಿ' ಆಯೋಜಿಸಿದ ಈ ಕಾರ್ಯಕ್ರಮವು ವಿಶ್ವಸಂಸ್ಥೆಯ ಯು.ಎನ್.ಇ.ಪಿ (ಯುನೈಟೆಡ್ ನೇಶನ್ಸ್ ಎನ್ವಾರಾನ್ಮೆಂಟ್ ಪ್ರೋಗ್ರಮ್) ಇದರೊಂದಿಗೆ, ಈ ವರ್ಷದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ನೋಂದಾವಣಿಯಾಗಿರುತ್ತದೆ.

ಈ ಸಂದರ್ಭದಲ್ಲಿ ಪರಿಸರದ ಸಂರಕ್ಷಣೆ ಬಗ್ಗೆ ಜನಜಾಗೃತಿ ಮತ್ತು ಪ್ಲಾಸ್ಟಿಕ್ ಮಾಲಿನ್ಯದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಕರಪತ್ರಗಳನ್ನು ಬಿಡುಗಡೆ ಮಾಡಿ ಸಾರ್ವಜನಿಕರಿಗೆ ಹಂಚಲಾಯಿತು. ಮಂಗಳಗಂಗೋತ್ರಿ ವಿಶ್ವಮಂಗಳ ಶಾಲೆಯ ವಿಖ್ಯಾತ್ ಮತ್ತು ಹರೇಕಳದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸೌಜನ್ಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪ್ಲಾಸ್ಟಿಕ್ನಿಂದ ಕ್ಯಾಂಪಸನ್ನು ಶುಚಿಗೊಳಿಸುವ ಕಾರ್ಯದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಪ್ರಶಾಂತ ನಾಯಕ್ ಸ್ವಾಗತಿಸಿದರು. ಕುಲಸಚಿವರಾದ ಪ್ರೊ. ಕೆ. ಚಿನ್ನಪ್ಪ ಗೌಡ, ವಿಜ್ಞಾನ ಮತ್ತು ತಂತ್ರಜ್ಞಾನದ ಡೀನ್ ಪ್ರೊ. ಎಮ್. ರಾಜಶೇಖರ್, ಸ್ಕೌಟ್ ಶಿಕ್ಷಕರಾದ ಜೇಸಿ ತ್ಯಾಗಂ, ಪುರುಷೋತ್ತಮ್ ಮತ್ತು ದಿಲೀಪ ಕುಮಾರ್, ಮತ್ತಿತರು ಉಪಸ್ಥಿತರಿದ್ದರು.

0 comments:

Post a Comment