ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಜಗವೆಂಬ ಸುಂದರ ಸ್ವಚ್ಚಂದ ಅಂಗಳದಲ್ಲಿ
ಮನುಜನ ಬದುಕೆಂಬುದು
ಚುಕ್ಕಿ ರಂಗವಲ್ಲಿ...


ಹಲವಾರು ಚುಕ್ಕಿಗಳು
ಅಕ್ಕಪಕ್ಕ,ಹಿಂದೆ ಮುಂದೆ,ಮೇಲೆ ಕೆಳಗೆ
ಸಂಬಂಧದ ಎಳೆಯೊಂದು ಬೇಕು
ಇವುಗಳ ಜೋಡಣೆಗೆ.

ಪ್ರತೀ ಎಳೆಯಲ್ಲು ಒಂದೊಂದು ಅರ್ಥ
ಒಂದೊಂದು ಭಾವ...
ಪ್ರತೀ ಚುಕ್ಕಿಯದೂ ಒಂದೊಂದು ಪಾತ್ರ

ಒಂದೊಂದು ಸ್ವಭಾವ...
ಯಾವುದೋ ಚುಕ್ಕಿಗೆ
ಇನ್ಯಾವುದೋ ಚುಕ್ಕಿಯ ನಂಟು
ಅಗೋಚರ ಸೂತ್ರವೊಂದರ

ಬಿಡಿಸಲಾಗದ ಗಂಟು
ಅಂಕು - ಡೊಂಕು ನೇರ ಎಳೆಗಳು
ಎಲ್ಲಿಂದಲೋ ನುಸುಳಿ ಬಂದು
ಪ್ರೀತಿ ಪ್ರೇಮ ಮಮತೆ

ವಾತ್ಸಲ್ಯ ಸ್ನೇಹವೆಂದು
ಚುಕ್ಕಿ ಚುಕ್ಕಿಯನ್ನು ಬಂಧಿಸಿದಾಗ
ಮೂಡುವುದೊಂದು ಆಕಾರ
ಅದುವೇ ಸುಂದರ ಬದುಕಿನ

ಬಣ್ಣದ ಚಿತ್ತಾರ
ಪ್ರತಿಯೊಂದು ಚುಕ್ಕಿಗೂ
ಪ್ರತಿಯೊಂದು ಎಳೆಗೂ
ಇರುವುದು ಬೆಲೆಯಿಲ್ಲಿ

ಜೀವ - ಭಾವದ ಬೆಸುಗೆಯಿಂದ ಮೂಡುವುದು
ಬದುಕಿನ ರಂಗವಲ್ಲಿ
ಒಂದೇ ಒಂದು ಚುಕ್ಕಿ
ಯಾವುದೇ ಎಳೆ ತಪ್ಪಿದರೂ ಸಾಕು

ಅರ್ಥ ಕಳೆದುಕೊಂಡು ರಂಗವಲ್ಲಿ
ವ್ಯರ್ಥವಾಗುವುದು ಬದುಕು.

- ದಿವ್ಯಾ ಜಿ.ಎನ್.ರಾವ್

1 comments:

Anonymous said...

chukkiya chittaravanna padagalalli hididitta nimma kavite chennagide. Prakash B. Jalahalli

Post a Comment